ದರ್ಶನ್‌ಗೂ ಮೊದಲೇ ಸುದರ್ಶನ್‌ ಪತ್ನಿಯ ನೆರವಿಗೆ ನಿಂತಿದ್ದ ಹಿರಿಯ ನಟಿ ಯಾರು?

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಸದಸ್ಯರೊಬ್ಬರು ಈಗ ಆಶ್ರಮದ ಪಾಲಾಗಿದ್ದಾರೆ. ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಸೊಸೆ, ಹಿರಿಯ ನಟ ಸುದರ್ಶನ ಅವರ ಪತ್ನಿ ಶೈಲಶ್ರೀ ಅವರು ಬೆಂಗಳೂರಿನ ಆಶ್ರಮವೊಂದಕ್ಕೆ ಸೇರಿಕೊಂಡಿದ್ದಾರೆ. ನಟ ಸುದರ್ಶನ ಅವರ ಕಾಲದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಆಶ್ರಮ ಸೇರಿದ್ದು, ಅವರ ಪ್ರತಿ ತಿಂಗಳ ಖರ್ಚುನ್ನು ಕನ್ನಡ ಚಿತ್ರರಂಗದ ನಟ ದರ್ಶನ್‌ ತೂಗುದೀಪ ನೋಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರವನ್ನು ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ಬಹಿರಂಗಪಡಿಸಿದ್ದರು.

ವಾಸವಿದ್ದ ಅಪಾರ್ಟ್‌ಮೆಂಟ್‌ ನೆಲಸಮವಾದ ಮೇಲೆ ಶೈಲಶ್ರೀ ಅವರನ್ನು ಆಶ್ರಮಕ್ಕೆ ಸೇರಿಸಿದ್ದು ಒಬ್ಬ ಹಿರಿಯ ಕಲಾವಿದೆ. ಮುಂದಿನ ದಿನಗಳಲ್ಲಿ ಅವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಗಣೇಶ್‌ ಕಾಸರಗೋಡು ಹೇಳಿದ್ದರು. ಇದೀಗ ದರ್ಶನ್‌ಗೂ ಮೊದಲೇ ಶೈಲಶ್ರೀ ಅವರ ಸಹಾಯಕ್ಕೆ ಬಂದಿದ್ದು ಬೇರೆಯಾರೂ ಅಲ್ಲ ಅವರೇ ಹಿರಿಯ ನಟಿ ಗಿರಿಜಾ ಲೋಕೇಶ್‌ ಎಂದು ಹೇಳಿದ್ದಾರೆ.

Girija Lokesh Supports Sudarshan s Wife Amidst Financial Struggles

'ಹಿರಿಯ ನಟ ಸುದರ್ಶನ್‌ ಅವರಿಗೆ ಮಕ್ಕಳಿರಲಿಲ್ಲ. ಸುದರ್ಶನ್‌ ಇರುವವರೆಗೆ ಸಣ್ಣ ಪುಟ್ಟ ಆರ್ಥಿಕ ಕಷ್ಟ ಬಿಟ್ಟರೆ ಎಲ್ಲವೂ ಚೆನ್ನಾಗಿತ್ತು. ಅವರು ಹೋದ ಮೇಲೆ ಶೈಲಶ್ರೀ ಅವರು ಒಂಟಿಯಾಗಿಬಿಟ್ಟರು. ಅವರು ತುಂಬಾ ಸ್ವಾಭಿಮಾನಿ ಹೆಂಗಸು. ಅವರ ಪರಿಸ್ಥಿತಿ ನೋಡಿ ಎರಡು ಮೂರು ವರ್ಷದ ಹಿಂದೆ ನಾನೇ ಒಂದು ಆಶ್ರಮದ ವ್ಯವಸ್ಥೆ ಮಾಡಲು ಹೊರಟಿದ್ದೆ. ಆದರೆ ಅವರು ಇನ್ನೊಬ್ಬರ ದೃಷ್ಟಿಯಲ್ಲಿ ಕೀಳಾಗುತ್ತೇನೆ ಅಂತಾ ಅವರು ಒಪ್ಪಲಿಲ್ಲ. ಆದರೆ ಮೊನ್ನೆ ಸುದ್ದಿ ಸಿಕ್ತು ಅವರು ಆಶ್ರಮ ಸೇರಿದ್ದಾರೆ ಅಂತಾ'.

'ಇದರ ಹಿನ್ನೆಲೆಯಲ್ಲಿ ನಡೆದಿರುವುದು ಏನು ಅಂದರೆ ಮೊನ್ನೆ ಮೈಸೂರಿನಲ್ಲಿ ಅಶ್ವತ್ಥ್‌ ಅವರ ನೂರನೇ ವರ್ಷದ ಆಚರಣೆ ನಡೆಯಿತು. ಈ ವೇಳೆ ನನ್ನ ಪಕ್ಕದಲ್ಲಿ ಕುಳಿತಿದ್ದ ಗಿರಿಜಾ ಲೋಕೇಶ್‌ ಅವರಿಗೆ ತಟ್ಟನೆ ನೆನಪಾಗಿ ನಿಮ್ಮ ಶೈಲಶ್ರೀ ಅವರನ್ನು ಆಶ್ರಮಕ್ಕೆ ಸೇರಿಸಿದ್ದೇನೆ ಎಂದು ಹೇಳಿದರು. ನನಗೆ ಶಾಕ್‌ ಆಯ್ತು. ನಾನು ಆಗ ವ್ಯವಸ್ಥೆ ಮಾಡಿದಾಗ ಹೋಗದವರು ಈಗ ಹೇಗೆ ಹೋದರು ಅಂತಾ ಅನಿಸಿತು. ಆಮೇಲೆ ಗೊತ್ತಾಯ್ತು ಪರಿಸ್ಥಿತಿ ಆ ಮಟ್ಟಕ್ಕೆ ಬಂದಿತ್ತು ಅಂತಾ' ಎಂದು ಗಣೇಶ್‌ ಕಾಸರಗೋಡು ಅವರು ಇತ್ತೀಚಿಗೆ ಪವರ್‌ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Girija Lokesh Supports Sudarshan s Wife Amidst Financial Struggles

ಹಿರಿಯ ಕಲಾವಿದರ ನೆರವಿಗೆ ಧಾವಿಸುವ ಗಿರಿಜಾ ಲೋಕೇಶ್‌

ಹಿರಿಯ ನಟಿ ಗಿರಿಜಾ ಲೋಕೇಶ್‌ ತಾವು ದುಡಿದಿರುವ ಸಂಪೂರ್ಣ ಹಣವನ್ನು ಹಿರಿಯ ಕಲಾವಿದರ ಖರ್ಚುಗಳಿಗೆ ವ್ಯಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಯಾರೇ ಸಹಾಯ ಕೇಳಿ ಬಂದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅವರು ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ದುಡಿದರೂ ಈಗ ಅವರ ಬಳಿ ಅವರು ಸಂಪಾದಿಸಿದ ಒಂದು ರೂಪಾಯಿ ಹಣವಿಲ್ಲವಂತೆ ಈ ಬಗ್ಗೆ ಸ್ವತಃ ಗಿರಿಜಾ ಲೋಕೇಶ್‌ ಪುತ್ರ ಸೃಜನ್‌ ಲೋಕೇಶ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+