ಜಿಂಗಾಲಕ..ಲಕ..ಲಕ..DKD ಶೋನಲ್ಲಿ ಆರ್ಯವರ್ಧನ್ ಗುರೂಜಿ: ಇತರ ಸ್ಪರ್ಧಿಗಳ ವಿವರ ಇಲ್ಲಿದೆ
ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಹೊಸ ಸೀಸನ್‌ಗೆ ದಿನಗಣನೆ ಆರಂಭವಾಗಿದೆ. ಕಾರ್ಯಕ್ರಮದ ಪ್ರೋಮೋಗಳು ಈಗಾಗಲೇ ವೈರಲ್ ಆಗುತ್ತಿದ್ದು, ಇನ್ನೇನು ಎರಡು ದಿನಗಳಲ್ಲಿ ಡಿಕೆಡಿ ಸ್ಪರ್ಧೆ ಆರಂಭವಾಗಲಿದೆ. ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಈ ಬಾರಿಯ ವಿಶೇಷತೆ ಏನು ಎನ್ನುವ ವಿವರ ಇಲ್ಲಿದೆ.
ನಟ ಶಿವರಾಜ್‌ಕುಮಾರ್, ನಟಿ ರಕ್ಷಿತಾ ಪ್ರೇಮ್, ಡ್ಯಾನ್ಸ್ ಮಾಸ್ಟರ್ ಚಿನ್ನಿ ಮಾಸ್ಟರ್, ವಿಜಯ್ ರಾಘವೇಂದ್ರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಹೊಸ ಸೀಜನ್‌ನ ತೀರ್ಪುಗಾರರಾಗಿದ್ದು, ಸ್ಪರ್ಧಿಗಳನ್ನು ಕಂಡು ಶಾಕ್ ಆಗಿದ್ದಾರೆ. ಡಾನ್ಸ್ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರನ್ನು ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಗಳಾಗಿದ್ದಾರೆ.

ಈ ಬಾರಿಯ ಸ್ಪರ್ಧಿಗಳ ವಿವರ
*ಆರ್ಯವರ್ಧನ್ ಗುರೂಜಿ -ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಆರ್ಯವರ್ಧನ್ ಅವರು ಮೂಲತಃ ಸಂಖ್ಯಾಶಾಸ್ತ್ರಜ್ಞರಾಗಿದ್ದು, ಕನ್ನಡ ಕಿರುತೆರೆಗೆ ಚಿರಪರಿಚಿತರು.
*ರಿತು ಸಿಂಗ್ (ಸಿಹಿ)- ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ರೀತು ಸಿಂಗ್ ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
*ಶಶಿ- ಕಿರುತೆರೆ ಅನೇಕ ಧಾರಾವಾಹಿಯಲ್ಲಿ ನಟಿಸಿರುವ ಜೀವನ್ ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

*ಗಗನಾ- ಮಹಾನಟಿ ಖ್ಯಾತಿಯ ಗಗನ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಯಾಗಿದ್ದಾರೆ.
*ರೆಮೊ- ಮಜಾಟಾಕೀಸ್ ಖ್ಯಾತಿಯ ಗಾಯಕಿ ರೆಮೊ ಕೂಡ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಯಾಗಿದ್ದಾರೆ.
*ಮಿಕಿಕ್ರಿ ಗೋಪಿ- ರಾಜಕಾರಣಿಗಳು, ನಟರ ಮಿಮಿಕ್ರಿ ಮಾಡುವ ಮೂಲಕ ಮಿಮಿಕ್ರಿ ಗೋಪಿ ಖ್ಯಾತಿ ಪಡೆದಿದ್ದಾರೆ.
*ಯಶಸ್ವಿನಿ-ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿ ಪ್ರೇಕ್ಷರ ಮನಸ್ಸು ಗೆದ್ದಿದ್ದ ಯಶಸ್ವಿನಿ ಕೆ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

*ಪ್ರಥಮ್- ಕನ್ನಡ ಚಿತ್ರರಂಗದ ನಟ ಬಿಗ್‌ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಯಾಗಿದ್ದಾರೆ.
*ಕಾವ್ಯ ಶೈವ- ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ನಟಿಸಿದ್ದ ಕಾವ್ಯ ಶೈವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಯಾಗಿದ್ದಾರೆ.
*ಇನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿವಿಧ ಧಾರಾವಾಹಿಗಳ ಪಾತ್ರಧಾರಿಗಳಾದ ಕಂಠಿ, ಪ್ರಿಯಾ, ವಿಶ್ವ, ಸಹನಾ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಸ್ಪರ್ಧಿಯಾಗಿದ್ದಾರೆ.












Click it and Unblock the Notifications