Dhananjay: ನಟ ಡಾಲಿ ಎಷ್ಟು ಮಕ್ಕಳು ಮಾಡ್ಕೋತಾರೆ ಗೊತ್ತಾ? ವೇದಿಕೆಯಲ್ಲೇ ಶಾಕಿಂಗ್‌ ಹೇಳಿಕೆ

ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ಅವರ ವಿವಾಹಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ, ನಟ ಡಾಲಿ ಆಗಲೇ ಮಕ್ಕಳು ಮಾಡಿಕೊಳ್ಳುವ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ನಗುತ್ತಲೇ ಅವರು ತಾವು ಮಕ್ಕಳು ಮಾಡಿಕೊಳ್ಳುವ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಕೂಡ ಆಗಿದ್ದಾರೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಬಸವಯೋಗಿ ಸಿದ್ದರಾಮೇಶ್ವರರ ಜಯಂತಿ ಉತ್ಸವ ಕಾರ್ಯಕರ್ಮದಲ್ಲಿ ಭಾಗಿಯಾಗಿದ್ದ ನಟ ಡಾಲಿ ಧನಂಜಯ್‌ ಅವರು ನಗುತ್ತಾ ಮಕ್ಕಳ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ನಾಯಕ ಸಿ.ಟಿ.ರವಿ ಅವರು ನೀಡಿದ್ದ ಸಲಹೆ ಎಂದಿದ್ದಾರೆ. ಹೌದು, ಸಿ.ಟಿ.ರವಿ ಅವರು ನಟ ಡಾಲಿ ಅವರಿಗೆ ನಾಲ್ಕು ಮಕ್ಕಳು ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದರಂತೆ.

Kannada Actor Daali Dhananjay Shocking Statement About Having Four Children

ಇದಕ್ಕೆ ನಟ ಡಾಲಿ ವೇದಿಕೆಯಲ್ಲೇ ಉತ್ತರವನ್ನೂ ಕೊಟ್ಟಿದ್ದಾರೆ. ಹೆಣ್ಣು ಮಾಯೆಯಲ್ಲ, ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್‌ ಕಪಿಲಸಿದ್ಧ ಮಲ್ಲಿಕಾರ್ಜುನ ಅಂತ ಹೇಳ್ತಾರೆ ಎಂದು ಡಾಲಿ ಈ ವೇಳೆ ಉಲ್ಲೇಖಿಸಿದ್ದಾರೆ. ತಾಯಿ, ಅಕ್ಕ ತಂಗಿ, ಸ್ನೇಹಿತರ ರೂಪದಲ್ಲಿ ಹೆಣ್ಣುಮಕ್ಕಳು ತುಂಬಾ ಚೆನ್ನಾಗಿ ಕಾಯುತ್ತಿರುತ್ತಾರೆ ಎಂದಿದ್ದಾರೆ.

ಇನ್ನು ಹೆಂಡತಿ ಎನ್ನುವ ವಿಚಾರಕ್ಕೆ ಬಂದಾಗ, ನನ್ನ ಮಡದಿಗೆ ಒಪ್ಪಿಗೆ ಇದ್ರೆ.. ನಾಲ್ಕೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಸಾಕಿ ಬೆಳೆಸುವ ಶಕ್ತಿಯನ್ನ ನಾನು ಬೆಳೆಸಿಕೊಂಡ್ರೆ ನಾನು ಖಂಡಿತವಾಗಿಯೂ ನಾಲ್ಕು ಮಕ್ಕಳನ್ನು ಮಾಡಿಕೊಳ್ಳುತ್ತೀನಿ ಎಂದು ಡಾಲಿ ಹೇಳಿದ್ದಾರೆ. ಡಾಲಿ ಮಾತು ಕೇಳಿ ಕಾರ್ಯಕ್ರಮದಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ನಿಮಗೆಲ್ಲರಿಗೂ ನಾನು ಇದೇ ಸಲಹೆ ಕೊಡುತ್ತೀನಿ ಎಂದೂ ಧನಂಜಯ್‌ ನಗುತ್ತಾ ಹೇಳಿದ್ದಾರೆ.

ಇನ್ನು ಡಾಲಿ ಧನಂಜಯ್‌ ಅವರು ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ. ಮೈಸೂರಿನಲ್ಲಿ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಡಾಲಿ ಅವರು ಗಣ್ಯರಿಗೆ ಆಮಂತ್ರಣ ನೀಡುತ್ತಾ ಬ್ಯುಸಿಯಾಗಿದ್ದಾರೆ. ಡಾಲಿ ಅವರು ಕೆಲ ತಿಂಗಳ ಹಿಂದೆ ಚಿತ್ರದುರ್ಗ ಮೂಲದ ವೈದ್ಯೆ ಡಾ.ಧನ್ಯತಾ ಅವರೊಂದಿಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಾಲಿ ಹಾಗೂ ಧನ್ಯತಾ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಈ ಫೆಬ್ರವರಿಯಲ್ಲಿ ಧನಂಜಯ್‌ ಅವರು ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ.

Kannada Actor Daali Dhananjay Shocking Statement About Having Four Children

ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಮತ್ತು ಧನ್ಯತಾ ಅವರ ವಿವಾಹ ನಡೆಯಲಿದೆ. ವಿವಾಹಕ್ಕೆ ಸಿನಿಮಾರಂಗದವರು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕನ್ನಡ ಸೇರಿ ತೆಲುಗು ಸಿನಿಮಾಗಳಲ್ಲೂ ಮಿಂಚಿರುವ ಡಾಲಿ ಮದುವೆಗೆ ಚಿತ್ರರಂಗದ ದಂಡೇ ಸೇರಲಿದೆ. ಸದ್ಯ ಡಾಲಿ ಅವರು ಆಮಂತ್ರಣ ನೀಡುತ್ತಿರುವ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಡಾಲಿ ಜೋಡಿ ವಿಶೇಷ ಪೂಜೆ ಸಲ್ಲಿಸಿತ್ತು. ಇಂದು ಮದುವೆಗೂ ಮುನ್ನ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದುಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಡಾಲಿ ಜೋಡಿಯ ಫೋಟೋಗಳು ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+