Gold Suresh: ಮತ್ತೆ ಬಿಗ್‌ಬಾಸ್ ಮನೆಗೆ ಗೋಲ್ಡ್ ಸುರೇಶ್ ಎಂಟ್ರಿ ?!
ಕನ್ನಡ ಬಿಗ್‌ಬಾಸ್ ಸೀಸನ್ 11ರಲ್ಲಿ ಅರ್ಧಕ್ಕೆ ತಮ್ಮ ಪಯಣವನ್ನು ಮುಗಿಸಿರುವ ಗೋಲ್ಡ್ ಸುರೇಶ್ ಅವರು ಮತ್ತೆ ಬಿಗ್‌ಬಾಸ್ ಮನೆಗೆ ಬರುವ ಬಗ್ಗೆ ಮಾತನಾಡಿದ್ದಾರೆ. ಹೌದು ಈ ಬಾರಿಯ ಕನ್ನಡ ಬಿಗ್‌ಬಾಸ್‌ನಲ್ಲಿ ಹಲವರು ತಮ್ಮ ಬಿಗ್‌ಬಾಸ್ ಜರ್ನಿಯನ್ನು ಅರ್ಧಕ್ಕೆ ಮುಗಿಸಬೇಕಾದ ಅನಿವಾರ್ಯತೆ ಎದುರಾಯ್ತು ಅದರಲ್ಲಿ ಲಾಯರ್ ಜಗದೀಶ್ ಹಾಗೂ ಗೋಲ್ಡ್ ಸುರೇಶ್ ಪ್ರಮುಖರು. ಗೋಲ್ಡ್ ಸುರೇಶ್ ಅವರು ಏಕಾಏಕಿ ಹಾಗೂ ಯಾವುದೇ ತಪ್ಪು ಮಾಡದೆ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿರುವುದಕ್ಕೆ ಹಲವು ಬಿಗ್‌ಬಾಸ್ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಗೋಲ್ಡ್ ಸುರೇಶ್ ಅವರು ಬಿಗ್‌ಬಾಸ್ ಮನೆಗೆ ಮತ್ತೆ ಬರುವ ಬಗ್ಗೆ ಚರ್ಚೆ ನಡೆದಿದೆ. ಅವರು ಬಿಗ್‌ಬಾಸ್ ಮನೆಗೆ ಮತ್ತೆ ಬರುವುದು ಕನ್ಫರ್ಮಾ, ಗೋಲ್ಡ್ ಸುರೇಶ್ ಅವರು ಇದರ ಬಗ್ಗೆ ಹೇಳಿದ್ದು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಗೋಲ್ಡ್ ಸುರೇಶ್ ಅವರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ಗೆ ಹೋಗುವುದಕ್ಕೂ ಮುಂಚೆ ಅವರು ಈ ವ್ಯವಹಾರಗಳು ಹಾಗೂ ದುಡ್ಡು ಕಾಸಿನ ವ್ಯವಹಾರಗಳನ್ನು ಅವರ ಪತ್ನಿಗೆ ಕೊಟ್ಟು ಹೋಗಿದ್ದರು. ಆದರೆ, ಅವರಿಂದ ಇದನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರು ಬಿಗ್‌ಬಾಸ್ ಮನೆಯಿಂದ ಏಕಾಏಕಿ ಹೊರಕ್ಕೆ ಬರುವ ವಾತಾವರಣ ನಿರ್ಮಾಣವಾಗಿತ್ತು ಎನ್ನುವುದು ಈಗ ಹೊರ ಬರುತ್ತಿದೆ. ಇದನ್ನೆಲ್ಲ ಸೆಟಲ್ ಮಾಡಿ ಅವರು ಮತ್ತೆ ಅವರು ಬಿಗ್‌ಬಾಸ್ ಮನೆಗೆ ಬರಬೇಕು ಎಂದು ಹಲವರು ಆಸೆಪಟ್ಟಿದ್ದರು. ಪ್ರೇಕ್ಷಕರ ಆಸೆ ಇದೀಗ ಈಡೇರುವ ಸಮಯ ಬಂದಂತೆ ಇದೆ. ಈ ಬಗ್ಗೆ ಗೋಲ್ಡ್ ಸುರೇಶ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ಮನೆಯಿಂದಲೇ ನಾನು ಮಾತನಾಡುತ್ತಿದ್ದೇನೆ ಎಂದು ಗೋಲ್ಡ್ ಸುರೇಶ್ ಅವರು ಮಾತನಾಡಿರುವ ವಿಡಿಯೋವನ್ನು ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ನಾನು ಬಿಗ್‌ಬಾಸ್‌ನಿಂದ ಹೊರಗೆ ಯಾಕೆ ಬಂದಿದ್ದೇನೆ ಎನ್ನುವ ಕುತೂಹಲ ನಿಮಗೆಲ್ಲರಿಗೂ ಇದೆ. ಆ ಜರ್ನಿ ದೊಡ್ಡ ರೋಚಕವಾಗಿತ್ತು. ಬಿಗ್‌ಬಾಸ್ ಸೆಲೆಕ್ಟ್ ಆದಾಗ ಖುಷಿಯಾಗಿತ್ತು. ಸಡನ್ ಆಗಿ ಯಾಕೆ ಹೊರಗೆ ಬಂದೆ ಎನ್ನುವ ಕುತೂಹಲ ಇದೆ. ನಾನು ಬ್ಯುಸಿನೆಸ್ ಮಾಡುತ್ತಿದ್ದೆ. ನಾನು ಮಾಡುವುದು ಅದರ ಜವಾಬ್ದಾರಿಯನ್ನು ಕೊಡುವುದು ಅದನ್ನು ನಿಬಾಯಿಸುವುದು ಭಿನ್ನವಾಗಿರುತ್ತೆ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ.
ನನ್ನ ಪತ್ನಿ ಇದನ್ನೆಲ್ಲ ನಾನು ಬಿಗ್‌ಬಾಸ್‌ನಲ್ಲಿ ಇರುವಾಗ ನಿಭಾಯಿಸುತ್ತಿದ್ದರು. ಆದರೆ, ಅವರಿಗೆ ಕೆಲಸದ ಒತ್ತಡ ಆಗಿದೆ. ಇದೀಗ ವ್ಯವಹಾರದಲ್ಲಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗಿದೆ ಎಂದು ಗೋಲ್ಡ್ ಸುರೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿಯನ್ನು ನಾನು ಮರೆಯುವುದಿಲ್ಲ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮತ್ತೆ ಬಿಗ್‌ಬಾಸ್‌ಗೆ ಹೋಗುವುದಕ್ಕೆ ಸಿದ್ಧ
ಬಿಗ್‌ಬಾಸ್‌ಗೆ ಮತ್ತೆ ಹೋಗುವುದರ ಬಗ್ಗೆ ಗೋಲ್ಡ್ ಸುರೇಶ್ ಅವರು ಮಾತನಾಡಿದ್ದಾರೆ. ಬಿಗ್‌ಬಾಸ್‌ಗೆ ಹೋಗುವುದಕ್ಕೆ ಮತ್ತೆ ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಹೋಗುತ್ತೇನೆ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ. ನಾನು ಸಂತೋಷದಿಂದ ಬಿಗ್‌ಬಾಸ್ ಮನೆಗೆ ಹೋಗುವುದಕ್ಕೆ ರೆಡಿಯಾಗಿದ್ದೇನೆ ಎಂದಿದ್ದಾರೆ. ಗೋಲ್ಡ್ ಸುರೇಶ್ ಅವರ ಪರವಾಗಿ ನೂರಾರು ಜನ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ, ಅವರು ಮತ್ತೆ ಬಿಗ್‌ಬಾಸ್‌ನಿಂದ ಅವಕಾಶ ಸಿಕ್ಕರೆ ಹೋಗುತ್ತೇನೆ ಎಂದಿರುವುದರಿಂದ ಬಿಗ್‌ಬಾಸ್ ಅವರನ್ನು ಕರೆಸಿಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.












Click it and Unblock the Notifications