Comedy Khiladigalu Nayana: 'ಬೇಕಿದ್ರೆ ಮತ್ತೊಂದು ಮದುವೆ ಮಾಡ್ಕೊಳ್ಳಿ ಅಂದೆ'

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಇತ್ತೀಚಿಗೆ ಒಂದು ಪ್ರೋಮೋ ವಿಡಿಯೋ ಅಪ್ಲೋಡ್‌ ಮಾಡಲಾಗಿತ್ತು. ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್‌ ಹೊಂದಿದ್ದ ಈ ಪ್ರೋಮೋ ಸಖತ್‌ ವೈರಲ್‌ ಆಗಿತ್ತು. ಇದೀಗ ನಯನ - ಯಶಸ್ವಿನಿ ಮಾತುಕಥೆಯ ಮತ್ತೊಂದು ಪ್ರೋಮೋ ಬಿಡುಗಡೆಯಾಗಿದೆ.

ಯಶಸ್ವಿನಿ ಮಾಸ್ಟರ್‌ ಆನಂದ್ ತಮ್ಮದೇ ಆದ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಕಿರುತೆರೆ ಕಲಾವಿದರು, ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳು ಸೇರಿದಂತೆ ವಿಶೇಷ ಅತಿಥಿಗಳನ್ನೇ ಕರೆದು ಸಂದರ್ಶನ ನಡೆಸುತ್ತಿದ್ದಾರೆ. ಸದ್ಯ ಯಶಸ್ವಿನಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಇತ್ತೀಚಿಗೆ ಕಾಮಿಡಿ ಕಿಲಾಡಿಗಳು ನಯನ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು.

Comedy Khiladigalu Nayana Shares Her Thoughts About Anchor Master Anand

ಈ ಸಂದರ್ಶನದ ವಿಡಿಯೋಗೆ ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್‌ ನೀಡಲಾಗಿತ್ತು. ಟೈಟಲ್‌ನಲ್ಲೇ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದ್ದ ನಯನ ಸಂದರ್ಶನದ ವಿಡಿಯೋದಲ್ಲಿ ಯಶಸ್ವಿನಿ ಮಾಸ್ಟರ್ ಆನಂದ್ ಹಾಗೂ ಕಾಮಿಡಿ ಕಿಲಾಡಿಗಳು ನಯನ ನಗುವಿನ ಹೊಳೆಯನ್ನೇ ಹರಿಸಿದ್ದಾರೆ. ಅಲ್ಲದೇ ಕನ್ನಡಿಗರ ಮೆಚ್ಚಿನ ನಟ,ನಿರೂಪಕ ಮಾಸ್ಟರ್‌ ಆನಂದ್ ಅವರ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.

ಇದೀಗ ನಯನ ಸಂದರ್ಶನದ ಮತ್ತೊಂದು ಪ್ರೋಮೋ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ನಯನ, 'ನಿಜ ಹೇಳಲಾ ಈ ಆನಂದ್‌ ಸರ್‌ ದೇವರಿಗೂ ಬೇಜಾರು ಆಗುವಷ್ಟು ದೇವರ ತಲೆ ತಿನ್ನುತ್ತಾರೆ. ಅವರು ನನ್ನನ್ನೇ ಬದಲಾಯಿಸಲು ಬರುತ್ತಾರೆ ಅದಕ್ಕೆ ನಾನು ದೇವರು ನೀವು ದೂರದಲ್ಲೇ ಇರು ಅಂತಾ ಇದ್ದೀನಿ' ಎಂದು ಹೇಳಿದ್ದಾರೆ.

Comedy Khiladigalu Nayana Shares Her Thoughts About Anchor Master Anand

ಇನ್ನು ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ ನಯನ, 'ಪ್ಲೀಸ್‌ ಬೇಕಿದ್ದರೆ ನೀನು ಇನ್ನೊಂದು ಮದುವೆ ಮಾಡಿಕೋ, ನಾನು ಇನ್ನೊಂದು ಮಗು ಮಾತ್ರ ಮಾಡಿಕೊಳ್ಳಲ್ಲಾ ಅಂತಾ ಹೇಳಿದ್ದೇನೆ. ನಾನು ನನಗೆ ಹೆಣ್ಣು ಮಗುನೇ ಬೇಕು ಅಂತಾ ಇದ್ದೆ. ಆದರೆ ಅವರು ಗಂಡು ಮಗು ಬೇಕು. ಚಡ್ಡಿ ಬನಿಯನ್‌ ಅಲ್ಲಿ ಖರ್ಚು ಮುಗಿಸಿ ಬಿಡಬಹುದು, ಆದರೆ ಹೆಣ್ಣು ಮಗು ಓಲೆ, ಜುಮುಕಿ, ನೆಕ್ಲೇಸ್‌, ಬಳೆ, ಕಾಲುಂಗುರ, ಮೂಗುತಿ ಅಂತಾ ಏನೆಲ್ಲಾ ಖರ್ಚು ಇರುತ್ತವೆ. ನನ್ನ ಮಾತು ಕೇಳು ಅಂದಿದ್ದರು' ಎಂದು ಮಗು ಹುಟ್ಟುವ ಮೊದಲು ಪತಿ ಹಾಗೂ ತಮ್ಮ ನಡುವಿನ ಮಾತುಕತೆಯ ಬಗ್ಗೆ ನಯನ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+