Ramachari Serial: 'ಧಾರಾವಾಹಿಗಾಗಿ ಮೌನ ಗುಡ್ಡೆಮನೆ ಕೂದಲು ಕತ್ತರಿಸಿದ್ದು ನಿಜ'

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರಕ್ಕೆ ಜೀವ ತುಂಬಲು ನಟಿ ಮೌನ ಗುಡ್ಡೆಮನೆ ನಿಜವಾಗಿಯೂ ತಲೆ ಬೋಳಿಸಿಕೊಂಡಿದ್ದಾರಾ? ಹೀಗೊಂದು ಅನುಮಾನ ವೀಕ್ಷಕರಿಗೆ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದ್ದು, ಈ ಬಗ್ಗೆ ಸ್ವತಃ ಮೌನ ಗುಡ್ಡೆಮನೆ ಮಾತನಾಡಿದ್ದಾರೆ.

'ರಾಮಾಚಾರಿ ಧಾರಾವಾಹಿಯಲ್ಲಿ ಮೊದಲು ಚಾರು ಪಾತ್ರ ನೆಗೆಟಿವ್‌ ಆಗಿತ್ತು. ಯಾಕೆಂದರೆ ಒಬ್ಬ ಕಥಾ ನಾಯಕಿಯನ್ನು ನೆಗೆಟಿವ್‌ ಪಾತ್ರದಲ್ಲಿ ತೋರಿಸಿರುವುದು ಮೊದಲ ಬಾರಿ. ಆಗ ಜನ ಅಷ್ಟು ಇಷ್ಟ ಪಡುತ್ತಿರಲಿಲ್ಲ. ಏನಿವಳು ತುಂಡು ತುಂಡು ಬಟ್ಟೆ ಹಾಕಿಕೊಂಡು ಬರುತ್ತಾಳೆ. ಬಾಯಿ ಬಿಟ್ಟರೆ ರಾಮಚಾರಿಗೆ ಬೈತಾಳೆ. ಒಳ್ಳೆ ವಿಲನ್‌ ತರ ಆಡ್ತಾಳೆ ಅಂತಾ ಬೈಯುತ್ತಿದ್ದರು' ಎಂದರು.

Is Mouna Guddemane Shaves Head for Unique Role In Ramachari Serial

'ಈಗ ಚಾರು ರಾಮಾಚಾರಿ ಪ್ರೀತಿಗೋಸ್ಕರ ಬದಲಾಗಿದ್ದಾಳೆ. ಪ್ರೀತಿಗೋಸ್ಕರ ಅಥವಾ ಗಂಡನಿಗೋಸ್ಕರ ಏನು ಬೇಕದರೂ ಮಾಡುವಂತಹ ಸತಿ ಸಾವಿತ್ರಿ ತರ ಈಗ ಚಾರು ಬದಲಾಗಿದ್ದಾಳೆ. ಚಾರು ಪಾತ್ರ ತಲೆ ಬೋಳಿಸಿಕೊಂಡ ಬಗ್ಗೆ ತುಂಬಾಕಡೆಗಳಲ್ಲಿ ಮಾತಾಯಿತು. ಮೊದಲು ನನಗೆ ಈ ಬಗ್ಗೆ ಸ್ಕ್ರೀನ್‌ ಪ್ಲೇ ಹೇಳಿದಾಗ ಥ್ರಿಲ್‌ ಆಯ್ತು ಜೊತೆಗೆ ಸಿನಿಮಾ ಇದೆ ಅಂತಾ ಟೆನ್ಷನ್‌ ಕೂಡ ಆಯ್ತು. ಆದರೆ ಅವರು ಮೇಕಪ್‌ ಮಾಡ್ತೇವೆ ಭಯ ಬೇಡ ಅಂತಾ ಹೇಳಿದರು.'

Is Mouna Guddemane Shaves Head for Unique Role In Ramachari Serial

'ನನಗೆ ಖುಷಿ ಇದೆ ಯಾಕೆಂದರೆ ಎಲ್ಲರಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಸಿನಿಮಾದಲ್ಲಿಯೂ ಹಿರೋಯಿನ್‌ಗಳು ತಲೆ ಬೋಳಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಅದರಲ್ಲೂ ಕಿರುತೆರೆಯಲ್ಲಿ ಮೊದಲ ಬಾರಿಗೆ ಅಂದ ಎಲ್ಲಾ ಬಿಟ್ಟು ತೋರಿಸಿದ್ದು. ಕೂದಲು ಅಂತಾ ಬಂದಾಗ ಹೆಣ್ಣು ಮಕ್ಕಳಿಗೆ ಅದೇ ಅಂದ. ಹೀಗಾಗಿ ಕೂದಲು ಕತ್ತರಿಸುವ ಬಗ್ಗೆ ಗಟ್ಟಿ ಮನಸ್ಸು ಮಾಡಿನೇ ಒಪ್ಪಿಕೊಂಡೆ. ಜೊತೆಯಲ್ಲಿ ಖುಷಿಯಿಂದಲೇ ಒಪ್ಪಿಕೊಂಡೆ' ಎಂದರು.

Is Mouna Guddemane Shaves Head for Unique Role In Ramachari Serial

'ನನಗೆ ಒಂದು ವಿಭಿನ್ನವಾಗಿರುವ ಪಾತ್ರ ಸಿಕ್ಕಿತೆಲ್ಲಾ ಎನ್ನುವ ಖುಷಿ ಇದೆ. ಉದ್ದ ಕೂದಲನ್ನು ಕತ್ತರಿಸಿಕೊಳ್ಳಲು ಹೇಳಿದರು. ಯಾಕೆಂದರೆ ಉದ್ದ ಕೂದಲಿಗೆ ವಿಗ್‌ ಫಿಕ್ಸ್‌ ಮಾಡಲು ಆಗುವುದಿಲ್ಲ ಅಂತಾ' ಎನ್ನುವ ಮೂಲಕ ಚಾರು ಪಾತ್ರಕ್ಕಾಗಿ ಕೂದಲು ಕತ್ತರಿಸಿಕೊಂಡ ಬಗ್ಗೆ ಮೌನ ಗುಡ್ಡಿಮನೆ ಮಾತನಾಡಿದ್ದಾರೆ.

'ನಾನು ಈ ಸಮಯದ ಶೂಟಿಂಗ್‌ ಅನ್ನು ಎಂಜಾಯ್‌ ಮಾಡಿದೆ. ಸಿನಿಮಾಗಳಲ್ಲಿ ಆ ವಿಗ್‌ ಅನ್ನು ಎರಡರಿಂದ ಮೂರು ಗಂಟೆ ಹಾಕಿಕೊಳ್ಳುತ್ತಾರೆ. ಆದರೆ ನಾನು ಬೆಳ್ಳಗೆಯಿಂದ ಸಂಜೆವರೆಗೆ ವಿಗ್‌ ಹಾಕಿಕೊಳ್ಳಬೇಕಿತ್ತು. ನಾನಿರುವುದು ನೋಡಿ ಮೇಕಪ್‌ ಅವರೇ ಶಾಕ್‌ ಆದರು. ಈ ವಿಗ್‌ ಅಷ್ಟು ಹೊತ್ತೆಲ್ಲ ಇರಲ್ಲ ಆದರೆ ನೀವು ಹೇಗೆ ಇಷ್ಟು ಹೊತ್ತು ಇಟ್ಟುಕೊಂಡಿದ್ದೀರಿ ಅಂತಾ ನನ್ನನ್ನೇ ಕೇಳಿದರು. ಹೊಸ ರೀತಿಯ ಪಾತ್ರ ಮಾಡಿರುವುದಕ್ಕೆ ನನಗೆ ಖುಷಿ ಇದೆ' ಎಂದು ಫಿಲ್ಮೀ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಈ ಮೂಲಕ ಧಾರಾವಾಹಿಗಾಗಿ ಮೌನ ಕೂದಲು ಕತ್ತರಿಸಿದ್ದು ನಿಜ ಆದರೆ ಸಂಪೂರ್ಣವಾಗಿ ಅಲ್ಲ ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+