Gold Smuggling Case: ದುಬೈನಿಂದ 49 ಕೆ.ಜಿ ಚಿನ್ನ ತಂದಿದ್ದಕ್ಕೆ ರನ್ಯಾ ರಾವ್‌ಗೆ ಸಿಕ್ಕ ಕಮಿಷನ್‌ ಎಷ್ಟು?

ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಸಂಬಂಧ ಹಲವು ಶಾಕಿಂಗ್‌ ವಿಚಾರಗಳು ತನಿಖೆ ವೇಳೆ ಹೊರಬರುತ್ತಿವೆ. ರನ್ಯಾ ರಾವ್ ಕಳ್ಳಸಾಗಣೆ ಮಾಡಿದ್ದ ಭಾರಿ ಪ್ರಮಾಣ ಚಿನ್ನವನ್ನು ಚಿನ್ನಾಭರಣ ವ್ಯಾಪಾರಿ ಸಾಹಿಲ್‌ ಸಖಾರಿಯಾ ಜೈನ್‌ ಮಾರಾಟ ಮಾಡಿದ್ದು, ನಾಲ್ಕು ತಿಂಗಳಲ್ಲಿ ರನ್ಯಾ ಎಷ್ಟು ಕೆಜಿ ಚಿನ್ನ ಸಾಗಿಸಿದ್ದರು? ಹಾಗೂ ಸ್ಮಗ್ಲಿಂಗ್‌ ಚಿನ್ನವನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದನ್ನ ರೆವಿನ್ಯೂ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಅಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ರನ್ಯಾ ಅವರು 2024ರ ನವೆಂಬರ್‌ನಿಂದ 2025ರ ಫೆಬ್ರುವರಿ ನಡುವೆ ಒಟ್ಟು ನಾಲ್ಕು ಬಾರಿ ಚಿನ್ನ ಸ್ಮಗ್ಲಿಂಗ್‌ ಮಾಡಿದ್ದಾರೆ. ಈ ವೇಳೆ ಬರೋಬ್ಬರಿ 49.6 ಕೆ.ಜಿ ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ಸಾಗಾಟ ಮಾಡಿದ್ದಾರೆ. ಆ ಚಿನ್ನವನ್ನು ಸಾಹಿಲ್‌ 40.07 ಕೋಟಿಗೆ ಮಾರಾಟ ಮಾಡಿದ್ದಾನೆ. ಅದರಲ್ಲಿ 38.35 ಕೋಟಿ ರೂಪಾಯಿಯನ್ನ ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದು, ಉಳಿದ 1.72 ಕೋಟಿ ರೂಪಾಯಿಯನ್ನ ರನ್ಯಾಗೆ ಕಮೀಷನ್‌ ಆಗಿ ನೀಡಲಾಗಿದೆ ಎಂದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.

Gold Smuggling Case Actress Ranya Rao Received Crores In Commission Money

ರನ್ಯಾ ರಾವ್‌ 4 ತಿಂಗಳಲ್ಲೇ 49.6 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ತಂದಿದ್ದಾರೆ. ಕಳೆದ ನವೆಂಬರ್‌ನಲ್ಲೂ ರನ್ಯಾ 8.9 ಕೆ.ಜಿ ಚಿನ್ನ ತಂದಿದ್ದು, ಸಾಹಿಲ್‌ ಅದನ್ನು 6.82 ಕೋಟಿ ರೂಪಾಯಿಗೆ ಮಾರಿದ್ದಾನೆ. ಅದರಲ್ಲಿ 6.50 ಕೋಟಿ ಹಣವನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದರೆ, ಉಳಿದ 32 ಲಕ್ಷ ಹಣವನ್ನ ರನ್ಯಾಗೆ ನೀಡಿದ್ದ ಎಂದು ತಿಳಿದುಬಂದಿದೆ.

ಡಿಸೆಂಬರ್‌ನಲ್ಲಿ ತಂದ 12.6 ಕೆ.ಜಿ ಚಿನ್ನಕ್ಕೆ 9.90 ಕೋಟಿಗೆ ಮಾರಾಟ ಮಾಡಿದ್ದ. ಅದರಲ್ಲಿ 30 ಲಕ್ಷ ರನ್ಯಾಗೆ ಪಾವತಿ ಮಾಡಿದ್ದ. ಈ ವರ್ಷದ ಜನವರಿಯಲ್ಲಿ ರನ್ಯಾ ಕಳ್ಳಸಾಗಣೆ ಮೂಲಕ ತಂದಿದ್ದ 14.5 ಕೆ.ಜಿ. ಬಂಗಾರವನ್ನು ಬರೋಬ್ಬರಿ 11.55 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅದರಲ್ಲಿ 55 ಲಕ್ಷವನ್ನು ರನ್ಯಾ ಕಮೀಷನ್‌ ರೂಪದಲ್ಲಿ ಪಡೆದಿದ್ದರು. ಫೆಬ್ರವರಿಯಲ್ಲಿ 13.4 ಕೆ.ಜಿ. ಚಿನ್ನವನ್ನು ರನ್ಯಾ ಸ್ಮಗ್ಲಿಂಗ್‌ ಮಾಡಿದ್ದರು. ಇದನ್ನ 11.80 ಕೋಟಿ ರೂಪಾಯಿಗೆ ಮಾರಾಟ ಮಾಡಿ, ರನ್ಯಾ ಅವರಿಗೆ 55 ಲಕ್ಷ ಶೇರ್‌ ನೀಡಿದ್ದ ಎಂಬುದನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Take a Poll

ಈ ಸಂಬಂಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ್ದು, ಈ ಕೇಸ್‌ನಲ್ಲಿ ಚಿನ್ನ ಸಾಗಾಟ, ಹಣ ವರ್ಗಾವಣೆ ಮತ್ತು ಚಿನ್ನದ ಮಾರಾಟವನ್ನು ಹೇಗೆ ಮಾಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ.

ಕೋಡ್‌ ವರ್ಡ್‌ಗಳ ಬಳಕೆ

ರನ್ಯಾ ರಾವ್‌ ಚಿನ್ನ ಸ್ಮಗ್ಲಿಂಗ್‌ ಮಾಡಲು ಹಲವು ಕೋಡ್‌ವರ್ಡ್‌ಗಳನ್ನು ಬಳಸಿರುವುದು ಕೂಡ ಬೆಳಕಿಗೆ ಬಂದಿದೆ. ರನ್ಯಾ ರಾವ್ ಮೊಬೈಲ್‌ನಲ್ಲಿ ಒಂದು ನಂಬರ್‌ ಸೇವ್‌ ಆಗಿದ್ದು, ಈ ನಂಬರ್‌ನಿಂದ ಚಿನ್ನ ಕಳ್ಳಸಾಗಾಣಿಕೆ ಸಂಬಂಧ ಶಾಕಿಂಗ್‌ ವಿಚಾರಗಳು ಹೊರಬಿದ್ದಿವೆ. ರನ್ಯಾ ಫೋನ್‌ನಲ್ಲಿ "ಎಯು ಬೆಂಗಳೂರು ಡಿಸ್ಪ್ಯಾಚ್‌ ನ್ಯೂಟನ್" ಎಂಬ ಹೆಸರಲ್ಲಿ ನಂಬರ್‌ ಸೇವ್‌ ಆಗಿದೆ. ಈ ನಂಬರ್‌ನಿಂದಲೇ ರನ್ಯಾ ಹಾಗೂ ಸಾಹಿಲ್‌ ಮೆಸೇಜ್‌ ಮಾಡಿಕೊಳ್ಳುತ್ತಿದ್ದರು. ಐದು ಸ್ಟೆಪ್‌ಗಳಲ್ಲಿ ಈ ಡೀಲ್‌ ನಡೆಯುತ್ತಿತ್ತು. ಕೊನೆಯದಾಗಿ ರನ್ಯಾಗೆ ಹಣ ಸೆಟಲ್‌ಮೆಂಟ್‌ ಆಗುತ್ತಿತ್ತು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+