ದರ್ಶನ್ ಸಿನಿಮಾ ರೀಲ್ಸ್‌: ಬಿಗ್‌ಬಾಸ್‌ ಕಂಟೆಸ್ಟೆಂಟ್ಸ್‌ ರಜತ್ - ವಿನಯ್ ಗೌಡ ಮೇಲೆ FIR !

Darshan: ನಟ ದರ್ಶನ್ ಅವರ ಸಿನಿಮಾಗಳ ಹೆಸರನ್ನು ಬಟ್ಟೆಯ ಮೇಲೆ ಹಾಕಿಕೊಂಡು ರೀಲ್ಸ್‌ ಮಾಡಿದ್ದ ಬಿಗ್‌ಬಾಸ್‌ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್‌ಗೆ ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಸೀಸನ್ 11ರ ಸ್ವರ್ಧಿ ರಜತ್, ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ವಿನಯ್ ಗೌಡ ಅವರ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ರೀಲ್ಸ್‌ ಮಾಡುವಾಗ ಮಾಡಿದ ಸಣ್ಣ ತಪ್ಪಿನಿಂದ ಇವರ ಮೇಲೆ ಕೇಸ್‌ ದಾಖಲಾಗಿದೆ. ನಟ ದರ್ಶನ್‌ ಅವರ ಸಿನಿಮಾದ ಹೆಸರುಗಳನ್ನು ಶರ್ಟ್ ಹಾಗೂ ಪ್ಯಾಂಟ್ ಹಾಕಿಸಿಕೊಂಡು ಇವರಿಬ್ಬರು ರೀಲ್ಸ್‌ ಮಾಡಿದ್ದರು.

ಬಿಗ್‌ಬಾಸ್‌ ಸೀಸನ್‌ನಲ್ಲಿ ಭಾರೀ ಸದ್ದು ಮಾಡಿದ್ದ ವಿನಯ್ ಗೌಡ ಹಾಗೂ ರಜತ್ ಮೇಲೆ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಈ ಇಬ್ಬರು ದರ್ಶನ್‌ ಅಭಿಮಾನಿಗಳಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಇರುವಾಗಲೂ ರಜತ್ ದರ್ಶನ್‌ ಅವರ ಪರವಾಗಿ ಮಾತನಾಡಿದ್ದರು. ಇಬ್ಬರು ನಟರು ಈಚೆಗೆ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ಇದೀಗ ಅದೇ ರೀಲ್ಸ್‌ ಸಂಕಷ್ಟ ತಂದೊಡ್ಡಿದೆ. ರೀಲ್ಸ್‌ ಮಾಡಿರುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ರೀಲ್ಸ್‌ನಲ್ಲಿ ಬಳಸಲಾಗಿರುವ ಲಾಂಗ್‌ ಸಂಕಷ್ಟ ತಂದೊಡ್ಡಿದೆ.

Darshan Cinema Reels FIR Filed Against Bigg Boss Contestants Rajat and Vinay Gowda

ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರಿಲ್ಸ್ ಮಾಡಿರುವ ಆರೋಪದ ಮೇಲೆ ಈ ಎಫ್‌ಐಆರ್‌ ದಾಖಲಾಗಿದೆ. ಇನ್ನು ಈ ರೀಲ್ಸ್‌ ವಿಡಿಯೋವನ್ನು ರಜತ್ ಅವರು ಸೋಷಿಯಲ್‌ ಅಪ್ಲೋಡ್ ಮಾಡಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

{video1}

ವಿನಯ್ ಗೌಡ ಹೇಳಿದ್ದೇನು: ಈ ವಿಡಿಯೋಗೆ ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ವಿನಯ್ ಗೌಡ ಅವರು ಈ ವಿಚಾರವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಈ ವಿಚಾರವಾಗಿ ಪತ್ರ ಬರೆದಿರುವ ಅವರು, ಬೆಂಗಳೂರಿನ ನಾಗರಭಾವಿ ಅಲ್ಲಿರುವ ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ರಿಯಾಲಿಟಿ ಶೋಗೆ ಸಂಬಂಧಿಸಿದಂತೆ ಈ ವಿಡಿಯೋ ಶೂಟ್‌ ಮಾಡಲಾಗಿತ್ತು.

ಈ ರೀಲ್ಸ್‌ನಲ್ಲಿ ನಾನು ಪುಷ್ಪಾ ಪಾತ್ರವನ್ನು ಹಾಗೂ ರಜತ್ ಕಿಶನ್ ಅವರು ದರ್ಶನ್ ಪಾತ್ರವನ್ನು ಮಾಡಿದ್ದಾರೆ. ಮನರಂಜನೆ ಹಾಗೂ ಪ್ರಚಾರದ ಉದ್ದೇಶಕ್ಕೋಸ್ಕರ ಮಾತ್ರ ಈ ವಿಡಿಯೋದ ಚಿತ್ರೀಕರಣವನ್ನು ನಾವು ಮಾಡಿದ್ದೇವೆ. ಇದರಲ್ಲಿ ಯಾವುದೇ ಅನ್ಯ ಉದ್ದೇಶವಿಲ್ಲ. ಇದಕ್ಕೆ ಕ್ಷಮೆಯಾಚನೆ ಮಾಡುತ್ತೇವೆ ಎಂದು ಅವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಫ್ಯಾನ್ಸ್‌ ಹೇಳಿದ್ದೇನು ? : ಇನ್ನು ಈ ವಿಡಿಯೋಗೆ ದರ್ಶನ್‌ ಅಭಿಮಾನಿಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇಬ್ಬರು ಚೆನ್ನಾಗಿ ವಿಡಿಯೋ ಮಾಡಿದ್ದಾರೆ ಎಂದರೆ ಇನ್ನೂ ಕೆಲವರು ದರ್ಶನ್‌ ಅವರ ಹೆಸರು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು. ರಜತ್‌ ಅವರು ಈ ಬಗ್ಗೆ ಇನ್ನೂ ಯಾವುದೇ ರಿಯಾಕ್ಷನ್‌ ಕೊಟ್ಟಿಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+