ದಯವಿಟ್ಟು ನನ್ನ ಮಗಳ ವಿಡಿಯೋ ಡಿಲೀಟ್‌ ಮಾಡಿ: ನಟ ಅಜಯ್‌ ರಾವ್ ಮನವಿ

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರಾಗಿದ್ದ ಅಜಯ್‌ ರಾವ್‌, ಎಕ್ಸ್ಕ್ಯೂಸ್ ಮಿ ಚಿತ್ರದ ಬಹುದೊಡ್ಡ ಯಶಸ್ಸಿನ ಬಳಿಕ ತಾಜ ಮಹಲ್‌, ಪ್ರೇಮ್‌ ಕಹಾನಿ, ಕೃಷ್ಣನ್‌ ಲವ್‌ ಸ್ಟೋರಿ, ಕೃಷ್ಣ ರುಕ್ಕು ಸೇರಿದಂತೆ ಜನರಿಗೆ ತಲುಪುವ ಸಿನಿಮಾಗಳನ್ನೇ ಮಾಡುತ್ತಿದ್ದರು. ಅದಾದ ಮೇಲೆ ಅವರ ಕೆಲವು ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದು, ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಜಯ್‌ ರಾವ್‌ ಹೇಳಿಕೊಂಡಿದ್ದಾರೆ.

ನಟ ಅಜಯ ರಾವ್‌ ಇದೀಗ ವಿಶೇಷ ಕಥೆಯಾಗಿರುವ ಯುದ್ಧಕಾಂಡ ಸಿನಿಮಾವನ್ನು ತಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲೇ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಅಜಯ ರಾವ್‌ ತಮ್ಮ ಮೆಚ್ಚಿನ ಕಾರನ್ನು ಮಾರಾಟ ಮಾಡಿದ್ದಾರೆ. ಕಾರು ಮಾರಾಟವಾದ ವಿಷಯ ಕೇಳಿ ನಟನ ಪುಟಾಣಿ ಮಗಳು ಕಾರಿನ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು.

Kannada Actor Ajay Rao Appeals To Delete His Daughter Video From Social Media

ನಟ ಅಜಯ್‌ ರಾವ್ ಮಗಳ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕೆಲವು ನೆಗೆಟಿವ್‌ ಕಮೆಂಟ್‌ಗಳು ಕೂಡ ಬಂದಿದ್ದು, ಅಜಯ್‌ ರಾವ್ ತಮ್ಮ ಯುದ್ಧಕಾಂಡ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿಯಾಗಿ ವಿಡಿಯೋ ಹರಿಬಿಟ್ಟಿದ್ದಾರೆ ಎಂದು ಕೆಲವು ನೆಟ್ಟಿಗರು ಕಮೆಂಟ್‌ ಮಾಡಿದ್ದರು. ಇದೀಗ ಈ ಬಗ್ಗೆ ಸ್ವತಃ ನಟ ಅಜಯ್‌ ರಾವ್ ಮಾತನಾಡಿದ್ದಾರೆ.

Take a Poll

'ಈ ವಿಚಾರದ ಬಗ್ಗೆ ನಾನು ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ. ವಿಡಿಯೋ ವೈರಲ್‌ ಆಗಿದೆ. ಅದರ ಬಗ್ಗೆ ಈಗ ಸ್ಪಷ್ಟನೆ ಕೊಡುವುದು ಉಪಯೋಗವಿಲ್ಲದ ಕೆಲಸ. ಯಾರು ಇನ್ನೂ ಮುಂದೆ ಅದನ್ನು ಬಳಸಬೇಡಿ, ತೆಗೆದು ಬಿಡಿ' ಎನ್ನುವ ಮೂಲಕ ನಟ ಅಜಯ್‌ ರಾವ್ ಮಗಳ ವಿಡಿಯೋ ಡಿಲೀಟ್‌ ಮಾಡುವಂತೆ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Kannada Actor Ajay Rao Appeals To Delete His Daughter Video From Social Media

'ವಿಡಿಯೋ ಈ ರೀತಿ ವೈರಲ್‌ ಆಗಿರುವುದು ನನಗೆ ಕೂಡ ಇಷ್ಟ ಇಲ್ಲ. ಖಂಡಿತವಾಗಿಯೂ ಇದರ ಬಗ್ಗೆ ಬೇಜಾರಾಗುತ್ತದೆ. ಯಾರ್ಯಾರ ಹತ್ತಿರ ಆ ವಿಡಿಯೋ ಇದೆ, ಅವರು ಅದನ್ನು ತೆಗೆದು ಬಿಡಿ. ನನ್ನ ಮಗುಗೋಸ್ಕರ ತೆಗೆದು ಬಿಡಿ' ಎಂದು ಅಜಯ್‌ ರಾವ್ ಮನಸಾರೆ ಮನವಿ ಮಾಡಿಕೊಂಡಿದ್ದಾರೆ.

'ಆ ವಿಡಿಯೋ ಬಗ್ಗೆ ಇನ್ನೂ ಏನಾದರೂ ಹೇಳುವುದಾರೆ ದಯವಿಟ್ಟು ಅದನ್ನು ಡಿಲೀಟ್ ಮಾಡಿ. ಅದು ಕೂಡ ಮಕ್ಕಳ ಮೇಲಿನ ದೌರ್ಜನ್ಯ ಆಗುತ್ತದೆ. ಒಂದು ಹೆಣ್ಣು ಮಗು ಬೆಳೆಯುವಾಗ ಅದು ಅವಳಿಗೆ ಅವಮಾನ ಅನಿಸುತ್ತದೆ. ನಿಮಗೆ ಮಾನವೀಯತೆ ಇದ್ದರೆ, ಪ್ರಜ್ಞೆ ಇದ್ದರೆ ದಯವಿಟ್ಟು ಆ ವಿಡಿಯೋವನ್ನು ಡಿಲೀಟ್‌ ಮಾಡಿ' ಎಂದು ನಟ ಅಜಯ್‌ ರಾವ್ ಕೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+