ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ: ಫಸ್ಟ್‌ಲುಕ್ ರಿಲೀಸ್‌

ಭೀಮಾ ಸಿನಿಮಾ ಯಶಸ್ವಿನ ಬೆನ್ನಲ್ಲೇ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್‌ ಮತ್ತೊಂದು ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಡೈರೆಕ್ಟರ್‌ ಕ್ಯಾಪ್‌ ತೊಟ್ಟು ಯಶಸ್ಸು ಕಾಣುತ್ತಿರುವ ದುನಿಯಾ ವಿಜಯ್‌, ತಮ್ಮ ನಿರ್ದೇಶನದ ಮೂರನೇ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾಗೆ ದುನಿಯಾ ವಿಜಯ್‌ ನಿರ್ದೇಶನ ಮಾತ್ರವಲ್ಲದೇ ಮತ್ತೊಂದು ವಿಶೇಷತೆ ಕೂಡ ಇದೆ.

ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ವಿಜಯ್ ಅವರ ಎರಡನೇ ಮಗಳು ಮೋನಿಷಾ ನಾಯಕಿಯಾಗಿದ್ದಾರೆ. ತಂದೆಯ ಸಿನಿಮಾ ಮೂಲಕವೇ ಮೋನಿಷಾ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು, ತಮ್ಮ ಮೊದಲ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ವಿಜಯ್ ಅವರ ಎರಡನೇ ಮಗಳು ಮೋನಿಷಾ ಕೂಡ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ.

Duniya Vijay Second Daughter Monisha First Film First Look Release

ಮೋನಿಷಾ ನಟನೆಯ ಮೊದಲ ಸಿನಿಮಾ ಹಾಗೂ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾದ ಹೆಸರನ್ನು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಇಂದು ಬಹಿರಂಗ ಪಡಿಸಲಾಗಿದೆ. ಮೋನಿಷಾ ವಿಜಯ ಕುಮಾರ್ ಅವರ ಮೊದಲ ಚಿತ್ರಕ್ಕೆ 'ಸಿಟಿ ಲೈಟ್ಸ್' ಎಂದು ಹೆಸರಿಡಲಾಗಿದ್ದು, ಜವಾಬ್ ದಾರಿ..ದೀಪಗಳು ಎನ್ನುವ ಟ್ಯಾಗ್‌ ಲೈನ್‌ ನೀಡಲಾಗಿದೆ. ಟೈಟಲ್‌ ಜೊತೆಗೆ ಮೋನಿಷಾ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ತಮ್ಮ ಮೊದಲ ಸಿನಿಮಾದ ಖುಷಿಯನ್ನು ಹಂಚಿಕೊಂಡಿರುವ ಮೋನಿಷಾ, 'ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ 'ಸಿಟಿ ಲೈಟ್ಸ್' ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. 'ಸಲಗ' ಹಾಗೂ 'ಭೀಮ' ಚಿತ್ರದ ಯಶಸ್ಸಿನ ನಂತರ ನನ್ನ ಅಪ್ಪ ವಿಜಯಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Duniya Vijay Second Daughter Monisha First Film First Look Release

ಸಂಪೂರ್ಣ ತಯಾರಿಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಮೋನಿಷಾಗೆ ಸಿನಿ ಪ್ರಿಯರು ಶುಭಾಶಯ ಕೋರಿದ್ದಾರೆ. ಸದ್ಯ 'ಸಿಟಿ ಲೈಟ್ಸ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್‌ ಆಗುತ್ತಿದ್ದು, ಸಿನಿಮಾ ಯಾವಾಗ ಆರಂಭವಾಗಲಿದೆ, ನಾಯಕ ಯಾರು..? ಸೇರಿದಂತೆ ಚಿತ್ರದ ಬಗ್ಗೆ ಇನಷ್ಟು ಅಪ್ಡೇಟ್‌ಗಳನ್ನು ಸದ್ಯದಲ್ಲೇ ಚಿತ್ರತಂಡ ಬಹಿರಂಗಪಡಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+