Shiva Rajkumar: ಚಿಕಿತ್ಸೆಗೂ ಮುನ್ನ ಮುಡಿಕೊಟ್ಟ ಶಿವಣ್ಣ: ಫೋಟೋ ವೈರಲ್
ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಭೈರತಿ ರಣಗಲ್ ಚಿತ್ರದ ಯಶಸ್ಸಿನ ಬಳಿಕ ತಮ್ಮ ಮುಂದಿನ ಚಿತ್ರಗಳ ಬಹುತೇಕ ಕೆಲಸಗಳೆನೆಲ್ಲಾ ಮುಗಿಸಿ, ಉಳಿದ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಶಿವಣ್ಣ ಶೀಘ್ರದಲ್ಲೇ ವಿದೇಶಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಇದ್ದು, ಈ ನಡುವೆ ಶಿವಣ್ಣ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ಕೆಲವು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ,ಚಿಕಿತ್ಸೆ ಪಡೆದುಕೊಳ್ಳುವುದರ ಜೊತೆ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಸಹ ಬ್ಯೂಸಿಯಾಗಿದ್ದರು. ಆದರೆ ಇದೀಗ ಆರೋಗ್ಯದ ಹಿತದೃಷ್ಟಿಯಿಂದ ಸಂಪೂರ್ಣ ಒಂದು ತಿಂಗಳು ವಿರಾಮ ತೆಗೆದುಕೊಂಡು ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ.

ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುವ ಮುನ್ನ ಶಿವರಾಜ್ಕುಮಾರ್ ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದಾರೆ. ತಿರುಪತಿಯಲ್ಲಿ ಮುಡಿ ಕೊಟ್ಟಿರುವ ಶಿವಣ್ಣ ವಿಶೇಷ ಪೂಜೆ ಸಲ್ಲಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಲೆ ಕೂದಲು ತೆಗೆದಿರುವ ಶಿವಣ್ಣ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗುರುತೇ ಸಿಗದಷ್ಟು ಶಿವಣ್ಣ ಬದಲಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶಿವರಾಜ್ಕುಮಾರ್ ಅಮೇರಿಕಾಗೆ ತೆರಳಲಿದ್ದು, ಈ ನಡುವೆ ಇನ್ನಷ್ಟು ಕೆಲವು ತೀರ್ಥ ಕ್ಷೇತ್ರಗಳಿಗೆ ಶಿವಣ್ಣ ಹಾಗೂ ಕುಟುಂಬಸ್ಥರು ಭೇಟಿ ನೀಡುವ ಸಾಧ್ಯತೆ ಇದೆ.
ಎವರ್‌ಗ್ರೀನ್ ಎಂಗ್ ಆ್ಯಂಡ್ ಎನೆರ್ಜಿಟಿಕ್ ಹೀರೋ ಶಿವಣ್ಣ, ಅರವತ್ತು ಪ್ಲಸ್ ವಯಸ್ಸಾದರೂ ಸಾಲು ಸಾಲು ಸಿನಿಮಾಗಳು, ಕಿರುತೆರೆ ಶೋಗಳು, ಸಿನಿಮಾ ಇವೆಂಟ್‌ಗಳು ಹೀಗೆ ಸದಾ ಬ್ಯೂಸಿಯಾಗಿದ್ದರು. ಈ ಮಧ್ಯೆ ಶಿವಣ್ಣ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಹೊರಬಿದ್ದಿತ್ತು. ಈ ಬಗ್ಗೆ ಸ್ವತಃ ಶಿವಣ್ಣ ಈ ಹಿಂದೆ ಮಾತನಾಡಿದ್ದರು.
'ಮೂರು ನಾಲ್ಕು ತಿಂಗಳಿಂದ ಹುಷಾರಿಲ್ಲ. ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ನಡೆಯುತ್ತಿದೆ ಎಂದಿದ್ದರು. ಅಲ್ಲದೇ ಆರೋಗ್ಯದ ವಿಚಾರದಲ್ಲಿ ಏನೂ ಮಾಡಲು ಆಗುವುದಿಲ್ಲ. ಒಮ್ಮೊಮ್ಮೆ ಇಂತಹ ಸಂದರ್ಭಗಳು ಬರುತ್ತದೆ. ಬಂದಾಗ ಏನೂ ಮಾಡಲು ಆಗುವುದಿಲ್ಲ. ನಾವು ಎದುರಿಸಬೇಕು. ಸ್ವಲ್ಪ ಭಯ ಇರುತ್ತದೆ. ಆದರೆ ಧೈರ್ಯವಾಗಿ ಎದುರಿಸಬೇಕು. ಕುಟುಂಬ ಜೊತೆಗೆ ಇದೆ, ಕನ್ನಡ ಚಿತ್ರರಂಗ ಜೊತೆಗೆ ಇದೆ. ಹೀಗಾಗಿ ಎಲ್ಲವನ್ನೂ ಎದುರಿಸೋಣ' ಎಂದು ಶಿವಣ್ಣ ಹೇಳಿದ್ದರು. ಶಿವಣ್ಣಗೆ ಏನಾಗಿದೆ ಎನ್ನುವುದು ಈವರೆಗೂ ತಿಳಿದು ಬಂದಿಲ್ಲ. ಆದರೆ ಎಂತಹದ್ದೇ ಆರೋಗ್ಯ ಸಮಸ್ಯೆ ಇದ್ದರೂ ಶಿವಣ್ಣ ಬೇಗ ಚೇತರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ಮರಳಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಆಶಯ.











Click it and Unblock the Notifications