ಲೈಬ್ರರಿಯನ್ ಈಗ ಕಾಮಿಡಿ ಸ್ಟಾರ್: ನೆಟ್‌ಫ್ಲಿಕ್ಸ್‌ನಲ್ಲಿ ಸುಮುಖಿ ಹವಾ, ನಟ ಹೃತಿಕ್ ರೋಷನ್ ನಾಚುವಂತೆ ಮಾಡಿದ ಲಸ್ಟ್ ಸ್ಟೋರೀಸ್

ಲೈಬ್ರರಿಯನ್, ಶೆಫ್ ಹಾಗೂ ಫುಡ್‌ ಲ್ಯಾಬ್‌ನಲ್ಲಿ ಕೆಲಸ ಮಾಡಿದ್ದ ಹುಡುಗಿಯೊಬ್ಬಳು, ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಮಿಂಚುತ್ತಾಳೆ ಎಂದರೆ ಅದು ತಮಾಷೆಯೆಂದೇನಿಸಬಹುದು. ಆದರೆ ಇದು ತಮಾಷೆಯಲ್ಲ, ಒಬ್ಬರ ಬದುಕು ಬದಲಾದ ರೋಚಕ ಕಥೆ.

ತಮ್ಮ ವೃತ್ತಿಜೀವನದ ಹಾದಿಯನ್ನೇ ಹಾಸ್ಯದ ಪಂಚ್‌ಲೈನ್‌ಗಳನ್ನಾಗಿ ಬದಲಾಯಿಸಿದ ಸುಮುಖಿ ಸುರೇಶ್ ಇಂದು ನೆಟ್‌ಫ್ಲಿಕ್ಸ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಒಬ್ಬ ಸಾಮಾನ್ಯ ಯುವತಿ ತನ್ನ ಕನಸಿನ ಬೆನ್ನೇರಿ, ಸಮಾಜದ ಸಾಂಪ್ರದಾಯಿಕ ಚೌಕಟ್ಟುಗಳನ್ನ ಮೀರಿ ನಿಂತಿರುವ ಸುಮುಖಿ ಅವರ ಪಯಣ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.

From Chef to Comedy Star Sumukhi Suresh s Journey to Netflix and the Viral Hrithik Roshan Mention

ಸ್ಟ್ಯಾಂಡ್ ಅಪ್ ಕಾಮಿಡಿಯನ್‌ ಆಗಿ ಬೆಳೆದ ಹಾದಿ

ಮೂಲತಃ ನಾಗ್ಪುರದಲ್ಲಿ ಬೆಳೆದ ಸುಮುಖಿ ಸುರೇಶ್, 2009ರಲ್ಲಿ 'ಆಹಾರ ವಿಜ್ಞಾನ ನಿರ್ವಹಣೆ, ಡಯಟೆಟಿಕ್ಸ್ ಮತ್ತು ನ್ಯೂಟ್ರಿಷನ್' ಅಧ್ಯಯನ ಮಾಡಲು ಬೆಂಗಳೂರಿಗೆ ಬಂದರು. ಓದು ಮುಗಿದ ಬಳಿಕ ಅವರು ಲೈಬ್ರರಿಯನ್ ಆಗಿ, ಆನಂತರ ಶೆಫ್ ಆಗಿ ಹಾಗೂ ಆಹಾರ ಪರೀಕ್ಷಾ ಪ್ರಯೋಗಾಲಯದಲ್ಲಿ ವೃತ್ತಿಜೀವನ ಆರಂಭಿಸಿದ್ದರು.

2013ರಲ್ಲಿ ಕೆಲಸ ಮಾಡುತ್ತಿರುವಾಗಲೇ ನಗರದ ದಿ ಇಂಪ್ರೂವ್ ಎಂಬ ಹಾಸ್ಯ ತಂಡವನ್ನ ಸೇರಿಕೊಂಡರು. ಕಾಮಿಡಿ ಮೇಲಿನ ಒಲವು ಹೆಚ್ಚಾಗುತ್ತಿದ್ದಂತೆ, 2015ರಲ್ಲಿ ತಮ್ಮ ಪೂರ್ಣಾವಧಿಯ ಕೆಲಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಸ್ಟ್ಯಾಂಡ್ ಅಪ್ ಕಾಮಿಡಿ ಕ್ಷೇತ್ರಕ್ಕೆ ಧುಮುಕಿದರು.

ಅವರ ಈ ದಿಟ್ಟ ಹೆಜ್ಜೆಯು 'ಬೆಹತಿ ನಾಕ್', ಜನಪ್ರಿಯ ವೆಬ್ ಸರಣಿ 'ಪುಷ್ಪವಲ್ಲಿ' ಹಾಗೂ ಅಮೆಜಾನ್ ಪ್ರೈಮ್ ವಿಡಿಯೋದ 'ಕಾಮಿಕ್‌ಸ್ತಾನ್' (Comicstaan) ಶೋನ ಹೋಸ್ಟ್ ಮತ್ತು ತೀರ್ಪುಗಾರರಾಗುವ ಹಂತಕ್ಕೆ ಕರೆದೊಯ್ಯಿತು. 'ಪುಷ್ಪವಲ್ಲಿ' ಸರಣಿಯು ಅವರಿಗೆ ರಾಷ್ಟ್ರಮಟ್ಟದಲ್ಲಿ ಅಪಾರ ಜನಪ್ರಿಯತೆ ತಂದುಕೊಟ್ಟಿತು.

ನೆಟ್‌ಫ್ಲಿಕ್ಸ್ ಹಾರ್ಮೋನಲ್ ಮೂಲಕ ಹೊಸ ಸಂಚಲನ

ಇದೀಗ ಸುಮುಖಿ ತಮ್ಮ ಹಾಸ್ಯದ ಚಾಕಚಕ್ಯತೆಯನ್ನ ನೆಟ್‌ಫ್ಲಿಕ್ಸ್‌ಗೂ ವಿಸ್ತರಿಸಿದ್ದಾರೆ. ಅವರ ಚೊಚ್ಚಲ ಸ್ಟ್ಯಾಂಡ್-ಅಪ್ ಸ್ಪೆಷಲ್ ಶೋ 'ಹಾರ್ಮೋನಲ್' 2026ರ ಅಕ್ಟೋಬರ್ 14ರಂದು ಬಿಡುಗಡೆಯಾಗಿದೆ. ಡೇಟಿಂಗ್, ಸಿಂಗಲ್ ಆಗಿರುವ ಬದುಕು ಹಾಗೂ ಸಾಂಪ್ರದಾಯಿಕ ನಿರೀಕ್ಷೆಗಳು ಮತ್ತು ಆಧುನಿಕ ಸಂಬಂಧಗಳ ನಡುವಿನ ತುಮುಲಗಳನ್ನ ಅತ್ಯಂತ ಹಾಸ್ಯಾಸ್ಪದವಾಗಿ ಈ ಶೋನಲ್ಲಿ ತೆರೆದಿಡಲಾಗಿದೆ.

ಪ್ರಸ್ತುತ ಯುವಪೀಳಿಗೆಯ ಆಲೋಚನೆಗಳು ಹಾಗೂ ಸಮಾಜದ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನ ಸುಮುಖಿ ತಮ್ಮದೇ ಶೈಲಿಯ ಪಂಚ್‌ಡೈಲಾಗ್‌ಗಳ ಮೂಲಕ ವಿವರಿಸಿ ನೋಡುಗರನ್ನ ನಗೆಗಡಲಲ್ಲಿ ತೇಲಿಸಿದ್ದಾರೆ.

ವೈರಲ್ ಆದ ಲಸ್ಟ್ ಸ್ಟೋರೀಸ್ ವಿಡಿಯೋ

ಇತ್ತೀಚೆಗೆ ಲಸ್ಟ್ ಸ್ಟೋರೀಸ್ ಸರಣಿಯ ಸುಮುಖಿ ಸುರೇಶ್ ಅವರ ಹಳೆಯ ವಿಡಿಯೋವೊಂದು ಎಕ್ಸ್ ಖಾತೆಯಲ್ಲಿ ಭಾರಿ ವೈರಲ್ ಆಗಿತ್ತು. ಮಹಿಳೆಯರ ಸ್ವಯಂ ತೃಪ್ತಿಯಂತಹ ನಿಷೇಧಿತ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸುಮುಖಿ, ಲೈಂಗಿಕ ಆಸಕ್ತಿಯನ್ನ ಪ್ರಚೋದಿಸುವ ಸಾಧನವಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಹೆಸರನ್ನ ಅದರಲ್ಲಿ ಉಲ್ಲೇಖಿಸಿದ್ದರು.

ಈ 'ಲಸ್ಟ್ ಸ್ಟೋರೀಸ್ ವಿಡಿಯೋ' ಎಕ್ಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, #LustStoryForWomen ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು. ಸಾಮಾನ್ಯವಾಗಿ ಮಹಿಳೆಯರು ಬಹಿರಂಗವಾಗಿ ಮಾತನಾಡಲು ಹಿಂದೇಟು ಹಾಕುವ ವಿಷಯಗಳನ್ನ ಸುಮುಖಿ ಅತ್ಯಂತ ದಿಟ್ಟತನದಿಂದ ತೆರೆಯ ಮೇಲೆ ಪ್ರಸ್ತುತಪಡಿಸಿದ ರೀತಿಯನ್ನ ಹಲವರು ಶ್ಲಾಘಿಸಿದರು.

ನಟ ಹೃತಿಕ್ ರೋಷನ್ ಪ್ರತಿಕ್ರಿಯೆ

ಗಮನಾರ್ಹ ವಿಚಾರವೆಂದರೆ, ಈ ವಿಡಿಯೋ 2018 ಸಮಯದಲ್ಲಿಯೇ ಫುಲ್‌ ವೈರಲ್‌ ಆಗಿದ್ದು, ಸ್ವತಃ ನಟ ಹೃತಿಕ್ ರೋಷನ್ ಅವರ ಗಮನಕ್ಕೂ ಬಂದಿದೆ. ವರ್ಷಗಳಿಂದ ಆದರ್ಶ ಪುರುಷ, ಉತ್ತಮ ಲುಕ್ ಮತ್ತು ಡ್ಯಾನ್ಸ್ ವಿಚಾರದಲ್ಲಿ ಉಲ್ಲೇಖಗೊಳ್ಳುತ್ತಿದ್ದ ತಮ್ಮ ಹೆಸರನ್ನ, ಈ ರೀತಿಯ ವಿಡಿಯೋದಲ್ಲಿ ಕೇಳಿ ಅವರು ಸ್ವಲ್ಪ ನಾಚಿಕೊಂಡಿದ್ದಾರೆ.

ಇದಕ್ಕೆ ಏಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, "ಹೌದು, ನಾನು ಆ ವಿಡಿಯೋ ನೋಡಿದ್ದೇನೆ. ಅದು ನನಗೆ ಮುಜುಗರ ತಂದರೂ, ಅದೇ ಸಂದರ್ಭದಲ್ಲಿ ಖುಷಿ ಹಾಗೂ ಹೊಗಳಿಕೆಯಂತೆಯೂ ಭಾಸವಾಯಿತು. ಇದೊಂದು ಪ್ರಾಮಾಣಿಕ ಒಪ್ಪಿಗೆ" ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಈ ವಿಡಿಯೋ ಕ್ಲಿಪ್ ಅನ್ನ ಒಳಗೊಂಡಿರುವ ಲಸ್ಟ್ ಸ್ಟೋರೀಸ್ನ ಮೊದಲ ಕಥೆಯನ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ರಾಧಿಕಾ ಆಪ್ಟೆ ಬರೆದಿದ್ದರು. ಒಟ್ಟಿನಲ್ಲಿ, ಅಡುಗೆಮನೆ ಹಾಗೂ ಲ್ಯಾಬ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಇಂದು ದೇಶದ ಪ್ರಮುಖ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ, ತಮ್ಮ ವಿಶಿಷ್ಟ ಹಾಸ್ಯಪ್ರಜ್ಞೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+