ಗಂಟೆಗಟ್ಟಲೆ ಮೇಕಪ್‌..ಹಲ್ಲಿನ ಕ್ಲಿಪ್‌: ಕಷ್ಟ ತೋಡಿಕೊಂಡ ಬ್ರಹ್ಮಗಂಟು ದೀಪಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಬ್ರಹ್ಮಗಂಟು ಧಾರಾವಾಹಿ ಯಶಸ್ವಿಯಾಗಿ ಮುನ್ನಡೆದುಕೊಂಡು ಹೋಗುತ್ತಿದ್ದು, ಧಾರಾವಾಹಿ ಪ್ರಸಾರ ಕಂಡು ಒಂದು ವರ್ಷ ಪೂರೈಸುವ ಹೊಸ್ತಿಲಿನಲ್ಲಿದೆ. ಈ ಧಾರಾವಾಹಿಯಲ್ಲಿ ಕೃಷ್ಣ ಸುಂದರಿ ದೀಪಾ ಆಗಿ ಮಿಂಚುತ್ತಿರುವ ದಿಯಾ ಪಾಲಕ್ಕಲ್ ಇದೇ ಮೊದಲ ಬಾರಿಗೆ ದೀಪಾ ಪಾತ್ರಕ್ಕಾಗಿ ತಾವು ಪಡುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ಚಿತ್ತಾರ ಯೂಟ್ಯೂಬ್‌ ವಾಹಿನಿಯ ಜೊತೆ ಮಾತನಾಡಿದ ಅವರು, 'ಮೊದಲ ಬಾರಿಗೆ ಈ ಪಾತ್ರವನ್ನು ಒಪ್ಪಿಕೊಂಡಾಗ ನಾನಲ್ಲದೇ ಇರುವ ರೂಪದಲ್ಲಿ ಹೇಗೆ ಕಾಣಿಸಿಕೊಳ್ಳುವುದು ಎನ್ನುವ ಪ್ರಶ್ನೆ ಬಂದಿದಂತೂ ಸತ್ಯ. ಆದರೆ ಈ ರೀತಿಯ ಅವಕಾಶ ಬರುವುದು ತುಂಬಾ ಕಡಿಮೆ. ನಾನು ನನ್ನ ರೂಪದಲ್ಲೇ ಕಾಣಿಸಿಕೊಳ್ಳುವ ಅವಕಾಶ ಎಷ್ಟು ಬೇಕಾದರೂ ಬರಬಹುದು ಆದರೆ ಈ ಅವಕಾಶ ತುಂಬಾ ವಿರಳ ಅನಿಸಿತು. ನನ್ನ ನಟನೆಗೂ ಕೂಡ ಹೆಚ್ಚಿನ ಮಹತ್ವ ಸಿಗುತ್ತದೆ ಅನಿಸಿತು. ಅಮ್ಮನೂ ಕೂಡ ಈ ಅವಕಾಶ ಚೆನ್ನಾಗಿದೆ ಮಾಡು ಅಂತಾ ಹೇಳಿದರು'.

Bramhagantu Actress Diyapalakkal Talks About Deepa Character Struggle

ಧಾರಾವಾಹಿಯಲ್ಲಿ ಹಾಕಿಕೊಳ್ಳುವ ಮೇಕಪ್‌ ಹಾಗೂ ಹಲ್ಲಿನ ಕ್ಲಿಪ್‌ ಬಗ್ಗೆ ಮಾತನಾಡಿದ ಅವರು, 'ನಾನು ಮಾಡುತ್ತಿರುವ ಪಾತ್ರಕ್ಕೆ ಮೇಕಪ್‌ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಎಲ್ಲರಿಗಿಂತ ಮೊದಲು ಮೇಕಪ್‌ ಮಾಡಿಕೊಳ್ಳಲು ಶುರು ಮಾಡುತ್ತೇನೆ. ನಾನೇ ಕೊನೆಯಲ್ಲಿ ರೆಡಿಯಾಗುತ್ತೇನೆ. ಮುಖ, ಬೆನ್ನು, ಕೈ ಹಾಗೂ ಬೆರಳು ಎಲ್ಲಾದಕ್ಕೂ ಮೇಕಪ್‌ ಮಾಡಬೇಕಾಗುತ್ತದೆ' ಎಂದರು.

'ಇನ್ನು ಹಲ್ಲಿನ ಕ್ಲಿಪ್‌ ಬಗ್ಗೆ ಹೇಳಬೇಕು ಅಂದರೆ ಮಾತನಾಡುವಾಗ ಅಷ್ಟು ಸ್ಪಷ್ಟತೆ ಬರುವುದಿಲ್ಲ. ಅದನ್ನು ಹಾಕುವುದರಿಂದ ತುಂಬಾ ನೋವು ಕೂಡ. ನಿಜ ಜೀವನದಲ್ಲಿ ನಾನು ಅದನ್ನು ಬಳಸದೇ ಇರುವುದರಿಂದ ಅದನ್ನು ಹಾಕಿದ ತಕ್ಷಣ ನೋವು ಬರಲು ಶುರುವಾಗುತ್ತದೆ. ತಲೆ ನೋವು ಬರುತ್ತದೆ. ಶೂಟಿಂಗ್‌ ಜಾಸ್ತಿ ಇದ್ದಾಗ ಅದನ್ನು ತೆಗೆಯಲು ಕೂಡ ಸಮಯ ಸಿಗುವುದಿಲ್ಲ. ಅಷ್ಟು ನೋವು ತಿಂದರೂ ಕೂಡ ಪಾತ್ರ ತುಂಬಾ ಚೆನ್ನಾಗಿ ಬರುತ್ತಿದೆ. ಜನ ದೀಪಾ ಪಾತ್ರವನ್ನು ತುಂಬಾ ಇಷ್ಟಪಡುತ್ತಾರೆ' ಎಂದು ಹೇಳಿದರು.

Bramhagantu Actress Diyapalakkal Talks About Deepa Character Struggle

'ಈ ಧಾರಾವಾಹಿಯಲ್ಲಿ ಹಲ್ಲಿನ ಕ್ಲಿಪ್‌ ಹಾಕಿಕೊಳ್ಳಲು ಮೊದಲು ಡೆಂಟಿಸ್ಟ್‌ ಬಳಿ ಹೋಗಿ ಚೆಕಪ್‌ ಮಾಡಿಸಿ ತೆಗೆದುಕೊಂಡಿರುವುದು. ಅದು ನ್ಯಾಚುರಲ್ ಆಗಿ ಕಂಡರೂ ನನ್ನ ಹಲ್ಲಿಗೆ ಅಷ್ಟು ಒತ್ತುವುದಿಲ್ಲ. ನನ್ನ ಹಲ್ಲುಗಳಿಗೆ ಯಾವುದೇ ತೊಂದರೆ ಆಗದ ರೀತಿಯೇ ಅದನ್ನು ಮಾಡಿಸಿರುವುದು. ಡಾಕ್ಟರ್‌ ನನ್ನ ಬಾಯಿ ಆಕಾರ, ಹಲ್ಲಿನ ಹಾಗೂ ಒಸಡು ಪರೀಕ್ಷೆ ಮಾಡಿಸಿಯೇ ಅದನ್ನು ರೆಡಿ ಮಾಡಿಕೊಟ್ಟಿದ್ದಾರೆ' ಎಂದು ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಹೇಳಿದ್ದಾರೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+