Chandan Shetty: ಅಭಿಮಾನಿಗಳಿಗೆ ಚಂದನ್​ ಶೆಟ್ಟಿ & ಸುಶ್ಮಿತಾ ಜೋಡಿ ಗುಡ್‌ ನ್ಯೂಸ್‌

Chandan Shetty: ಮನುಷ್ಯರ ಜೀವನದಲ್ಲಿ ಒಂದು ಕಳೆದುಕೊಂಡರೆ ಮತ್ತೊಂದು ಬಾಗಿಲು ತೆರೆಯುತ್ತದೆ ಎನ್ನುವ ಮಾತಿದೆ. ಅದರಂತೆಯೇ ಇದೀಗ ಚಂದನ ಶೆಟ್ಟಿ ಅವರು ಹೊಸ ವಿಡಿಯೋ ಸಾಂಗ್‌ ಕಾಟನ್‌ ಕ್ಯಾಂಡಿ ಮೂಲಕ ಹೊಸ ಸಾಧನೆಯತ್ತ ಹೆಜ್ಜೆ ಇರಿಸಿದ್ದಾರೆ. ಇದು ಸದ್ಯ ಸಖತ್‌ ಟ್ರೆಂಡ್‌ ಸೃಷ್ಟಿಸಿದೆ. ಇನ್ನು ಇದರಲ್ಲಿ ಕಾಣಿಸಿಕೊಂಡಿರುವ ಚಂದನ್‌ ಶೆಟ್ಟಿ ಹಾಗೂ ಸುಶ್ಮಿತಾ ಗೋಪಿನಾಥ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ವೊಂದನ್ನು ನೀಡಿದ್ದಾರೆ.

ನಿವೇದಿತಾ ಗೌಡ ಅವರಿಗೆ ದಿವೋರ್ಸ್‌ ನೀಡಿದ ಬಳಿಕ ಗಾಯಕ ಚಂದನ್​ ಶೆಟ್ಟಿ ಅವರು ಹೊಸ ಸಾಂಗ್‌ಗಳನ್ನು ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಇವರು ಹಲವು ಹಿಟ್‌ ಹಾಡುಗಳನ್ನು ನೀಡಿದ್ದಾರೆ. ಇದೀಗ ಸುಶ್ಮಿತಾ ಗೋಪಿನಾಥ್ ಜೊತೆ ಕಾಟನ್‌ ಕ್ಯಾಂಡಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಭಾರೀ ವೈರಲ್‌ ಆಗುತ್ತಿದೆ. ಅಲ್ಲದೆ, ಇವರಿಬ್ಬರು ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ.

Chandan Shetty and Sushmitha Gopinath Good News for Fans

ಕನ್ನಡದ ರ್‍ಯಾಪ್ ಸಾಂಗ್‌ಗಳ ಮೂಲಕ ಗಮನ ಸೆಳೆದಿರುವ ಚಂದನ್​ ಅವರು, ಈಗಾಗಲೇ ಹಲವಾರು ಹಿಟ್​ ಸಾಂಗ್‌ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ ಎನ್ನುವ 3 ಪೆಗ್ ಹಾಡು, ಟಕಿಲಾ, ಪಕ್ಕಾ ಚಾಕೋಲೆಟ್ ಗರ್ಲ್ ಹಾಡುಗಳು ಇಂದಿಗೂ ಫೇಮಸ್‌ ಆಗಿವೆ. ಈ ಹಾಡುಗಳನ್ನು ಹೆಚ್ಚಾಗಿ ಈಗಲೂ ಪಬ್​, ರೆಸಾರ್ಟ್ ಡಿಜೆ ಪಾರ್ಟಿ ವೇಳೆ ಹಾಕುತ್ತಾರೆ.

ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಯುವಜನರ ಬಾಯಲ್ಲೂ ಈ ಹಾಡುಗಳದ್ದೇ ಸದ್ದು. ಅಷ್ಟರ ಮಟ್ಟಿಗೆ ಈ ಹಾಡುಗಳು ಫೇಮಸ್‌ ಆಗಿವೆ. ಇದೀಗ ಅವರ ಕಾಟನ್ ಕ್ಯಾಂಡಿ ಹಾಡಿನ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಈ ಮೂಲಕ ಸದ್ಯ ಟ್ರೆಂಡಿಂಗ್ ಸೃಷ್ಟಿಸಿರುವ ವಿಡಿಯೋ ಇದಾಗಿದೆ.

ಕಾಟನ್ ಕ್ಯಾಂಡಿ ವಿಡಿಯೋದಲ್ಲಿ ಗಾಯಕ ಚಂದನ್ ಶೆಟ್ಟಿ ಜೊತೆ ಸುಶ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಜೋಡಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಡಿಸೆಂಬರ್ 27ರಂದು ಈ ಮ್ಯೂಸಿಕ್​ ವಿಡಿಯೋ ಬಿಡುಗಡೆಯಾಗುದೆ. ಇದನ್ನು ಚಂದನ್ ಶೆಟ್ಟಿಯವರೇ ನಿರ್ದೇಶನ ಮಾಡಿರುವುದು ಇನ್ನೂ ವಿಶೇಷ.

ಈಗಾಗಲೇ ಈ ಮ್ಯೂಸಿಕ್​ ವಿಡಿಯೋ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದ್ದು, "ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಯಾಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆಯಾಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆ ಕೆಲಸಗಳ ಹಿನ್ನೆಲೆ ಕೊಡಲು ಅಸಾಧ್ಯವಾಗಿತ್ತು. ಇದೀಗ ವಿಡಿಯೋ ಸಾಂಗ್ ಬಿಡುಗಡೆಯಾದ ನಂತರ ನನ್ನ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ಕುತೂಹಲ ಇದೆ. ಇದು ಹೊಸ ವರ್ಷಕ್ಕೆ ಗಿಫ್ಟ್" ಎಂದು ಹೇಳಿದ್ದರು.

ಇನ್ನು ಇದೀಗ ಚಂದನ್​ ಶೆಟ್ಟಿ, ನಟಿ ಸುಷ್ಮಿತಾ ಜೊತೆ ಸೇರಿ ಅಭಿಮಾನಿಗಳಿಹೆ ಗುಡ್​ ನ್ಯೂಸ್‌ವೊಂದನಗನು ಕೊಟ್ಟಿದ್ದಾರೆ.​ "ಯಾರೆಲ್ಲಾ ಕಾಟನ್​ ಕ್ಯಾಂಡಿ ಅಭಿಮಾನಿಗಳು ಇದ್ದೀರಾ, ನಿಮ್ಮ ಊರಿಗೆ ಬರಬೇಕು ಎಂದು ಅನ್ನಿಸಿದರೆ, ನಿಮ್ಮ ಊರಿನ ಹೆಸರನ್ನು ಕಮೆಂಟ್​ ಮಾಡಿ. ಯಾರ ಕಮೆಂಟ್‌ಗೆ ಹೆಚ್ಚು ಮೆಚ್ಚುಗೆಗಳು ಬರುತ್ತದೆಯೋ, ಆ ಊರಿಗೆ ನಮ್ಮ ತಂಡ ಬರುತ್ತದೆ," ಎಂದು ಇನ್ಸ್ಟಾ ಖಾತೆಯ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+