ದರ್ಶನ್‌ ಜೊತೆ ನಟಿಸಿದ ಬಳಿಕ 'ಆ ವ್ಯಕ್ತಿಗೆ' ಹೆದರಿ ನಟನೆ ಬಿಟ್ಟ ಅನುಪಮಾ ಗೌಡ: ಆಗಿದ್ದೇನು?

ಕನ್ನಡ ಚಿತ್ರರಂಗದ ಅನೇಕ ನಟಿಯರು ಚಿಕ್ಕವಯಸ್ಸಿನಲ್ಲೇ ಲೈಂಗಿಕ ಕಿರುಕುಳ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚಿಗಷ್ಟೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ನೇಹಾ ಗೌಡ ತಮಗೆ ಚಿಕ್ಕವಯಸ್ಸಿನಲ್ಲಿ ಆದ ಲೈಂಗಿಕ ದೌರ್ಜನ್ಯದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದರು. ಇದೀಗ ರಾಜ್ಯ ಪ್ರಶಸ್ತಿ ವಿಜೇತ ನಟಿ ಹಾಗೂ ಪ್ರಸ್ತುತ ಕನ್ನಡದ ಜನಪ್ರಿಯ ನಿರೂಪಕಿ ಅನುಪಮಾ ಗೌಡ ತಾವು ಬಾಲ್ಯದಲ್ಲಿ ಪರಿಚಿತ ವ್ಯಕ್ತಿಯಿಂದಲೇ ಅನುಭವಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ಏಳನೇ ತರಗತಿಯಲ್ಲಿ ಇರುವಾಗ ನನ್ನನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಮನೆಯಲ್ಲಿ ದುಡ್ಡಿರಲಿಲ್ಲ ಹೀಗಾಗಿ ನಾನು ಮೊದಲ ಬಾರಿಗೆ ಕೆಲಸ ಆರಂಭಿಸಿದೆ. ಜೂನಿಯರ್‌ ಆರ್ಟಿಸ್ಟ್‌ ಆಗಿ ನಾನು ಕೆಲಸ ಶುರುಮಾಡಿದೆ. ಸಿನಿಮಾ, ಧಾರಾವಾಹಿಗಳಿಗೆ ಜೂನಿಯರ್‌ ಆರ್ಟಿಸ್ಟ್‌ ಆಗಿ ಹೋಗಲು ಆರಂಭಿಸಿದೆ. ದಿನಕ್ಕೆ ನೂರು ರೂಪಾಯಿ ಕೊಡುತ್ತಿದ್ದರು. ಅದಕ್ಕೂ ಮುಂಚೆ ನಾನು ಮನೆ ಕೆಲಸ ಮಾಡುತ್ತಿದ್ದೆ. ಅಮ್ಮನಿಗೆ ಹೇಳದೆ ಮನೆ ಕೆಲಸಕ್ಕೆ ಹೋಗುತ್ತಿದೆ. ಅಲ್ಲಿ ಕಸ ಗುಡಿಸಿ ನೆಲ ಒರೆಸಿದರೆ ಸಂಜೆಗೆ ತಿಂಡಿ ಕೊಡುತ್ತಿದ್ದರು. ಜೊತೆಗೆ ನೂರೈವತ್ತು ರೂಪಾಯಿ ಕೊಡುತ್ತಿದ್ದರು. ಮನೆ ಹತ್ತಿರವೇ ಹೋಗುತ್ತಿದ್ದೆ. ಆಮೇಲೆ ಅಮ್ಮನಿಗೆ ಗೊತ್ತಾಗಿ ದೊಡ್ಡ ಗಲಾಟೆ ಆಯಿತು' ಎಂದರು.

Kannada Anchor Anupama Gowda Shared Her Bad Experience in Childhood Like Abuse

'ನಾನು ಏಳನೇ ತರಗತಿಯಲ್ಲಿ ಇದ್ದಾಗ ಜೂನಿಯರ್‌ ಆರ್ಟಿಸ್ಟ್‌ ಆಂಟಿ ಒಬ್ಬರು ಇದ್ದರು. ಅವರು ನಮ್ಮ ಅಮ್ಮನ ಬಳಿ ಕೇಳಿ ಕರೆದುಕೊಂಡು ಹೋದರು. ಒಂದಷ್ಟು ಧಾರಾವಾಹಿಗಳು, ಸಿನಿಮಾಗಳಿಗೆ ಹೋಗಿ ಆದ ಮೇಲೆ ಲಂಕೇಶ್‌ ಪತ್ರಿಕೆ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಇದೆ ಅಂತಾ ಅದನ್ನು ಮಾಡಲು ನನ್ನನ್ನು ಕರೆದರು. ಒಂದು ದಿನದ ಶೂಟಿಂಗ್‌ ಅಂತಾ ಕರೆದಿದ್ದರು. ಮೊದಲ ದಿನ ಶೂಟ್‌ ಮಾಡಲು ಆಗಲಿಲ್ಲ, ಎರಡನೇ ದಿನವೂ ಆಗಲಿಲ್ಲ. ಆದರೆ ದುಡ್ಡು ಮಾತ್ರ ಕೊಡುತ್ತಿದ್ದರು. ಮೂರನೇ ದಿನ ಹೋದಾಗ ದರ್ಶನ್‌ ಸರ್‌ ಜೊತೆ ನನ್ನ ಶೂಟಿಂಗ್‌ ಇತ್ತು'.

'ಲಂಕೇಶ್‌ ಪತ್ರಿಕೆ ಸಿನಿಮಾದಲ್ಲಿ ನಾನೇ ಕ್ಲೈಮ್ಯಾಕ್ಸ್‌ ಚೇಂಜರ್. ದರ್ಶನ್‌ ಸರ್‌ ನನ್ನನ್ನು ಕ್ಯಾಚ್‌ ಹಿಡಿಯಬೇಕು ಎನ್ನುವುದು ಸೀನ್‌ ಆಗಿತ್ತು. ಮೇಖ್ರಿ ಸರ್ಕಲ್‌ ಫ್ಲೈ ಓವರ್‌ನಲ್ಲಿ ಶೂಟಿಂಗ್‌ ಇತ್ತು. ನಾನು ವೀಲ್‌ಚೇರ್‌ ಮೇಲೆ ಕೂತು ರೋಡ್‌ ಕ್ರಾಸ್‌ ಮಾಡುತ್ತಿರುತ್ತೇನೆ. ಆಗ ಲಾರಿ ಬಂದು ಡಿಕ್ಕಿಯಾಗಿ ನಾನು ಮೇಲೆ ಹಾರಿ ಬೀಳುವಾಗ ದರ್ಶನ್‌ ಸರ್‌ ನನ್ನನ್ನು ಹಿಡಿದುಕೊಳ್ಳುತ್ತಾರೆ. ಅದು ಸೀನ್‌ ಆಗಿತ್ತು. ನನ್ನ ಮೊದಲ ಸಿನಿಮಾ ಲಂಕೇಶ್‌ ಪತ್ರಿಕೆ' ಎಂದು ಅನುಪಮಾ ಹೇಳಿದರು.

Kannada Anchor Anupama Gowda Shared Her Bad Experience in Childhood Like Abuse

'ನಾನು ಮೊದಲು ಕಾಣಿಸಿರುವ ಸಿನಿಮಾ ಲಂಕೇಶ್‌ ಪತ್ರಿಕೆ. ಯಾಕೆಂದರೆ ಜೂನಿಯರ್ ಆರ್ಟಿಸ್ಟ್‌ ಎಂದರೆ ಗೊತ್ತಲ್ಲ. ಅವರು ಕಾಣಿಸೋದೇ ಇಲ್ಲ. ಈ ಸಿನಿಮಾದಲ್ಲಿ ನಾನು ಕಾಣಿಸುತ್ತೇನೆ. ದೊಡ್ಡ ಪರದೆ ಮೇಲೆ ನನ್ನ ಮೊದಲ ಎಂಟ್ರಿ ಅದು. ಅದಾದ ಮೇಲೆ ನಾನು ಇಡೀ ತಿಂಗಳು ಜೂನಿಯರ್ ಆರ್ಟಿಸ್ಟ್‌ ಆಗಿ ಕೆಲಸ ಮಾಡಲು ಶುರು ಮಾಡಿದೆ. ದಿನಕ್ಕೆ ನೂರು ರೂಪಾಯಿ ಅಂದರೆ ತಿಂಗಳಿಗೆ ಮೂರು ಸಾವಿರ. ಆಗಿನ ಮೂರು ಸಾವಿರ ಅಂದರೆ ಈಗಿನ ಮೂವತ್ತು ಲಕ್ಷ ಸಮ. ಹೀಗಾಗಿ ನಾನು ಹೋಗಲು ಆರಂಭಿಸಿದೆ'.

'ಒಬ್ಬರು ಈಗ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಅಕ್ಕ ಧಾರಾವಾಹಿ ಮಾಡುವ ಸಮಯದಲ್ಲಿ ಇದ್ದರು. ಆ ವ್ಯಕ್ತಿ ಜೂನಿಯರ್ ಆರ್ಟಿಸ್ಟ್‌ಗಳ ಜೊತೆ ಮಾತನಾಡಿ ಶೂಟಿಂಗ್‌ಗಳಿಗೆ ಕಳುಹಿಸುತ್ತಿದ್ದರು. ಅವರು ಕೂಡ ತಕ್ಕಮಟ್ಟಿನ ಪಾತ್ರಗಳನ್ನು ಮಾಡುತ್ತಿದ್ದರು. ಅವರು ಆಗ ಮನೆಗೆ ಬರುತ್ತಿದ್ದರು. ಅವಾಗ ಅಮ್ಮನೂ ಇರಲಿಲ್ಲ. ಅಪ್ಪನೂ ಇರಲಿಲ್ಲ ಬಂದವರೇ ಟೆರೆಸ್‌ ಮೇಲೆ ಕರೆದುಕೊಂಡು ಹೋದರು ಮಾತನಾಡಲು, ಮಾತನಾಡುತ್ತಾ..ಮಾತನಾಡುತ್ತಾ ಮೈ ಕೈ ಮುಟ್ಟಲು ಶುರು ಮಾಡಿದರು'.

Kannada Anchor Anupama Gowda Shared Her Bad Experience in Childhood Like Abuse

'ನನಗೆ ಆ ವ್ಯಕ್ತಿ ಏನು ಮಾಡುತ್ತಿದ್ದಾರೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲಿ ಲವ್‌ ಮಾಡುತ್ತೇನೆ ಅಂತಾ ರವಿಚಂದ್ರನ್ ಸಿನಿಮಾಗಳು, ರೋಮ್ಯಾಂಟಿಕ್‌ ಸಿನಿಮಾಗಳನ್ನು ಹಾಕುತ್ತಿರಲಿಲ್ಲ. ಫಿಜಿಕಲ್‌ ಟಚ್‌ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ. ನಾನು ಮದುವೆಯಾದರೆ ಮಕ್ಕಳಾಗುತ್ತದೆ ಅಂದುಕೊಂಡಿದ್ದೆ. ನಾನು ಪಿಯುಸಿ ಮುಗಿಸುವವರೆಗೂ ನಮಗೆ ಗೊತ್ತಿದ್ದ ವಿಚಾರ ಅಷ್ಟೇ. ಅದಕ್ಕಾಗಿಯೇ ನಾನು ಹೇಳುವುದು ಹೆಣ್ಣು ಮಕ್ಕಳಿಗಾಗಲೀ, ಗಂಡು ಮಕ್ಕಳಿಗಾಗಲೀ ಫಿಜಿಕಲ್‌ ಟಚ್‌ ಬಗ್ಗೆ ಹೇಳಿಕೊಡಬೇಕು' ಎಂದರು.

'ನಮಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಆ ರೀತಿಯಾದಾಗ ಹಿಂಸೆಯಾಗುತ್ತಿದ್ದೆ ಅಂತಾ ಮಾತ್ರ ಗೊತ್ತಾಗುತ್ತಿತ್ತೇ ವಿನಃ ಏನು ಆಗುತ್ತಿದೆ ಅಂತಾ ಗೊತ್ತಾಗುತ್ತಿರಲಿಲ್ಲ. ನಾನು ಅವರಿಗೆ ಹೀಗೆ ಮಾಡಬೇಡಿ ಅಂದೆ ಆದರೆ ಅದು ನಡೆಯುತ್ತಲೇ ಇತ್ತು. ಕೊನೆಯಲ್ಲಿ ಭಯವಾಗಿ ಓಡಿ ಬಂದು ಮನೆ ಬಾಗಿಲು ಹಾಕಿಕೊಂಡೆ. ಅದಾದ ಮೇಲೆ ನಾನೇ ನಿರ್ಧರಿಸಿ ಅಮ್ಮನಿಗೆ ಹೇಳಿದೆ. ನಾನು ಯಾವ ಜೂನಿಯರ್ ಆರ್ಟಿಸ್ಟ್‌ ಆಗಿ ಹೋಗಲ್ಲ, ಯಾವ ಸಿನಿಮಾನೂ ಬೇಡ, ಯಾವ ಧಾರಾವಾಹಿಯೂ ಬೇಡ ನಾನು ಹೋಗೋದೆ ಇಲ್ಲ. ನನಗೆ ಈ ಕೆಲಸ ಬೇಡವೇ ಬೇಡ ಅಂತಾ ಹೇಳಿದೆ. ಅಲ್ಲಿಗೆ ಆ ಕೆಲಸಕ್ಕೆ ಬ್ರೇಕ್‌ ಹಾಕಿದೆ' ಎಂದು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡರು.

Take a Poll

'ಅವತ್ತು ನಡೆದ ವಿಚಾರವನ್ನು ಅಮ್ಮನಿಗೆ ಹೇಳಬೇಕು. ಆದರೆ ಹೇಗೆ ಹೇಳುವುದು. ಆದರೆ ಅದರಿಂದ ನನಗೆ ಹಿಂಸೆ ಆಗುತ್ತಿತ್ತು ಅಷ್ಟು ಮಾತ್ರ ಗೊತ್ತಿತ್ತು ನನಗೆ. ಹೋಗುತ್ತಾ ಹೋಗುತ್ತಾ ಅದರ ಬಗ್ಗೆ ಗೊತ್ತಾಯ್ತು. ಫಿಜಿಕಲ್‌ ಟಚ್‌ ಬಗ್ಗೆ ನನಗೆ ಅರಿವಾಗಲು ಶುರುವಾದಾಗ ಇದೊಂದು ಹಿಂಸೆ ಅಂತಾ ಗೊತ್ತಾಯ್ತು. ಅದಾದ ಮೇಲೆ ನಾನು ನಟನೆ ಮಾಡಲಿಲ್ಲ. ಮತ್ತೆ ಶಾಲೆಗೆ ಹೋಗಲು ಶುರು ಮಾಡಿ, ಹೈಸ್ಕೂಲ್‌, ಪ್ರಥಮ ಪಿಯುಸಿ ಮುಗಿಸಿಕೊಂಡೆ. ಕೊನೆಗೆ ದ್ವಿತೀಯ ಪಿಯುಸಿಯಲ್ಲಿ ಫೇಲ್‌ ಆದೆ. ನಮ್ಮ ಅಮ್ಮ ಹತ್ತನೇ ತರಗತಿಯಾದ ಮೇಲೆ ಓದಿಸಲ್ಲ ಎನ್ನುತ್ತಿದ್ದರು, ಹೀಗಿರುವಾಗ ದ್ವಿತೀಯ ಪಿಯುಸಿ ಫೇಲ್‌ ಆಗುತ್ತಿದ್ದಂತೆ ಅಮ್ಮ ಟೈಲರ್‌ ಕೆಲಸಕ್ಕೆ ಹಾಕಿಕೊಂಡರು' ಎಂದು ನಟಿ ಅನುಪಮಾ ಗೌಡ ಬಾಲ್ಯದಲ್ಲಿಯೇ ನಟನೆಗೆ ಬಂದು, ಬಳಿಕ ಕಹಿ ಅನುಭವದಿಂದ ನಟನೆಯನ್ನೇ ಬಿಟ್ಟ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+