ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡ್ಕೊಂಡು ಹೋಗಿ: ಡಾಲಿ ಆಮಂತ್ರಣ
ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಸಿಹಿಸುದ್ದಿ ಕೊಟ್ಟಿದ್ದಾರೆ. ಇಲ್ಲಿವರೆಗೆ ಅವರನ್ನು ಕಾಡುತ್ತಿದ್ದ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಟ್ಟಿದ್ದಾರೆ.
ಅಲ್ಲದೆ ತಮ್ಮ ಮನದರಸಿ ಯಾರು ಎಂದು ಖುದ್ದು ನಟ ಧನಂಜಯ್ ಅವರೇ ಪರಿಚಯಿಸಿದ್ದಾರೆ. ಈಗಾಗಲೇ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದ್ದು, ಬೆಳಕಿನ ಹಬ್ಬಕ್ಕೆ ತಮ್ಮ ಬದುಕಿನ ಬೆಳಕನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ್ದಾರೆ. ಇನ್ನು ಡಾಲಿ ಧನಂಜಯ್ ಅವರು ತಮ್ಮ ಪ್ರೇಯಸಿ ಬಗ್ಗೆ ವಿಶೇಷ ವಿಡಿಯೋ ಶೇರ್ ಮಾಡುವ ಮೂಲಕ ಮದುವೆಗೆ ಎಲ್ಲರನ್ನೂ ಇನ್ವೈಟ್ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?: ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ ಎಂದು ಡಾಲಿ ತಮ್ಮ ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ.
ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ನಾನು ಧನ್ಯ ಎಂದು ಧನಂಜಯ್ ಮುದ್ದಾಗಿ ಎಲ್ಲರನ್ನೂ ಆಹ್ವಾನಿಸಿದ್ದಾರೆ.
ಪ್ರೀತಿಯ ಕರುನಾಡಿಗೆ,
— Dhananjaya (@Dhananjayaka) November 1, 2024
ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ.
ಮದುವೆಗೆ ಕರಿತೀನಿ,… pic.twitter.com/0M4CL0cQDL
ಡಾಲಿಯ ಬೆಡಗಿ ಯಾರು?: ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಧನಂಜಯ್ ಅವರು ವೈದ್ಯೆಯೊಬ್ಬರನ್ನು ಮದುವೆಯಾಗಲಿದ್ದಾರೆ. ಡಾಲಿ ಮನದರಸಿಯ ಹೆಸರು ಕೂಡ ರಿವೀಲ್ ಆಗಿದ್ದು, ಚಿತ್ರದುರ್ಗ ಮೂಲದ ಡಾ.ಧನ್ಯತಾ ಅವರನ್ನು ವರಿಸಲಿದ್ದಾರೆ. ಧನು ಹಾಗೂ ಧನ್ಯತಾ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರ ಲವ್‌ಗೆ ಪೋಷಕರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮೈಸೂರಿನಲ್ಲಿ ಫೆಬ್ರವರಿ 16ರಂದು ಧನಂಜಯ್ ಅವರು ಧನ್ಯತಾ ಅವರ ಕೈಹಿಡಿಯಲಿದ್ದಾರೆ.

ಡಾಲಿ ಕೈ ಹಿಡಿಯುತ್ತಿರುವ ಧನ್ಯತಾ ಅವರು ಗೈನಕಾಲಜಿಸ್ಟ್ ಎನ್ನಲಾಗಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ಸಾಗಿದ್ದು, ಈ ಜೋಡಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆ. ಡಾಲಿ ಹಂಚಿಕೊಂಡಿರುವ ವಿಶೇಷ ಮದುವೆ ಆಮಂತ್ರಣದ ವಿಡಿಯೋದಲ್ಲಿ ತಮ್ಮ ಪ್ರೇಯಸಿಗೆ ವಿಶೇಷ ಸಾಲುಗಳನ್ನು ಓದುವ ಮೂಲಕ ಪ್ರೇಮನಿವೇದನೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಧನಂಜಯ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಇಷ್ಟರಲ್ಲೇ ಮದುವೆ ಆಗ್ತೀನಿ, ನಾನು ಮದುವೆ ಆಗಬೇಕು ಎನ್ನುವುದು ನಮ್ಮ ಅಜ್ಜಿಯ ಆಸೆ. ಹಾಗಾಗಿ ಆದಷ್ಟು ಬೇಗನೇ ನಾನು ಮದುವೆ ಆಗುತ್ತೇನೆ ಎಂದು ಹೇಳಿದ್ದರು. ಇದೀಗ ಅವರೇ ತಮ್ಮ ಹುಡುಗಿಯನ್ನು ಪರಿಚಯಿಸಿ, ಹಬ್ಬಕ್ಕೆ ಸಿಹಿಸುದ್ದಿ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ನಟ, ಡಾಲಿ ವೆಡ್ಸ್ ಧನ್ಯತಾ ಎನ್ನುವ ಆಮಂತ್ರಣ ಕೊಡುವ ಮೂಲಕ ಬದುಕಿನಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಜೋಡಿಯ ಫೋಟೋಗಳು ಸಖತ್ ವೈರಲ್ ಆಗಿದ್ದು, ಎಲ್ಲೆಡೆಯಿಂದಲೂ ಶುಭಾಶಯಗಳ ಸುರಿಮಳೆ ಹರಿಯುತ್ತಿದೆ.












Click it and Unblock the Notifications