Kaavya Sha: 'ಆ ವಿಡಿಯೋವನ್ನು ಬೈಯೋರೇ ಜಾಸ್ತಿ ನೋಡ್ತಾರೆ'

ನಟಿ, ನಿರೂಪಕಿಯಾಗಿ ಮಿಂಚಿದ್ದ ಕಾವ್ಯ ಶಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆ್ಯಕ್ವಿವ್‌ ಆಗಿದ್ದಾರೆ. ಕಾವ್ಯ ಶಾ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ನೈಜವಾಗಿರುವ ಅವರ ಅಭಿನಯಕ್ಕೆ ಮನಸೋತು ಲೈಕ್‌ ಕೊಡದವರಿಲ್ಲ ಎನ್ನುವಂತಾಗಿದೆ. ಹೊಸ ಹೊಸ ವಿಷಯಗಳನ್ನಿಟ್ಟುಕೊಂಡು ವಿಡಿಯೋ ಮಾಡುವ ಕಾವ್ಯ ಶಾ ಕಂಟೆಂಟ್‌ ಕ್ರಿಯೇಟರ್ ಆಗಿದ್ದೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮಿರರ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಮ್ಮ ಪ್ರತಿಭೆ ತೋರಿಸಲು ಒಂದು ವೇದಿಕೆ ಸೃಷ್ಟಿಯಾಗಿದ್ದ ಕಾರಣ ಮೊದಲು ನಾನು ಡಾನ್ಸ್‌ ರೀಲ್ಸ್‌ಗಳನ್ನೆಲ್ಲಾ ಮಾಡುತ್ತಿದೆ. ಇನ್ನೂ ಏನಾದರೂ ಬೇರೆ ಮಾಡಬೇಕು ಅಂತಾ ನನಗೆ ಗೊತ್ತಾಗುತ್ತಿತ್ತು. ಜೊತೆಗೆ ಇತರ ಕಂಟೆಂಟ್‌ ಕ್ರಿಯೆಟರ್‌ಗಳು ನನ್ನ ಮೇಲೆ ಪರಿಣಾಮ ಬೀರಿದ್ದಾರೆ. ಮೊದಲು ಪ್ರಯತ್ನ ಮಾಡೋಣ ಅಂತಾ ಒಂದು ವಿಡಿಯೋ ಮಾಡದೇ ಅದು ತುಂಬಾ ಚೆನ್ನಾಗಿ ಓಡೋಕೆ ಶುರುವಾಯ್ತು. ಆಮೇಲೆ ನನಗೆ ನಾನು ಮಾಡ್ತಿರೋದು ಸರಿ ಇದೆ ಎನಿಸಿ ಮುಂದುವರಿಸಿದೆ' ಎಂದರು.

How Actress And Anchor Kavya Shah Became A Content Creator

'ಕಲಾವಿದರು ಎಲ್ಲಿ ನಟನೆ ಮಾಡಿದರೂ ಕೂಡ ಅದು ಅವರ ಪ್ರತಿಭೆನೇ. ಒಳ್ಳೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾಗ ಯಾವುದೋ ಒಂದು ಅವಾರ್ಡ್‌ ಬಂದಿರುವುದಿಲ್ಲ. ಇಲ್ಲ ಹಣ ಬಂದಿರುವುದಿಲ್ಲ. ಅಥವಾ ಜನ ನೋಡಿರುವುದಿಲ್ಲ. ಜೀವನದಲ್ಲಿ ಈ ರೀತಿ ಏನಾದರೂ ಆಗಿರುತ್ತದೆ. ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರೀಲ್ಸ್‌ ಅಲ್ಲಿ ಜನ ಅಲ್ಲೇ ಡ್ರಾ, ಅಲ್ಲೇ ಬಹುಮಾನ ರೀತಿ ಕಮೆಂಟ್‌ ಹಾಕ್ತಾರೆ. ಇಷ್ಟ ಇಲ್ಲ ಅಂದರೆ ಅಲ್ಲಿಯೇ ಬೈಯ್ಯುತ್ತಾರೆ. ನಾವು ಸಮಯ ಕೊಟ್ಟು ಮಾಡುವ ರೀಲ್ಸ್‌ಗೆ ಜನ ಇಷ್ಟಪಟ್ಟು ಲೈಕ್‌ ಮಾಡ್ತಾರೆ, ಕಮೆಂಟ್‌ ಮಾಡುತ್ತಾರೆ. ಮೆಸೇಜ್‌ ಮಾಡುತ್ತಾರೆ ಇದು ತುಂಬಾ ಖುಷಿ ಕೊಡುತ್ತದೆ' ಎಂದು ಹೇಳಿದರು.

ಮದುವೆಯಾದ ಮೇಲೂ ಬಾಯ್‌ ಫ್ರೆಂಡ್‌& ಗರ್ಲ್‌ ಫ್ರೆಂಡ್‌ ವಿಡಿಯೋ ಮಾಡ್ತಿರಾ ಅಂತಾ ಕೆಟ್ಟ ಕಮೆಂಟ್‌ಗಳನ್ನು ಹಾಕುವವರ ಬಗ್ಗೆ ಮಾತನಾಡಿದ ಅವರು, 'ನಾನು ಒಬ್ಬಳು ನಟಿ. ನಾನು ಯಾವುದೇ ಪಾತ್ರ ಕೊಟ್ಟರೂ ಮಾಡುತ್ತೇನೆ. ಆದರೆ ಪಾತ್ರ ನೈಜವಾಗಿರಬೇಕು. ಆ ಲೆಕ್ಕದಲ್ಲಿ ನೋಡಿದರೆ ನನ್ನದು ಜಾಸ್ತಿ ಓಡುವ ವಿಡಿಯೋ ಬಾಯ್‌ ಫ್ರೆಂಡ್‌& ಗರ್ಲ್‌ ಫ್ರೆಂಡ್‌ ವಿಡಿಯೋ. ಜನ ಅಷ್ಟೊಂದು ಇಷ್ಟಪಡುತ್ತಾರೆ' ಎನ್ನುವ ಮೂಲಕ ರೀಲ್ಸ್‌ನಲ್ಲಿ ಈ ವಿಡಿಯೋಗಳನ್ನು ನೋಡಿ ಬೈಯೋರೆ ಜಾಸ್ತಿ ನೋಡುತ್ತಾರೆ ಎಂದರು.

How Actress And Anchor Kavya Shah Became A Content Creator

'ಯಾಕೆಂದರೆ ಎಲ್ಲಾ ಜೀವನದಲ್ಲಿಯೂ ಅದು ಆಗಿರುತ್ತದೆ. ನಿಜ ಹೇಳಬೇಕು ಅಂದರೆ ಈ ವಿಡಿಯೋ ಜನರಿಗೆ ಹೆಚ್ಚು ಹತ್ತಿರವಾಗುತ್ತದೆ. ಕೆಲವೊಂದು ಸಲ ನೆಗೆಟಿವ್‌ ಕಮೆಂಟ್‌ಗಳು ಕೂಡ ಬರುತ್ತದೆ. ನನ್ನ ಪ್ರಕಾರ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು. ಅದು ಒಂದು ಪಾತ್ರ. ರೀಲ್ಸ್‌ನ ರೀಲ್ಸ್‌ ತರನೇ ನೋಡಬೇಕು' ಎಂದು ಹೇಳಿದರು.

'ನಾನು ನನ್ನ ಸುತ್ತಲಿರುವ ಪಾತ್ರಗಳನ್ನೇ ಹೆಚ್ಚಾಗಿ ಮಾಡುತ್ತೇನೆ. ನನ್ನ ಸುತ್ತಲಿರುವ ಅಮ್ಮ, ನನ್ನ ಫ್ರೆಂಡ್ಸ್‌ ಇವರನ್ನು ಹೆಚ್ಚಾಗಿ ಗಮನಿಸುತ್ತೇನೆ. ನಾನು ಆ ಜಾಗದಲ್ಲಿದ್ದರೆ ಏನು ಮಾಡುತ್ತಿದೆ ಅಂತಾ ಫೀಲ್‌ ಮಾಡಿಕೊಂಡು ರೀಲ್ಸ್‌ ಕಂಟೆಂಟ್‌ಗಳನ್ನು ಮಾಡುತ್ತೇನೆ. ನಾನು ನನ್ನ ಸುತ್ತಮುತ್ತಲಿನವರಿಮದಲೇ ರೀಲ್ಸ್‌ ವಿಷಯವನ್ನು ತೆಗೆದುಕೊಳ್ಳುತ್ತೇನೆ. ಒಂದೊಂದು ಬಾರಿ ಮಧ್ಯ ರಾತ್ರಿಯಲ್ಲೂ ಐಡಿಯಾ ಬರುತ್ತದೆ. ಮೊಬೈಲ್‌ಅಲ್ಲಿ ಬರೆದುಕೊಂಡು ಮಾರನೇ ದಿನ ಅದನ್ನು ವಿಡಿಯೋ ಮಾಡುತ್ತೇನೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+