Nithya Menen: ಲವ್ & ಮದುವೆ ಬಗ್ಗೆ ಮಾತನಾಡಿದ ಕನ್ನಡತಿ, ಬಹುಭಾಷಾ ನಟಿ ನಿತ್ಯಾ ಮೆನನ್!
Nithya Menen: ಕನ್ನಡತಿ ಹಾಗೂ ಬಹಭಾಷೆ ನಟಿ ನಿತ್ಯಾ ಮೆನನ್ ಅವರು ಮದುವೆ ಮತ್ತು ಪ್ರೀತಿ ವಿಚಾರ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಾನು ಮಲಯಾಳಿ ಅಲ್ಲ ಕನ್ನಡತಿ ಅಂತಲೇ ಹಲವು ಇಂಟರ್‌ವ್ಯೂಗಳಲ್ಲಿ ನಟಿ ನಿತ್ಯಾ ಮೆನನ್ ಅವರು ಇತ್ತೀಚಿನ ದಿನಗಳಲ್ಲಿ ಹೇಳಿಕೊಂಡು ಬಂದಿದ್ದಾರೆ. ಇದೀಗ ಅವರು ಮದುವೆ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಕನ್ನಡತಿ ನಿತ್ಯಾ ಮೆನನ್ ಅವರು, ನಾನು ಕನ್ನಡತಿ & ಬೆಂಗಳೂರು ಅಂದರೆ ನನ್ನ ಮನೆ. ಬೆಂಗಳೂರಿ ಈ ರೀತಿ ಇರಲಿಲ್ಲ ತುಂಬಾ ಶಾಂತವಾಗಿ ಇತ್ತು ಎಂದು ಹೇಳಿಕೊಂಡ ವಿಡಿಯೋ ವೈರಲ್ ಆಗಿತ್ತು. ಇದೀಗ ದಾಂಪತ್ಯ ಜೀವನದ ಬಗ್ಗೆ ನಿತ್ಯಾ ಅವರು ಮೌನ ಮುರಿದಿದ್ದಾರೆ.
ನಿತ್ಯಾ ಮೆನನ್ ಅವರು ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ಅವರು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ನಿತ್ಯ ಮೆನನ್ ಅವರಿಗೆ ಇದೀಗ 37 ವರ್ಷವಾಗಿದೆ. ನಿತ್ಯ ಅವರಿಗೆ ಇನ್ನೂ ವಿವಾಹವಾಗಿಲ್ಲ. ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಂತೆ ಇಲ್ಲ. ಇದೀಗ ಅವರು ಮದುವೆ ಹಾಗೂ ಪ್ರೇಮ ವಿವಾಹ ಸೇರಿಂದತೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಯಾವ ಕಾರಣಕ್ಕೆ ಮದುವೆ ಆಗಿಲ್ಲ ಎನ್ನುವುದನ್ನೂ ಅವರು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ.

ನಟಿ ನಿತ್ಯಾ ಮೆನನ್ ಅವರು ಇದೀಗ ತಲೈವನ್ ತಲೈವಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹೀರೋ ಆಗಿ ನಟ ವಿಜಯ್ ಸೇತುಪತಿ ಹಾಗೂ ಹೀರೋಹಿನ್ ಆಗಿ ನಟಿ ನಿತ್ಯಾ ಮೆನನ್ ಅವರು ನಟಿಸಿದ್ದಾರೆ. ಗಂಭೀರ ಹಾಗೂ ಹಾಸ್ಯದ ಸನ್ನಿವೇಶಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯಗಳು ನಡೆದಿದ್ದು. ಅದರಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ನಾನು ಕೇರಳದವಳಲ್ಲ. ನಾನು ಬೆಂಗಳೂರಿನವಳು ಎಂದು ನಿತ್ಯಾ ಅವರು ಇತ್ತೀಚೆಗೆ ಹೇಳಿದ್ದರು. ಈ ಸಿನಿಮಾದ ಪ್ರಚಾರದ ಭಾಗವಾಗಿ ಶೋವೊಂದರಲ್ಲಿ ಭಾಗವಹಿಸಿದ್ದ ಅವರು ಪ್ರೇಮ - ಬ್ರೇಕ್ ಅಪ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮೌನ ಮುರಿದಿದ್ದಾರೆ.
ನಾನು ನಾನು ಚಿಕ್ಕವಳಿದ್ದ ಸಂದರ್ಭದಲ್ಲಿ ಜೀವನ ಸಂಗಾತಿಯನ್ನು ಹುಡುಕುವುದು ತುಂಬಾ ಮುಖ್ಯ ಎಂದೇ ಭಾವಿಸಿದ್ದೆ. ಅಷ್ಟು ಮಾತ್ರವಲ್ಲ ಜೀವನದಲ್ಲಿ ಸಂಗಾತಿ ಇರಲೇಬೇಕು ಎನ್ನುವುದು ನನ್ನ ಕಲ್ಪನೆಯಾಗಿತ್ತು. ಆದರೆ, ವರ್ಷಗಳು ಉರುಳಿದಂತೆ ಈ ವಿಚಾರದಲ್ಲಿ ನನ್ನ ಆಲೋಚಯೇ ಬದಲಾಗಿ ಹೋಗಿದೆ. ಜೀವನದ ಸಂಗಾತಿ ಅಥವಾ ಪಾರ್ಟ್ನರ್ ಆಗಿ ಯಾರಾದರೂ ಸಿಕ್ಕರೆ ಓಕೆ ಖುಷಿಯೇ ಒಂದೊಮ್ಮೆ ಸಿಗಲಿಲ್ಲ ಎಂದಾರೂ ಖುಷಿ. ಆ ವಿಚಾರಗಳನ್ನು ನೆನಪಿಸಿಕೊಂಡು ಕೊರಗುತ್ತಾ ಕೂರುವುದಿಲ್ಲ ಅಂತಾ ಹೇಳಿದ್ದಾರೆ.
ಜೀವನದ ಪ್ರತಿ ಹಂತದಲ್ಲೂ ನನಗೆ ಹಾರ್ಟ್ ಬ್ರೇಕ್ ಆಗಿತ್ತು. ಇದರಿಂದ ಪ್ರತಿ ಬಾರಿ ಮನಸ್ಸು ಒಡೆದಾಗ ಜನರ ಉದ್ದೇಶಗಳ ಬಗ್ಗೆ ಅವರು ಯಾಕೆ ಆ ರೀತಿ ವರ್ತಿಸುತ್ತಾರೆ ಎನ್ನುವ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ನಾನು ಹುಡುಕುತ್ತಿರುವುದೇ ತಪ್ಪು ಅಂತಾ ನನಗೆ ಅರ್ಥ ಮಾಡಿಕೊಳ್ಳುವುದಕ್ಕೆ ಅದೇ ಸಹಾಯವಾಗಿದೆ ಅಂತಾ ಹೇಳಿದ್ದಾರೆ. ಈ ಮೂಲಕ ಪ್ರೀತಿಸಿದ್ದೆ ಆದರೆ ಅದು ಕೈಗೂಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಎಲ್ಲಿಯೂ ನಾನು ಲವ್ ಮಾಡುತ್ತಿದ್ದ ಬ್ರೇಕ್ ಅಪ್ ಆಗಿತ್ತು ಎನ್ನುವ ವಿಚಾರಗಳ ಬಗ್ಗೆ ಅವರು ಮಾತನಾಡಿಲ್ಲ.
ಕನ್ನಡದಲ್ಲೂ ನಟಿಸಲಿ: ಇನ್ನು ನಿತ್ಯಾ ಮೆನನ್ ಅವರು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಅವರು ಕನ್ನಡದ ಮೂಲಕವೇ ಅವರು ಸಿನಿಮಾ ರಂಗವನ್ನು ಪ್ರವೇಶಿಸಿದ್ದಾರೆ. 2006ರಲ್ಲಿ ಬಿಡುಗಡೆಯಾದ 7 o' clcok ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಜೋಶ್, ಮೈನಾ,ಕೋಟಿಗೊಬ್ಬ 2 ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಮತ್ತೆ ಕನ್ನಡದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಆದರೆ ಈ ಬಗ್ಗೆಯೂ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಾತನಾಡಿಲ್ಲ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications