2ನೇ ಮದುವೆಗೆ ಚಂದನ್‌ ಶೆಟ್ಟಿ ಗ್ರೀನ್‌ ಸಿಗ್ನಲ್‌: ಹುಡುಗಿ ಹೇಗಿರಬೇಕಂತೆ ಗೊತ್ತಾ?

ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದು ದೂರಾದ ಮೇಲೆ ಒಂಟಿಯಾಗಿರುವ ಕನ್ನಡದ ಸಂಗೀತ ನಿರ್ದೇಶಕ ಹಾಗೂ ನಟ ಚಂದನ್‌ ಶೆಟ್ಟಿ, ಇದೀಗ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಸದ್ಯ ತಮ್ಮ ವೃತ್ತಿ ಜೀವನದ ಮೇಲೆ ಸಂಪೂರ್ಣ ಗಮನ ಹರಿಸಿ ಬ್ಯೂಸಿಯಾಗಿರುವ ಚಂದನ್‌ ಶೆಟ್ಟಿ, ಮುಂದಿನ ದಿನಗಳಲ್ಲಿ ತಮಗಿಂತ ಹೆಚ್ಚು ಪ್ರೀತಿ ಮಾಡುವ ಹುಡುಗಿ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ.

ಬಾಸ್‌ ಟಿವಿ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, 'ಜೀವನ ಈಗ ತುಂಬಾ ಚೆನ್ನಾಗಿದೆ. ಗುರಿ ಬಗ್ಗೆ ಗಮನ ಹರಿಸಲು ಸಮಯ ಇದೆ. ಬೇರೆ ಇನ್ಯಾವುದೇ ತೊಂದರೆಗಳಿಲ್ಲ. ಹೊರಗಡೆ ಕರೆದುಕೊಂಡು ಹೋಗಬೇಕು, ಏನೇನೋ ಕೊಡಿಸಬೇಕು. ಟ್ರಿಪ್‌ಗಳಿಗೆ ಕರೆದುಕೊಂಡು ಹೋಗಬೇಕು ಅದ್ಯಾವುದೂ ಈಗ ಇಲ್ಲ. ನನ್ನ ಜೊತೆ ನಾನೊಬ್ಬನೇ ಖುಷಿಯಾಗಿದ್ದೇನೆ ಅಷ್ಟೇ. ಎಲ್ಲಾ ಸಮಯವನ್ನು ನನಗಾಗಿ ನನ್ನ ಕೆಲಸಕ್ಕಾಗಿ ಕೊಡಲು ಸಾಧ್ಯವಾಗಿದೆ' ಎಂದರು.

Chandan Shetty Gave Green Signal for Second Marriage

'ಸಾಧನೆ ಮಾಡುವವರಿಗೆ ಸಿಂಗಲ್ ಲೈಫ್‌ ಬೆಟರ್‌. ಸಾಧಕರಿಗೆ ಹಾಗೂ ಸಾಧನೆಯ ಹಾದಿಯಲ್ಲಿ ಇರುವವರಿಗೆ ಬೇರೆ ಇನ್ಯಾವುದೂ ಅಡೆತಡೆಗಳಿರಬಾರದು. ಅಡೆತಡೆಗಳಿದ್ದರೆ ಒಂದು ವರ್ಷದಲ್ಲಿ ಮಾಡುವ ಸಾಧನೆ ನಾಲ್ಕು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಆ ಸಮಯ ಹಾಳು ಮಾಡುವ ಬದಲು ಗುರಿ ಬಗ್ಗೆ ಗಮನ ಹರಿಸಬಹುದು'

Take a Poll

'ನಾನೇ ಮೊದಲು ವರ್ಷಕ್ಕೆ ಒಂದು ಹಾಡು ಮಾಡಲು ಕಷ್ಟವಾಗುತ್ತಿತ್ತು. ಆದರೆ ಈಗ ನನಗೆ ಬೇರೆ ಯಾವುದೇ ಅಡೆತಡೆ ಇಲ್ಲದ ಕಾರಣ ಮುಂದಿನ ತಿಂಗಳು ಇನ್ನೊಂದು ಹಾಡು ಬಿಡುಗಡೆ ಮಾಡುತ್ತಿದ್ದೇನೆ. ನಾಲ್ಕು ವರ್ಷಗಳ ಕಾಲ ನಾನೇನು ಕಳೆದುಕೊಂಡಿದ್ದೆ ಮುಂದಿನ ವರ್ಷದೊಳಗೆ ನಾನು ಅದನ್ನು ವಾಪಸ್‌ ಪಡೆಯಬೇಕು' ಎಂದು ಹೇಳಿದರು.

Chandan Shetty Gave Green Signal for Second Marriage

ಇನ್ನು ಎರಡನೇ ಮದುವೆ ಬಗ್ಗೆ ಮಾತನಾಡಿದ ಚಂದನ್‌ ಶೆಟ್ಟಿ, 'ನನ್ನ ತಂದೆ ತಾಯಿ ಕೂಡ ಸದ್ಯಕ್ಕೆ ಎರಡನೇ ಮದುವೆ ಬೇಡ ಅಂತಾನೇ ಹೇಳುತ್ತಿದ್ದಾರೆ. ನನಗೆ ಯಾರೇ ಸಿಕ್ಕಿದರೂ ಕೂಡ ನಿಮ್ಮ ಜೀವನ ಈಗ ಚೆನ್ನಾಗಿದೆ. ದಯವಿಟ್ಟು ಈಗಲೇ ಇನ್ನೊಂದು ಮದುವೆ ಆಗಬೇಡಿ. ಆರಾಮಾಗಿರಿ ಅಂತಾನೇ ಸಲಹೆ ನೀಡುತ್ತಿದ್ದಾರೆ. ನೂರರಲ್ಲಿ ಒಂದು ಅಥವಾ ಎರಡು ಜನ ಒಂಟಿಯಾಗಿರಬೇಡಿ ಮದುವೆಯಾಗಿ ಎನ್ನಬಹುದು. ಉಳಿದ ತೊಂಬತ್ತೊಂಬತ್ತು ಜನ, ಆರಾಮಾಗಿದೆ ನಿಮ್ಮ ಜೀವನ ಹೀಗೆ ಇದ್ದು ಬಿಡಿ ಎಂದು ಹೇಳುತ್ತಿದ್ದಾರೆ' ಎಂದರು.

ಮುಂದೆ ತಮ್ಮ ಜೀವನದಲ್ಲಿ ಮತ್ತೆ ಬಾಳಸಂಗಾತಿ ಬಂದರೆ ಆಕೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ ಚಂದನ್‌ ಶೆಟ್ಟಿ, 'ನನ್ನ ಜೀವನದಲ್ಲಿ ಮುಂದೆ ಬರುವ ಹುಡುಗಿ ನನ್ನನ್ನು ತುಂಬಾ ಪ್ರೀತಿಸಬೇಕು. ನಾನಂತೂ ತುಂಬಾ ಪ್ರೀತಿ ಕೊಟ್ಟೇ ಕೊಡುತ್ತೇನೆ. ನನಗಿಂತನೂ ಆಕೆ ನನ್ನನ್ನು ಜಾಸ್ತಿ ಪ್ರೀತಿ ಮಾಡಬೇಕು. ಆ ರೀತಿಯಾದ ಹುಡುಗಿ ನನಗೆ ಸಿಕ್ಕಿದರೆ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ' ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+