Bigg Boss: ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಮೋಕ್ಷಿತಾ-ಗೌತಮಿ

ಬಿಗ್ ಬಾಸ್ 11ನೇ ಆವೃತ್ತಿ 72ನೇ ದಿನಕ್ಕೆ ಕಾಲಿಟ್ಟಿದೆ. 12 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು ದಿನದಿಂದ ದಿನಕ್ಕೆ ಆಟ ರೋಚಕವಾಗುತ್ತಿದೆ. ಫೈನಲ್‌ಗೆ ಇನ್ನು ಕೆಲವೇ ವಾರಗಳಿದ್ದು ಮನೆಯಲ್ಲಿ ಉಳಿಯಲು ಸ್ಪರ್ಧಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಬಿಗ್ ಬಾಸ್ ಎಂದರೆ ಹಾಗೆ ಇಲ್ಲಿ ಮಿತ್ರರು ಶತ್ರುಗಳಾಗಿ, ಶತ್ರುಗಳೇ ಕೊನೆಗೆ ಮಿತ್ರರಾಗುವ ಅನೇಕ ಉದಾಹರಣೆ ಕೂಡ ಇದೆ. ಗೌತಮಿ, ಮೋಕ್ಷಿತಾ ಪೈ ವಿಚಾರದಲ್ಲಿ ಕೂಡ ಇದೇ ಆಗಿದೆ.

ಗೌತಮಿ, ಮೋಕ್ಷಿತಾ, ಉಗ್ರಂ ಮಂಜು ಆರಂಭದಲ್ಲಿ ಸ್ನೇಹಿತರಾಗಿದ್ದರು. ಬಳಿಕ ಮೋಕ್ಷಿತಾ ಗೌತಮಿ, ಮಂಜು ಅವರಿಂದ ದೂರವಾದರು. ಗೌತಮಿ, ಮಂಜು ಜೊತೆಯಲ್ಲಿದ್ದರೆ, ಮೋಕ್ಷಿತಾ ಬೇರೆ ಗುಂಪು ಸೇರಿದ್ದರು. ಗೌತಮಿ, ಮೋಕ್ಷಿತಾ ನಡುವೆ ಮನಸ್ತಾಪ ತಾರಕಕ್ಕೇರಿತ್ತು.

Gautami supports mokshita pai new twist bigg boss house

ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಕ್ಷಿತಾ ಗೌತಮಿ ಜೊತೆಗೆ ಆಡಬೇಕಾಗಿ ಬಂದಾಗ, ಸ್ವಾಭಿಮಾನ ಮುಖ್ಯ, ಗೌತಮಿ ಜೊತೆ ಮಾತ್ರ ಆಡಲ್ಲ ಎಂದು ಕ್ಯಾಪ್ಟನ್ಸಿ ಸ್ಪರ್ಧೆಯಿಂದಲೇ ಹಿಂದೆ ಸರಿದರು. ಬಳಿಕ ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಆಡಲು ಗೌತಮಿಗೆ ಅವಕಾಶ ಸಿಕ್ಕಿತು, ಕ್ಯಾಪ್ಟನ್ಸಿ ಸ್ಪರ್ಧೆಯನ್ನು ಗೆದ್ದ ಗೌತಮಿ ಈ ವಾರದ ಕ್ಯಾಪ್ಟನ್ ಕೂಡ ಆದರು.

ಕಪ್ಪು ನೀರು ಸುರಿದ ಗೌತಮಿ

ಈ ವಾರದ ಎಲಿಮಿನಿಷೇನ್ ಹೆಸರುಗಳನ್ನು ಆಯ್ಕೆ ಮಾಡುವಾಗ, ಗೌತಮಿ ಮೋಕ್ಷಿತಾ ಹೆಸರನ್ನು ಹೇಳಿದರು. ಕ್ಯಾಪ್ಟನ್ ಆಗಲು ಅವಕಾಶ ಸಿಕ್ಕಿದ್ದರೂ ಅದನ್ನು ಉಪಯೋಗಿಸಿಕೊಂಡಿಲ್ಲ ಎಂದು ಕಾರಣ ಕೊಟ್ಟು ಎಲಿಮಿನೇಷನ್‌ಗೆ ಹೆಸರು ಕೊಟ್ಟಿದ್ದಲ್ಲದೆ, ಮೋಕ್ಷಿತಾ ಮೇಲೆ ಕರಿ ನೀರು ಸುರಿದಿದ್ದರು.

ತನಗೆ ಮೋಕ್ಷಿತಾ ಬೇಕು ಎಂದ ಗೌತಮಿ

ಟಾಸ್ಕ್‌ನಲ್ಲಿ ಆಡಲು ಎರಡು ತಂಡ ರಚಿಸಬೇಕು ಎಂದು ಬಿಗ್ ಬಾಸ್ ಸೂಚನೆ ಕೊಟ್ಟಿದ್ದರು. ಹನುಮಂತು, ಗೌತಮಿ ಒಂದೊಂದು ತಂಡದ ನಾಯಕರಾಗಿದ್ದಾರೆ. ತಮ್ಮ ತಂಡಕ್ಕೆ ಬೇಕಾದ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಸೂಚನೆ ನೀಡಲಾಗಿತ್ತು. ಅಚ್ಚರಿ ಎನ್ನುವಂತೆ ಹನುಮಂತು ಮತ್ತು ಗೌತಮಿ ಇಬ್ಬರೂ ಮೋಕ್ಷಿತಾ ತಮ್ಮ ತಂಡಕ್ಕೆ ಬೇಕು ಎಂದು ಕೇಳಿದರು.

ಗೌತಮಿ, ಮೋಕ್ಷಿತಾ ಬಗ್ಗೆ ಒಳ್ಳೆ ಮಾತನಾಡಿದರು. ಮೋಕ್ಷಿತಾ ತುಂಬಾ ಧೈರ್ಯವಂತೆ, ಸ್ವಾಭಿಮಾನಕ್ಕಾಗಿ ಕ್ಯಾಪ್ಟನ್ಸಿ ಆಟದಿಂದಲೇ ದೂರ ಉಳಿದರು ಇದಕ್ಕೆ ತುಂಬಾ ಧೈರ್ಯ ಬೇಕು, ಆದ್ದರಿಂದ ಅವರನ್ನು ನನ್ನ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು. ಮೋಕ್ಷಿತಾ ಗೌತಮಿ ತಂಡ ಸೇರಲ್ಲ ಹನುಮಂತು ತಂಡವನ್ನೇ ಸೇರುತ್ತಾರೆ ಅಂದುಕೊಂಡಿದ್ದರು, ಆದರೆ ಮೋಕ್ಷಿತಾ ಗೌತಮಿ ತಂಡಕ್ಕೆ ಹೋಗುತ್ತೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಉಗ್ರಂ ಮಂಜು ಮತ್ತು ಗೌತಮಿ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದ್ದು, ಮಂಜು ವಿರುದ್ಧ ಗೌತಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿರುವ ಮೋಕ್ಷಿತಾ ಇದೀಗ ಗೌತಮಿ ತಂಡದಲ್ಲಿ ಆಡಲು ಓಕೆ ಅಂದಿದ್ದಾರೆ. ಈ ವಾರ ಒಬ್ಬರು ಮನೆಯಿಂದ ಹೊರಹೋಗುವುದು ಖಚಿತವಾಗಿದೆ. ಸ್ಪರ್ಧಿಗಳ ಜೊತೆ ಪದೇ ಪದೇ ಜಗಳವಾಡುತ್ತಿರುವ ರಜತ್‌ಗೆ ಈ ವಾರ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+