ಪಾರು-ಶಿವು ರೀಲ್‌ ಅಲ್ಲ ರಿಯಲ್‌ ಜೋಡಿ: ಪ್ರೀತಿಯಲ್ಲಿ ಬಿದ್ದ ರೌಡಿಬೇಬಿ?

ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಅಮೂಲ್ಯ ಪಾತ್ರದಿಂದ ಜನಪ್ರಿಯತೆ ಪಡೆದಿದ್ದ ನಿಶಾ ರವಿಕೃಷ್ಣನ್, ಅಣ್ಣಯ್ಯ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಂಬ್ಯಾಕ್‌ ಮಾಡಿದ್ದಾರೆ. ಕಿರುತೆರೆಯಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಿಶಾ, ಈ ಧಾರಾವಾಹಿಯಲ್ಲಿ ಪಾರ್ವತಿ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ಶಿವು ಇಬ್ಬರು ಈಗೀಗ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಆದರೆ ಪಾರು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ಸತ್ಯ ಇನ್ನೂ ಶಿವುಗೆ ಇನ್ನೂ ಗೊತ್ತಾಗಿಲ್ಲ. ಪಾರು ಮಾತ್ರ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾಳೆ. ರೀಲ್‌ನಲ್ಲಿ ಅಂದರೆ ತೆರೆ ಮೇಲೆ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ರಿಯಲ್‌ ಲೈಫ್‌ನಲ್ಲೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ದೊಡ್ಡ ಅನುಮಾನ ಪ್ರೇಕ್ಷಕರ ತಲೆ ಹೊಕ್ಕಿದೆ. ಇದಕ್ಕೆ ಕಾರಣಗಳು ಕೂಡ ಇದೆ.

Is Actress Nisha Ravikrishnan Falling In Love With Vikash Uthaiah

ನಿಶಾ ಹಾಗೂ ಶಿವು ಪಾತ್ರ ಮಾಡುತ್ತಿರುವ ವಿಕಾಶ್‌ ಉತ್ತಯ್ಯ ಜೋಡಿಗೆ ನೋಡಗರು ಈಗಾಗಲೇ ಫಿದಾ ಆಗಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲಿ ಕೂಡ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವೇಳೆ ನಡೆದ ಘಟನೆಯೊಂದು ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದಕ್ಕೆ ಇಂಬುಕೊಟ್ಟಿದೆ. ಹೌದು ರಿಯಾಲಿಟಿ ಶೋವೊಂದರಲ್ಲಿ ನಿಶಾ ಅವರು ತಮ್ಮ ಅಮ್ಮನಿಗೆ ಕರೆ ಮಾಡಿ ನಾನು ಒಂದು ಹುಡುಗ ಇಷ್ಟಪಡುತ್ತಿದ್ದೇನೆ ಎನ್ನುತ್ತಿದ್ದಂತೆ ಅವರ ತಾಯಿ ಅದು ಗೊತ್ತಿರುವ ವಿಚಾರ, ನಿಶಾನ ವಿಕಾಶ್‌ ಪ್ರತಿ ದಿನ ಮನೆಗೆ ಡ್ರಾಪ್ ಮಾಡೋದು ಅಂತ ಹೇಳುತ್ತಾರೆ. ಅಂದಿನಿಂದ ಈ ಜೋಡಿ ಎಲ್ಲೇ ಹೋದರು ಎಲ್ಲರ ಕಣ್ಣು ಇವರ ಮೇಲೆ ಇರುತ್ತದೆ.

Is Actress Nisha Ravikrishnan Falling In Love With Vikash Uthaiah

ಬಳಿಕ ಸರಿಗಮಪ ವೇದಿಕೆ ಮೇಲೆಯೂ ಅನುಶ್ರೀ ಈ ಜೋಡಿಯ ಕಾಲೆಳೆದಿದ್ದರು. ಅಲ್ಲದೇ ವಿಕಾಶ್‌ ಉತ್ತಯ್ಯ ಈ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಅಪಾಯವಿದೆ ಎಚ್ಚರಿಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡಿಗೆ ನಿಶಾ ರವಿಕೃಷ್ಣನ್ ಹಾಗೂ ವಿಕಾಶ್‌ ಉತ್ತಯ್ಯ ಜೋಡಿ ಸಖತ್‌ ರೊಮ್ಯಾಂಟಿಕ್ ಆಗಿ ರೀಲ್ಸ್ ಮಾಡಿದ್ದರು. ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದಲ್ಲದೇ ಈ ಜೋಡಿಯ ಮೋಡಿಗೆ ನೋಡುಗರು ಫಿದಾ ಆಗಿದ್ದರು. ಇನ್ನು ಅಪಾಯವಿದೆ ಎಚ್ಚರಿಕೆ ಸಿನಿಮಾ ಸೆಲೆಬ್ರೆಟಿ ಶೋ ಸಮಯದಲ್ಲಿಯೂ ನಿಶಾ ರವಿಕೃಷ್ಣನ್, ವಿಕಾಶ್‌ ಉತ್ತಯ್ಯ ಅವರ ಜೊತೆಯಲ್ಲೇ ಕೈಹಿಡಿದುಕೊಂಡು ನಿಂತಿದ್ದ ವಿಡಿಯೋಗಳು ವೈರಲ್‌ ಆಗಿದೆ. ಹೀಗಾಗಿ ಪಾರು-ಶಿವು ಜೋಡಿ ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+