ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ವಿನ್ನರ್‌ ಯಾರು? ಗೆದ್ದ ಹಣವೆಷ್ಟು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಬಳಿಕ ಆರಂಭವಾಗಿದ್ದ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮ ಅತಿ ಬೇಗ ಅಂತ್ಯಗೊಂಡಿದೆ. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಕೆಲವೇ ಕೆಲವು ಸಂಚಿಕೆಗಳು ಪ್ರಸಾರಗೊಂಡು ಈಗ ಮುಕ್ತಾಯವಾಗಿದೆ. ಈ ಕಾರ್ಯಕ್ರಮದಲ್ಲಿ ಗೆದ್ದವರ್ಯಾರು? ಗೆದ್ದವರಿಗೆ ಸಿಕ್ಕ ಹಣವೆಷ್ಟು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಬಳಿಕ ಒಂದಿಷ್ಟು ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳು ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿದವು. ಈ ಪೈಕಿ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮ ಕೂಡ ಒಂದು. ಪ್ರೋಮೋ ಮೂಲಕವೇ ಸಖತ್ ಹೈಪ್‌ ಸೃಷ್ಟಿಸಿದ್ದ ಈ ಕಾರ್ಯಕ್ರಮ ಫೆಬ್ರವರಿ 01ರಂದು ಆರಂಭವಾಯಿತು.

Boys vs Girls Reality Show Winner and Prize Details

ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋವನ್ನು ಕನ್ನಡಿಗರ ಮೆಚ್ಚಿನ ನಿರೂಪಕಿ ಅನುಪಮಾ ಗೌಡ ನಡೆಸಿಕೊಡುತ್ತಿದ್ದರು. ನಟ ವಿನಯ್ ಗೌಡ ಬಾಯ್ಸ್ ತಂಡದ ನಾಯಕರಾಗಿದ್ದು, ನಟಿ ಶುಭ ಪೂಂಜಾ ಗರ್ಲ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ವಿನಯ್ ಗೌಡ, ಮಂಜು ಪಾವಗಡ, ಧನರಾಜ್‌ ಆಚಾರ್ಯ, ರಜತ್‌ ಸೇರಿದಂತೆ ಅನೇಕ ಕಿರುತೆರೆ ನಟರು ಬಾಯ್ಸ್ ಟೀಂನಲ್ಲಿದ್ದರೆ, ಶುಭಾ ಪೂಂಜಾ, ಐಶ್ವರ್ಯಾ ಸಿಂಧೋಗಿ, ನಿವೇದಿತಾ ಗೌಡ, ಶೋಭಾ ಶೆಟ್ಟಿ, ರಮ್ಯಾ, ಸ್ಪಂದನಾ ಮೊದಲಾದವರು ಗರ್ಲ್ಸ್ ತಂಡದಲ್ಲಿದ್ದರು.

Take a Poll

ಇನ್ನು ಕಾರ್ಯಕ್ರಮದ ಆರಂಭದಲ್ಲಿ ಬಾಯ್ಸ್‌ ತಂಡದಲ್ಲಿದ್ದ ಲಾಯರ್‌ ಜಗದೀಶ್‌, ರಜತ್‌, ಹನುಮಂತ ಕಾರ್ಯಕ್ರಮದ ಮಧ್ಯೆದಲ್ಲಿಯೇ ತಮ್ಮ ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮದಿಂದ ದೂರ ಉಳಿದರು. ಮೊದಮೊದಲು ಬಹಳ ಇಂಟ್ರಸ್ಟಿಂಗ್‌ ಆಗಿದ್ದ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಬರಬರುತ್ತಾ ಹುಡುಗರು ಹಾಗೂ ಹುಡುಗಿಯರ ಮಾತಿನ ಜಟಾಪಟಿಯಲ್ಲೇ ಮುಗಿದು ಹೋಗುತ್ತಿತ್ತು. ಇದರಿಂದ ಕೆಲ ಪ್ರೇಕ್ಷಕರನ್ನು ಕಾರ್ಯಕ್ರಮ ಕಳೆದುಕೊಂಡಿತು. ಸರಿಸುಮಾರು 27 ಸಂಚಿಕೆಗಳು ಪ್ರಸಾರಕಂಡಿರುವ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಸದ್ಯ ಅಂತ್ಯವಾಗಿದೆ.

ಹುಡುಗರು ಹಾಗೂ ಹುಡುಗಿಯರ ನಡುವಿನ ಹೋರಾಟ ಕೊನೆಗೂ ಅಂತ್ಯಗೊಂಡಿದ್ದು, ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಈ ಬಾರಿ ಬಾಯ್ಸ್‌ ತಂಡ ಗೆದ್ದು ಬೀಗಿದ್ದಾರೆ. ಕಾರ್ಯಕ್ರಮದ ಗ್ರ್ಯಾಂಡ್‌ ಫಿನಾಲೆಗೆ ಮುಖ್ಯ ಅತಿಥಿಗಳಾಗಿ ಬಂದ ನಟ ಲೂಸ್ ಮಾದ ಯೋಗಿ ಹಾಗೂ ನಟಿ ಮೇಘನಾ ರಾಜ್ ಹುಡುಗರ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದ್ದು, ಗೆದ್ದ ತಂಡಕ್ಕೆ 10 ಲಕ್ಷ ನಗದು ಬಹುಮಾನ ಕೂಡ ನೀಡಲಾಗಿದೆ. ಗೆದ್ದು ಬೀಗಿದ ಹುಡುಗರ ತಂಡ ಗೆಲುವಿನ ಕ್ಷಣವನ್ನು ಸಂಭ್ರಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+