ಟಾಲಿವುಡ್‌ ನಟರಾದ ರಾಣಾ ದಗ್ಗುಬಾಟಿ, ವೆಂಕಟೇಶ್‌ ವಿರುದ್ಧ ದೂರು ದಾಖಲು

ತೆಲುಗಿನ ಖ್ಯಾತ ನಟರಾದ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಹಿರಿಯ ನಟ ವೆಂಕಟೇಶ್‌ ಅವರಿಗೆ ಸಂಕಷ್ಟ ಎದುರಾಗಿದೆ. ನಟ ರಾಣಾ, ವೆಂಕಟೇಶ್‌ ಹಾಗೂ ಕುಟುಂಬಸ್ಥರ ಮೇಲೆ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್‌ನ ಫಿಲ್ಮ್‌ನಗರದಲ್ಲಿನ ಆಸ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಮೇಲೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ನಟ ರಾಣಾ ದಗ್ಗುಬಾಟಿ, ನಿರ್ಮಾಪಕ ಡಿ.ವೆಂಕಟೇಶ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಾಗೂ ತೆಲುಗು ಚಿತ್ರರಂಗದ ಪ್ರಮುಖರ ವಿರುದ್ಧ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಟಾಲಿವುಡ್‌ನ ಚಲನಚಿತ್ರ ನಿರ್ಮಾಪಕ ಡಿ.ಸುರೇಶ್ ಬಾಬು, ಅವರ ಸಹೋದರ ಮತ್ತು ನಟ ವೆಂಕಟೇಶ್, ರಾಣಾ ದಗ್ಗುಬಾಟಿ ಮತ್ತು ಅಭಿರಾಮ್ ದಗ್ಗುಬಾಟಿ ಅವರ ವಿರುದ್ಧ ಆರೋಪ ಮಾಡಲಾಗಿದೆ.

Complaint Filed Against Baahubali Actor Rana Daggubati And Senior Actor Daggubati Venkatesh

ಗುತ್ತಿಗೆ ಪಡೆದ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಇವರ ವಿರುದ್ಧ ಆರೋಪ ಮಾಡಲಾಗಿದೆ. ಕೆ.ನಂದುಕುಮಾರ್ ಎಂಬುವವರು ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳು ಗುತ್ತಿಗೆ ಪಡೆದ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ದೂರುದಾರ ಕೆ.ನಂದುಕುಮಾರ್ ಆರೋಪಿಸಿದ್ದಾರೆ. ನಾನು ದಗ್ಗುಬಾಟಿ ಕುಟುಂಬಸ್ಥರಿಂದ ಆಸ್ತಿಯನ್ನು ಗುತ್ತಿಗೆ ಪಡೆದು, ನವೀಕರಣಕ್ಕಾಗಿ ಸುಮಾರು 20 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ.

ಆದರೆ, ಈ ಗುತ್ತಿಗೆ ಒಪ್ಪಂದದ ಹೊರತಾಗಿಯೂ ಆಸ್ತಿಯಿಂದ ಹೊರಹಾಕಲು ಸಂಚು ಮಾಡಿದ್ದಾರೆ. ಇದಕ್ಕಾಗಿ ದಗ್ಗುಬಾಟಿ ಕುಟುಂಬಸ್ಥರು ಈ ಆಸ್ತಿಯ ಭಾಗಗಳನ್ನು ಕೆಡವಲು ಕೆಲವರನ್ನು ಮುಂದಿಟ್ಟುಕೊಂಡಿದ್ದಾರೆ. ಅಲ್ಲದೆ ನಮ್ಮ ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ನಂದುಕುಮಾರ್ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?: ಹೈದರಾಬಾದ್‌ನ ಫಿಲ್ಮ್‌ನಗರದಲ್ಲಿರುವ ಆಸ್ತಿಯನ್ನು 2014ರಲ್ಲಿ ಗುತ್ತಿಗೆಗೆ ಪಡೆಯಲಾಗಿತ್ತು. ಬಳಿಕ ಗುತ್ತಿಗೆ ಒಪ್ಪಂದಗಳನ್ನು ನವೀಕರಿಸಲಾಗಿದೆ. ಸದ್ಯ ಅವರು ನ್ಯಾಯಾಲಯದ ತಡೆಯಾಜ್ಞೆ ಆಧಾರದ ಮೇಲೆ ಆಸ್ತಿ ಉಳಿಸಿಕೊಂಡಿದ್ದಾರೆ ಎಂದು ನಂದುಕುಮಾರ್ ಆರೋಪಿಸಿದ್ದಾರೆ. ಈ ಆದೇಶದ ಹೊರತಾಗಿಯೂ ಅವರು ಈ ಆಸ್ತಿಯನ್ನು ಪ್ರವೇಶಿಸಿದ್ದಲ್ಲದೆ ಕಳೆದ ವರ್ಷ ಅನೇಕ ಬಾರಿ ಅದನ್ನು ಕೆಡವಲು ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Complaint Filed Against Baahubali Actor Rana Daggubati And Senior Actor Daggubati Venkatesh

ಇದೇ ವಿಚಾರವಾಗಿ ನಂದುಕುಮಾರ್ ಅವರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಸದ್ಯ ನಂದುಕುಮಾರ್ ಅವರು ನೀಡಿರುವ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120 (ಬಿ), ಸೆಕ್ಷನ್ 448, 452 ಮತ್ತು 458ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಲೆಬ್ರಿಟಿ ಕುಟುಂಬದ ಡಿ.ಸುರೇಶ್ ಬಾಬು, ನಟ ವೆಂಕಟೇಶ್, ರಾಣಾ ದಗ್ಗುಬಾಟಿ ಮತ್ತು ಅಭಿರಾಮ್ ದಗ್ಗುಬಾಟಿ ಅವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+