Dhanraj Achar: ವಿಶೇಷ ಉಂಟಾ?: ಸಿಹಿ ಸುದ್ದಿ ಹಂಚಿಕೊಂಡ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಧನರಾಜ್ ಆಚಾರ್ಯ

ಸೋಶಿಯಲ್‌ ಮೀಡಿಯಾವನ್ನು ಬಳಸುವವರಿಗೆ ಧನರಾಜ್ ಆಚಾರ್ಯ ದಂಪತಿ ಚಿರಪರಿಚಿತ. ರೀಲ್ಸ್‌, ಯೂಟ್ಯೂಬ್‌ನಲ್ಲಿ ಇವರ ವಿಡಿಯೋ ನೋಡಿ ನಗದವರಿಲ್ಲ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುವ ಧನರಾಜ್ ಆಚಾರ್ಯ ಅವರ ವಿಡಿಯೋದಲ್ಲಿ ಇವರ ತುಂಬು ಕುಟುಂಬವೇ ಹೈಲೈಟ್.

ಪ್ರತಿಯೊಂದು ವಿಷಯದಲ್ಲೂ ತಮ್ಮದೇ ಆದ ಕ್ರಿಯೇಟಿವಿಟಿಯ ವಿಡಿಯೋ ಮೂಲಕ ಜನರ ಮೆಚ್ಚುಗೆ ಗಳಿಸಿದ್ದ ಧನರಾಜ್ ಆಚಾರ್ಯ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆ ಪ್ರವೇಶಿಸಿದರು. ಅಲ್ಲದೇ ಕನ್ನಡ ಚಿತ್ರರಂಗದಲ್ಲಿಯೂ ಅವಕಾಶ ಪಡೆದಿದ್ದು, ಇತ್ತೀಚಿಗೆ ತೆರೆಕಂಡ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Gicchi Gili Gili Show Fame Dhanraj Acharya Shared Good News

ಇನ್ನು ಧನರಾಜ್ ಆಚಾರ್ಯ ಅವರ ಪತ್ನಿ ಪ್ರಜ್ಞಾ ಆಚಾರ್‌ ಕೂಡ ಕಿರುತೆರೆ ಪ್ರೇಕ್ಷಕರಿಗೆ, ರೀಲ್ಸ್‌, ಯೂಟ್ಯೂಬ್‌ ವಿಡಿಯೋ ವೀಕ್ಷಕರಿಗೆ ಚಿರಪರಿಚಿತ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುವ ಕಾಮಿಡಿ ವಿಡಿಯೋ ಎಂತವರ ಮುಖದಲ್ಲಾದರೂ ನಗು ತರಿಸುತ್ತದೆ. ತಮ್ಮ ನಟನೆ ಹಾಗೂ ಮಾತಿನ ಮೂಲಕ ನೋಡುಗರ ಮುಖದಲ್ಲಿ ನಗು ಅರಳಿಸುವ ಧನರಾಜ್ ಆಚಾರ್ಯ ದಂಪತಿ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ಹೋದಲ್ಲಿ..ಬಂದಲ್ಲಿ..ವಿಶೇಷ ಉಂಟಾ..? ವಿಶೇಷ ಉಂಟಾ..? ಎಂದು ಕೇಳುತ್ತಿದ್ದವರಿಗೆ ಧನರಾಜ್ ಆಚಾರ್ಯ ದಂಪತಿ ಸಿಹಿ ಸುದ್ದಿಕೊಟ್ಟಿದ್ದು, ಧನರಾಜ್ ಆಚಾರ್ಯ ಹಾಗೂ ಪ್ರಜ್ಞಾ ಆಚಾರ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಧನರಾಜ್ ಆಚಾರ್ಯ ದಂಪತಿ ಈ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವಿಶೇಷ ಉಂಟಾ..? ಅಂತಾ ಕಿರಿಕಿರಿ ಮಾಡಬೇಡಿ ಎಂದು ವಿಡಿಯೋ ಹಂಚಿಕೊಂಡಿರುವ ಧನರಾಜ್ ಆಚಾರ್ಯ, ವಿಡಿಯೋವೊಂದರ ಜೊತೆಗೆ ಪ್ರಜ್ಞಾ ಆಚಾರ್‌ ಅವರೊಂದಿಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾ ಸ್ಟಾರ್ಸ್‌ ಆಗಿರುವ ಈ ದಂಪತಿಗೆ ಗೆಳೆಯರು, ಆಪ್ತರು ಹಾಗೂ ಅಭಿಮಾನಿಗಳು ಕಮೆಂಟ್‌ ಮೂಲಕ ಶುಭಾಶಯ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+