Bigg Boss: ಚೈತ್ರಾ ವೇಸ್ಟ್‌, ಈ ಡವ್‌ಗಳನ್ನ ಬಿಟ್ಟು ಮನೆಗೆ ಹೋಗೋದು ಒಳ್ಳೇದು: ಹೀಗಂದಿದ್ದು ಯಾರು?

ಬಿಗ್‌ಬಾಸ್‌ ಮನೆಯಲ್ಲಿ ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ ವಿರುದ್ಧ ಮನೆಮಂದಿ ತೊಡೆ ತಟ್ಟಿದ್ದಾರೆ. ಸ್ಪರ್ಧಿಗಳು ಹಾಗೂ ಕಿಚ್ಚ ಸುದೀಪ್‌ ಕೈಯಿಂದಲೂ ಚೈತ್ರಾ ಅವರಿಗೆ ಫುಲ್‌ ಕ್ಲಾಸ್‌ ಕೂಡ ಆಗಿದೆ. ಇನ್ನು ನಿಮ್ಮ ಪ್ರಕಾರ ಯಾವ ಸ್ಪರ್ಧಿ ಈ ಮನೆಗೆ ಅವಶ್ಯಕತೆ ಇಲ್ಲ ಎಂದು ಸುದೀಪ್ ಕೇಳಿದಾಗ ಮನೆಯಲ್ಲಿದ್ದ ಸ್ಪರ್ಧಿಗಳೆಲ್ಲ ಚೈತ್ರಾ ಹೆಸರನ್ನೇ ಹೇಳಿದ್ದಾರೆ.

ಅಲ್ಲದೆ ಟಾಸ್ಕ್‌ನಂತೆ ಡಸ್ಟ್‌ಬಿನ್‌ ಒಳಗೆ ಯಾರು ಬೇಡ ಎನ್ನುವ ಕಸದ ಮೂಟೆ ಹಾಕುವಂತೆ ಹೇಳಿದ್ದರು. ಅದರಂತೆ ಎಲ್ಲರೂ ಚೈತ್ರಾ ಅವರ ಹೆಸರೇಳಿ ಕಸದ ಬುಟ್ಟಿ ತುಂಬಿಸಿದ್ದಾರೆ. ಇದರಿಂದ ಚೈತ್ರಾ ಫುಲ್‌ ಶಾಕ್‌ ಕೂಡ ಆಗಿದ್ದಾರೆ. ಬಿಗ್‌ಬಾಸ್‌ ಸೂಪರ್‌ ಸಂಡೇ ಶೋನಲ್ಲಿ ಸುದೀಪ್‌ ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ಕೊಟ್ಟರು.

Kannada Bigg Boss Contestant Chaitra Kundapura Faces Criticism From Kiccha Sudeep

ನಿಮ್ಮ ಪ್ರಕಾರ ಬಿಗ್‌ಬಾಸ್‌ ಮನೆಗೆ ಯಾರು ಬೇಕಾಗಿಲ್ಲ ಎಂದು ಅವರ ಫೋಟೋ ಕಸದ ಮೂಟೆಗೆ ಅಂಟಿಸಿ ಡಸ್ಟ್‌ಬಿನ್‌ಗೆ ಹಾಕಿ ಎಂದು ಹೇಳಿದ್ರು. ಅದರಂತೆ ಮನೆಯಲ್ಲಿದ್ದ ಹಲವರು ಚೈತ್ರಾ ಅವರು ಈ ಮನೆಗೆ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯೊಬ್ಬರೂ ಒಂದೊಂದು ಕಾರಣ ಕೂಡ ಕೊಟ್ಟಿದ್ದಾರೆ.

ಚೈತ್ರಾ ಅವರು ಮುಖವಾಡ ಕಳಚುತ್ತೇನೆ ಎನ್ನುತ್ತಾರೆ, ಆದ್ರೆ ಅವರೇ ಒಂದು ವೇಷ ತೊಟ್ಟಿದ್ದಾರೆ. ಆ ವೇಷದಲ್ಲೇ ಆಟ ಆಡುತ್ತಿದ್ದಾರೆ ಎಂದು ಐಶ್ವರ್ಯಾ ಕಾರಣ ಕೊಟ್ಟಿದ್ದಾರೆ. ಚೈತ್ರಾಗೆ ಕಳಪೆ ಬಂದ ಕೂಡಲೇ ಹುಷಾರಿಲ್ಲ ಅಂತ ಕಾರಣ ಕೊಡ್ತಾರೆ, ವೀಕೆಂಡ್‌ನಲ್ಲಿ ಫುಲ್‌ ಡಲ್‌ ಆಗುವ ಅವರು ಮತ್ತೆ ಮರುದಿನದಿಂದ ಆಕ್ಟಿವ್‌ ಆಗ್ತಾರೆ. ಇದು ಹೇಗೆ ಎಂದು ನಮಗೂ ಅರ್ಥವಾಗುತ್ತಿಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ.

Kannada Bigg Boss Contestant Chaitra Kundapura Faces Criticism From Kiccha Sudeep

ಇನ್ನು ಹನುಮಂತು ಕೂಡ ಚೈತ್ರಾ ಅವರ ಹೆಸರೇಳಿದ್ದು, ಮಾತು ಮನೆ ಕೆಡಿಸಿತು.. ತೂತು ಒಲೆ ಕೆಡಿಸಿತು ಅಂದಂಗೆ ಚೈತ್ರಕ್ಕ ಈ ಮನೇನ ಕೆಡಿಸಿದ್ದಾಳೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ಇನ್ನು ಖಡಕ್‌ ರಜತ್‌ ಕೂಡ ನೇರವಾಗಿ ಚೈತ್ರಾ ಅವರ ಬಗ್ಗೆ ಮಾತನಾಡಿದ್ದು, ಈ ಡವ್‌ಗಳನ್ನ ಮಾಡೋದು ಬಿಟ್ಟು ಸುಮ್ಮನೆ ಮನೆ ಕಡೆಗೆ ಹೋಗೋದು ಒಳ್ಳೇದು ಎಂದು ಸಲಹೆ ಕೊಟ್ಟಿದ್ದಾರೆ.

ಚೈತ್ರಾ ಅವರಿಗೆ ಸತತವಾಗಿ ಕಳಪೆ ಪಟ್ಟ ಕೊಡುತ್ತಿರುವ ಕಾರಣ ನಿನ್ನೆಯ ಸಂಚಿಕೆಯಲ್ಲಿ ಚೈತ್ರ ಫುಲ್‌ ಕೋಪ ಹೊರಹಾಕಿದ್ದಾರೆ. ಕೊನೆಗೆ ಕಣ್ಣೀರು ಹಾಕುತ್ತಾ ಸುದೀಪ್‌ ಅವರೊಂದಿಗೆ ತಮ್ಮ ಸಂಕಟ ಕೂಡ ಹಂಚಿಕೊಂಡಿದ್ದಾರೆ. ಸುದೀಪ್‌ ಕೂಡ ಚೈತ್ರಾ ಅವರ ಆಟದ ಬಗ್ಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕಳೆದ ಬಾರಿ ಉಸ್ತುವಾರಿ ಹೇಗಿತ್ತು ಎಂದು ಸುದೀಪ್‌ ಕೇಳಿದ್ದು, ಇದಕ್ಕೆ ಚೈತ್ರಾ ಅವರ ಕೋಪ, ಕಣ್ಣೀರು, ಆಕ್ರೋಶದ ಮೂಲಕ ಉತ್ತರ ನೀಡಿದ್ದಾರೆ.

ಚೈತ್ರಾರ ವರ್ತನೆಗೆ ಸುದೀಪ್‌ ಕೂಡ ಕೋಪ ಮಾಡಿಕೊಂಡು ವೇದಿಕೆಯಲ್ಲೇ ಗದರಿದ್ದಾರೆ. ಈ ರೀತಿ ನನ್ನತ್ರ ಮಾತನಾಡಬೇಡಿ ಎಂದೂ ವಾರ್ನಿಂಗ್‌ ಕೊಟ್ಟಿದ್ದಾರೆ. ಸದ್ಯ ಈ ವಾರದ ಎಲಿಮಿಷನೇಷನ್‌ ಹತ್ತಿರ ಬರುತ್ತಿದ್ದು, ಮನೆಮಂದಿಯೂ ಚೈತ್ರಾ ಅವರನ್ನೇ ಹೊರಗೆ ಕಳಿಸಲು ಸೂಚಿಸಿದ್ದಾರೆ. ಹಾಗಾಗಿ ಈ ವಾರ ಚೈತ್ರಾ ಹೊರಬರೋದು ಪಕ್ಕಾ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+