ನೀತು ವನಜಾಕ್ಷಿಗೆ ಮಕ್ಕಳಿದ್ದಾರಾ? 'ಹೌದು' ಎಂದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ!

ಬೆಂಗಳೂರು, ಜುಲೈ 26: ನೀತು ವನಜಾಕ್ಷಿ ಯಾರಿಗೆ ಗೊತ್ತಿಲ್ಲ ಹೇಳಿ. ಬಿಗ್​ಬಾಸ್​ 10ನೇ ಸೀಸನ್​ನಲ್ಲಿ ಸಖತ್‌ ಫೇಮಸ್ ಆಗಿರುವ ಇವರು, ಒಬ್ಬ ಯಶಸ್ವಿ ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್. ಬಿಗ್​ಬಾಸ್ ಮನೆಯಲ್ಲಿ ಏಳು ವಾರಗಳು ಕಳೆದ ನೀತು ಅವರು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಮಿಸ್ ಇಂಟರ್‌ನ್ಯಾಶನಲ್ ಕಿರೀಟ ತೊಟ್ಟ ಭಾರತದ ಮೊದಲ ಮಂಗಳಮುಖಿ ಎನ್ನುವ ಹೆಗ್ಗಳಿಕೆಗೆ ನೀತು ಪಾತ್ರರಾಗಿದ್ದಾರೆ.

ಕಿರುತೆರೆ ಪ್ರೇಕ್ಷಕರ ಮೆಚ್ಚಿನ ನೀತು ಅವರನ್ನು ಒಂದಿಷ್ಟು ಜನ ಮಮ್ಮಿ ಮಮ್ಮಿ ಎಂದು ಕರೆಯುತ್ತಿದ್ದರು. ಹೀಗಾಗಿ ಅವರಿಗೆ ಮಕ್ಕಳಿದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲಿತ್ತು. ಈ ಬಗ್ಗೆ ಸ್ವತಃ ನೀತು ವನಜಾಕ್ಷಿ ಸ್ಪಷ್ಟನೆ ನೀಡಿದ್ದಾರೆ.

Does Bigg Boss Kannada Season 10 Contestant Neethu Vanajakshi Have Children

ನ್ಯೂಸ್‌ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಮ್ಮ ಸಮುದಾಯದಲ್ಲಿ ಈ ಮನೆ ಬಿಟ್ಟು ಓಡಿ ಬಂದಿರುತ್ತಾರೆ. ಅವರಿಗೆ ಗೊತ್ತಿರುವುದಿಲ್ಲ ಹೇಗೆ ಜೀವನ ಮಾಡಬೇಕು. ಹೇಗೆ ಬದುಕ ಬೇಕು ಅಂತಾ. ನಾವೆಲ್ಲಾ ಮೊದಲೇ ನಮ್ಮ ಸಮುದಾಯಕ್ಕೆ ಬಂದಿರುತ್ತೇವೆ. ಅಲ್ಲಿ ನಮಗೆ ಒಂದು ರೀತಿಯ ರೀತಿ-ರಿವಾಜು ಹೇಳಿಕೊಟ್ಟಿರುತ್ತಾರೆ. ಯಾರೇ ಬಂದರೂ ಅವರಿಗೆ ಒಳ್ಳೆದನ್ನೇ ಹೇಳಿಕೊಡಬೇಕು ಎಂದು. ನಮ್ಮ ಗುರುಗಳು ಅಷ್ಟೆ ನಮಗೆ ಒಳ್ಳೆಯದನ್ನೇ ಹೇಳಿಕೊಟ್ಟಿದ್ದಾರೆ. ಅವರಿಗೆ ನಾವು ನಮ್ಮ ಮಮ್ಮಿ ಅಂತಾನೇ ಕರೆಯುವುದು.

ನಮ್ಮ ಹೆತ್ತ ತಾಯಿ ಒಬ್ಬರಾದರೆ, ಅವರು ನಮಗೆ ಇನ್ನೊಬ್ಬ ತಾಯಿ ಎನ್ನುವ ರೀತಿ. ಆ ರೀತಿ ಮನೆ ಬಿಟ್ಟು ಓಡಿ ಬಂದಿರುತ್ತರಲ್ಲಾ ಅವರು ನನಗೆ ಅಮ್ಮಾ..ಅಮ್ಮಾ ಅಂತಾ ಕರೆಯುತ್ತಾರೆ. ಅವರಿಗೆ ನಾವು ಒಳ್ಳೆಯದನ್ನು ಹೇಳಿಕೊಡಬೇಕು. ಕೆಟ್ಟ ದಾರಿ ತುಳಿಯಬೇಡಿ. ಒಳ್ಳೆಯ ಕೆಲಸ ಮಾಡಿ. ವಿದ್ಯಾಭ್ಯಾಸ ಮುಗಿಸಿ. ಆ ರೀತಿ ಒಳ್ಳೆ ಬುದ್ಧಿಯನ್ನು ನಾವು ಅವರಿಗೆ ಹೇಳಿ ಕೊಡಬೇಕಾಗುತ್ತದೆ.

Does Bigg Boss Kannada Season 10 Contestant Neethu Vanajakshi Have Children

ಒಬ್ಬ ತಾಯಿ ಏನು ಕೆಲಸ ಮಾಡುತ್ತಾಳೆ. ಆ ಕೆಲಸ ನಾನು ಮಾಡುತ್ತಿದ್ದೇನೆ. ನಮ್ಮನ್ನು ಯಾರು ಅಮ್ಮಾ ಅಂತಾ ಕರೆಯುತ್ತಿರುತ್ತಾರೆ. ಅದು ಸಮುದಾಯದಲ್ಲಿ ಆಗುತ್ತದೆ. ದೊಡ್ಡವರು-ಚಿಕ್ಕವರು ಅಂತಾ ಏನು ಇರುವುದಿಲ್ಲ. ಯಾರು ಮೊದಲು ಸೇರಿರುತ್ತಾರೆ. ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಅವರಿಗೆ ಅನುಭವ ಜಾಸ್ತಿ ಇರುತ್ತದೆ. ಜಾಸ್ತಿ ಮರ್ಯಾದೆ ಕೊಡಬೇಕಾಗುತ್ತದೆ. ನನಗಿಂತ ಮುಂಚೆ ಬಂದವರಿಗೆ ನಾನು ಎಂದಿಗೂ ಮರ್ಯಾದೆ ಕೊಡುತ್ತೇನೆ.

ಹೋದ ತಕ್ಷಣ ಗೌರವ ಕೊಡುತ್ತೇವೆ. ಅವರಿಂದ ಆಶೀರ್ವಾದ ಪಡೆಯುತ್ತೇವೆ. ಯಾಕೆಂದರೆ ಅವರು ನಮಗೆ ಒಳ್ಳೆಯದು ಹೇಳಿಕೊಡುತ್ತಾರೆ ಅಂದರೆ ಅವರು ನಮಗೆ ತಾಯಿ ತರನೇ. ಹಾಗೇ ನಾನು ಸಹ ಎಷ್ಟೋ ಜನಕ್ಕೆ ಹೇಳಿಕೊಡುತ್ತೇನೆ. ಹಾಗಾಗಿ ನನಗೆ ಮಕ್ಕಳಿದ್ದಾರೆ. ಅವರೆಲ್ಲಾ ಪ್ರೀತಿಯಿಂದ ಮಮ್ಮಿ ಅನ್ನುತ್ತಾರೆ. ನಾನು ಬಿಗ್‌ಬಾಸ್‌ನಿಂದ ಬಂದ ತಕ್ಷಣ ಓಡಿ ಬಂದು ನೀವು ಅಲ್ಲಿ ಹಿಂಗಿರಬೇಕಿತ್ತು, ಹಂಗೆ ಇರಬೇಕಿತ್ತು ಅಂತೆಲ್ಲಾ ಖುಷಿಯಾಗಿದ್ದರು. ನನಗಿಂತ ಜಾಸ್ತಿ ಅವರಿಗೆ ಎಕ್ಸೈಟ್‌ಮೆಂಟ್‌ ಇತ್ತು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+