ಉಪ್ಪಿ ಅಭಿಮಾನಿಗಳಿಗೆ ಹಬ್ಬ, 'ಯುಐ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್!
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸಿರುವ ಬಹುನಿರೀಕ್ಷಿತ ಯುಐ ಸಿನಿಮಾ ಕೊನೆಗೆ ರಿಲೀಸ್‌ಗೆ ಸಜ್ಜಾಗಿದೆ. ಇಷ್ಟು ದಿನ ಈ ಸಿನಿಮಾ ಬಿಡುಗಡೆ ಯಾವಾಗ ಸರ್? ಎಂದು ಉಪ್ಪಿ ಅವರನ್ನು ಎಲ್ಲರೂ ಬೆನ್ನುಬಿದ್ದಿದ್ದರು. ಇಂದು ಖುದ್ದು ಉಪ್ಪಿ ಅವರೇ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ಡಿಸೆಂಬರ್ 20ರಂದು ಯುಐ ಸಿನಿಮಾ ರೀಲೀಸ್ ಆಗಲಿದೆ ಎಂದು ನಟ ಉಪೇಂದ್ರ ರಿವೀಲ್ ಮಾಡಿದ್ದಾರೆ. ಸೂಪರ್ ಸಿನಿಮಾದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್‌ನಿಂದ ತುಸು ದೂರ ಉಳಿದಿದ್ದರು. ಹಲವು ವರ್ಷಗಳ ನಂತರ ಉಪ್ಪಿ ಡೈರೆಕ್ಟರ್ ಕ್ಯಾಪ್ ತೊಟ್ಟು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು.

ಅದರಂತೆ ತಮ್ಮ ಮುಂದಿನ ಸಿನಿಮಾ ಹೆಸರು ಯುಐ ಎಂದು ಘೋಷಿಸಿ ತಲೆಗೆ ಹುಳ ಬಿಟ್ಟಿದ್ದರು. ಉಪ್ಪಿ ತನ್ನ ನಿರ್ದೇಶನ, ನಟನೆ ಸೇರಿದಂತೆ ಟೈಟಲ್‌ನಲ್ಲೂ ಕುತೂಹಲ ಮೂಡಿಸುವ ಕಲಾವಿದರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇವರು ಆರಂಭದಿಂದಲೂ ಇಂತಹ ಕುತೂಹಲಗಳಿಂದಲೇ ಕ್ರೇಜ್ ಹುಟ್ಟಿಸಿದವರು.
ಅದೇ ರೀತಿ ಯುಐ ಸಿನಿಮಾದಲ್ಲೂ ತಮ್ಮ ಟ್ರೆಂಡ್ ಮುಂದುವರಿಸಿರುವ ಉಪ್ಪಿ, ಇಂದಿಗೂ ಆ ಟೈಟಲ್‌ನ ಅರ್ಥವೇನು ಎಂಬುದು ಬಹುತೇಕರ ತಲೆಗೆ ಹೋಗಿಯೇ ಇಲ್ಲ. ಅಷ್ಟರಮಟ್ಟಿಗೆ ಕುತೂಹಲ ಸೃಷ್ಟಿಸಿದ್ದಾರೆ ಉಪ್ಪಿ. ಎಂದಿನಂತೆ ಉಪ್ಪಿ ವಿಭಿನ್ನ ಅವತಾರಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಚಿತ್ರದ ಪೋಸ್ಟರ್‌ಗಳೇ ಹೇಳುತ್ತಿವೆ.

ಇನ್ನು ಯುಐ ಸಿನಿಮಾದ ಟ್ರೋಲ್ ಆಗುತ್ತೆ ಸಾಂಗ್ ಕೂಡ ಸಖತ್ ಟ್ರೆಂಡ್ ಸೆಟ್ ಮಾಡಿದೆ. ಉಪ್ಪಿ ಸದ್ದಿಲ್ಲದೆ ಈ ಹಾಡನ್ನು ರಿಲೀಸ್ ಮಾಡಿ, ಎಲ್ಲರಿಗೆ ಶಾಕ್ ನೀಡಿದ್ದರು. ಇದರಲ್ಲಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿರುವ ರೀಲ್‌ಗಳು ಹಾಗೂ ಡೈಲಾಗ್‌ಗಳನ್ನೇ ಬಳಸಿಕೊಂಡು ಫುಲ್ ಕ್ರೇಜಿಯಾಗಿ ಹಾಡು ರಚಿಸಿದ್ದರು. ಇದು ಸದ್ಯ ಎಲ್ಲರ ಬಾಯಲ್ಲಿದೆ.
ಇನ್ನು ಯುಐ ಸಿನಿಮಾದ ಬಗ್ಗೆ ಉಪ್ಪಿ ಅಪ್ಡೇಟ್ ನೀಡಿದ್ದು, ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್, ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ ಎಂದು ಮತ್ತೊಮ್ಮೆ ತಲೆ ಏನೋ ಹುಳ ಬಿಟ್ಟಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ.

ಈ ಅನೌನ್ಸ್ ಆದ ಬೆನ್ನಲ್ಲೇ ಉಪ್ಪಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಡೆ ಉಪ್ಪಿ ಹಂಚಿಕೊಂಡಿರುವ ಮತ್ತೊಂದು ಹೊಸ ಪೋಸ್ಟರ್ ಹಂಚಿಕೊಂಡು ಖುಷ್ ಆಗಿದ್ದಾರೆ. ಡಿಸೆಂಬರ್‌ಗೆ ಮತ್ತೆ ಉಪ್ಪಿ ಹವಾ ಶುರು ಎಂದೆಲ್ಲ ಫ್ಯಾನ್ಸ್ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹಲವು ವರ್ಷಗಳ ನಂತರ ಉಪ್ಪಿ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಮೊದಲಿಗೆ ಈ ಚಿತ್ರದ ಟೈಟಲ್ ಅನ್ನು ತಿರುಪತಿ ನಾಮಕ್ಕೆ ಹೋಲಿಸಲಾಗಿತ್ತು. ಪ್ರತಿ ಬಾರಿಯೂ ಈ ಟೈಟಲ್ ಬಗ್ಗೆ ವಿಭಿನ್ನ ಹಾಗೂ ವಿಚಿತ್ರವಾದ ಸಂಗತಿಗಳು ಹೊರಬೀಳುತ್ತಿದ್ದವು. ಕೊನೆಗೂ ಇದಕ್ಕೆ ಉತ್ತರ ಸಿಗುವ ಸಮಯ ಹತ್ತಿರಕ್ಕೆ ಬಂದಿದೆ.












Click it and Unblock the Notifications