ಮುಖವೆಲ್ಲಾ ಮುತ್ತಿಟ್ಟ ಸಹ ನಟ: ಕನ್ನಡದ ನಟಿಗೆ ವೇದಿಕೆ ಮೇಲೆ ಮುಜುಗರ

ಕನ್ನಡ ಕಿರುತೆರೆಯ ರೌಡಿ ಬೇಬಿ ನಿಶಾ ರವಿಕೃಷ್ಣನ್‌ ಇದೀಗ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿ ಬಳಿಕ ಕನ್ನಡ ಕಿರುತೆರೆಯಿಂದ ಬ್ರೇಕ್‌ ತೆಗೆದುಕೊಂಡಿದ್ದ ನಿಶಾ ರವಿಕೃಷ್ಣನ್‌ ಮತ್ತೆ ಕನ್ನಡದಲ್ಲಿಯೇ ನಟಿಸುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಸದ್ಯ ಅವರನ್ನು ಶಿವು ಮುದ್ದಿನ ಮಡದಿಯಾಗಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ನಿಶಾ ರವಿಕೃಷ್ಣನ್‌ ಅವರಿಗೆ ವೇದಿಕೆ ಮೇಲೆಯೇ ಮುಜುಗರವಾದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ನಿಶಾ ರವಿಕೃಷ್ಣನ್‌ ಮುತ್ಯಮಂತ ಮುದ್ದು ಧಾರಾವಾಹಿಯ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟರು. ತೆಲುಗಿನಲ್ಲೂ ಕೂಡ ತಮ್ಮದೇ ಅಭಿಮಾನಿಗಳನ್ನು ಗಳಿಸಿರುವ ನಿಶಾ ಅಮ್ಮಾಯಿಗಾರು ಎನ್ನುವ ಮತ್ತೊಂದು ತೆಲುಗು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಹೀರೋ ಕೂಡ ಕನ್ನಡದ ನಟನೇ ಆಗಿದ್ದು, ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಯಶ್ವಂತ್ ಅವರು ಅಮ್ಮಾಯಿಗಾರು ಧಾರಾವಾಹಿಯ ಹೀರೋ ಆಗಿದ್ದಾರೆ.

Kannada Actress Nisha RaviKrishnan Got Embarrassment in Telugu Reality Shows

ಅಮ್ಮಾಯಿಗಾರು ಮೂಲಕ ನಟ ಯಶ್ವಂತ್ ಹಾಗೂ ನಿಶಾ ರವಿಕೃಷ್ಣನ್‌ ಜೋಡಿಯನ್ನು ತೆಲುಗು ಕಿರುತೆರೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಜೋಡಿಗೆ ಅವರದೇ ಆದ ಅಭಿಮಾನಿ ಬಳಗವಿದ್ದು, ತೆಲುಗು ಕಿರುತೆರೆಯ ಅನೇಕ ಕಾರ್ಯಕ್ರಮದಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇದೇ ರೀತಿ ಇತ್ತೀಚಿಗೆ ನಡೆದ ಸೀರಿಯಲ್ ಚಾಂಪಿಯನ್‌ಶಿಪ್‌ ರಿಯಾಲಿಟಿ ಶೋನಲ್ಲಿ ಯಶ್ವಂತ್ ಹಾಗೂ ನಿಶಾ ರವಿಕೃಷ್ಣನ್‌ ಜೋಡಿ ಭಾಗಿಯಾಗಿದ್ದು, ಈ ವೇಳೆ ಕೊಟ್ಟ ಟಾಸ್ಕ್‌ನಿಂದ ನಿಶಾ ರವಿಕೃಷ್ಣನ್‌ ಮುಜುಗರಕ್ಕೊಳಗಾಗಿದ್ದಾರೆ.

Take a Poll

ಯಶ್ವಂತ್ ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿಕೊಂಡು ನಿಶಾ ರವಿಕೃಷ್ಣನ್‌ ಅವರ ಮುಖಕ್ಕೆ ಮುತ್ತು ಕೊಡುವ ಟಾಸ್ಕ್‌ ನೀಡಲಾಗಿದ್ದು, ಈ ವೇಳೆ ಯಶ್ವಂತ್ ಮುಖದ ತುಂಬಾ ಮುತ್ತು ಕೊಟ್ಟಿದ್ದಾರೆ. ಈ ಟಾಸ್ಕ್ ವೇಳೆ ನಿಶಾ ಅವರ ಮುಖದ ಭಾವನೆ ತಮಗೆ ಇದು ಇಷ್ಟ ಇಲ್ಲ ಎನ್ನುವುದನ್ನು ಹೇಳುತ್ತಿತ್ತು. ಬಹಳ ಮುಜುಗರದಿಂದಲೇ ಈ ಟಾಸ್ಕ್ಅನ್ನು ನಿಶಾ ರವಿಕೃಷ್ಣನ್‌ ಮುಗಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದ್ದು, ನಿಶಾ ರವಿಕೃಷ್ಣನ್‌ ಅಭಿಮಾನಿಗಳು ಕಾರ್ಯಕ್ರಮದ ಆಯೋಜಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಿಯಾಲಿಟಿ ಶೋಗಳು ತಮ್ಮ ಟಿಆರ್‌ಪಿಗೋಸ್ಕರ ಬೇರೆಯವರ ಮನಸ್ಸಿಗೆ ಹಿಂಸೆ ಕೊಡುತ್ತವೆ. ಈ ರೀತಿಯ ಟಾಸ್ಕ್‌ಗಳನ್ನು ನೀಡುವುದು ತಪ್ಪು, ಇಂತಹ ಶೋಗಳು ಸಮಾಜಕ್ಕೆ ಮಾರಕ. ರಿಯಾಲಿಟಿ ಶೋ ಹೆಸರಿನಲ್ಲಿ ನಡೆಯುವ ಅನಾಚಾರ ಇವು. ವಾಹಿನಿಯೊಂದಕ್ಕೆ ಈ ರೀತಿಯ ಶೋ ಪ್ರಸಾರ ಮಾಡಲು ನಾಚಿಕೆ ಆಗಲ್ವಾ? ಇಂತಹ ಶೋಗಳನ್ನು ಬ್ಯಾನ್‌ ಮಾಡಬೇಕು ಎಂದು ಕಾರ್ಯಕ್ರಮದ ವಿರುದ್ಧ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+