ವಾಶ್‌ ರೂಂನಲ್ಲೇ ಆಲ್ಕೋಹಾಲ್‌ ಕುಡಿದು-ಎದೆಹಾಲು ಸಂಗ್ರಹಿಸಿದ ನಟಿಗೆ ಫುಲ್‌ ಕ್ಲಾಸ್‌

ಬಾಲಿವುಡ್‌ ನಟಿ ರಾಧಿಕಾ ಆಪ್ಟೆ (Radhika Apte) ವಾಶ್‌ ರೂಂನಲ್ಲಿರುವ ಫೋಟೋ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ 78ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTAs) ಕಾರ್ಯಕ್ರಮದಲ್ಲಿ ರಾಧಿಕಾ ಆಪ್ಟೆ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿನ ವಾಶ್‌ ರೂಂನಿಂದ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ತಮ್ಮ ಹೇಳಿಕೆಯಿಂದ ಟೀಕೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಫೋಟೋದಲ್ಲಿ ನಟಿ ರಾಧಿಕಾ ಆಪ್ಟೆ ಒಂದು ಕೈಯಲ್ಲಿ ಶ್ಯಾಂಪೇನ್‌ ಗ್ಲಾಸ್‌ ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿ ತಮ್ಮ ಸ್ತನದಿಂದ ಎದೆಹಾಲು ಪಂಪ್‌ ಮಾಡುತ್ತಿದ್ದಾರೆ. ಈ ಫೋಟೊ ಹಂಚಿಕೊಂಡು ಇದಕ್ಕೆ ವಿವರಣೆಯೂ ನೀಡಿದ್ದಾರೆ ರಾಧಿಕಾ. ಇದು ನನ್ನ BAFTAsನ ರಿಯಾಲಿಟಿ ಎಂದು ನಗುವ ಎಮೋಜಿ ಹಾಕಿದ್ದಾರೆ.

Bollywood Actress Radhika Apte Shares Photo Of Pumping Breast Milk After Drinking Alcohol

ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ಗೆ ಹಾಜರಾಗಲು ನನಗೆ ಸಾಧ್ಯವಾಗಿಸಿದ್ದಕ್ಕಾಗಿ ನಾನು ನತಾಶಾ ಅವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ. ನತಾಶಾ ನನ್ನೊಂದಿಗೆ ವಾಶ್‌ರೂಮ್‌ಗೆ ಬಂದಿದ್ದಲ್ಲದೆ, ನನಗಾಗಿ ಶಾಂಪೇನ್ ತಂದಳು. ಹೊಸದಾಗಿ ತಾಯಿಯಾಗುವುದು ಮತ್ತು ಇಂತಹ ಒತ್ತಡದ ಕೆಲಸ ಮಾಡುವುದು ಕಷ್ಟ ಎಂದು ಅವರು ಬರೆದುಕೊಂಡಿದ್ದಾರೆ. ಈ ಮಟ್ಟದ ಕಾಳಜಿ ಮತ್ತು ಸೂಕ್ಷ್ಮತೆಯು ನಮ್ಮ ಚಿತ್ರರಂಗದಲ್ಲಿ ಅಪರೂಪ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಮಗುವಿನ ತಾಯಿ ಆಗಿರುವ ಕಾರಣ ಅವರು ಕೆಲಸದ ಒತ್ತಡದ ನಡುವೆ ಎದೆಹಾಲು ಕುಡಿಸಬೇಕು ಎನ್ನುವ ಉದ್ದೇಶದಿಂದ ವಾಶ್‌ರೂಂಗೆ ತೆರಳಿ, ಬಾಟಲ್‌ನಲ್ಲಿ ಎದೆಹಾಲು ಸಂಗ್ರಹಿಸಲು ಮುಂದಾಗಿದ್ದಾರೆ. ಆದರೆ ಅವರು ಆಲ್ಕೋಹಾಲ್ ಇರುವ ಶಾಂಪೇನ್ ಸವಿಯುತ್ತಾ ಎದೆಹಾಲು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಫೋಟೊವನ್ನು ರಾಧಿಕಾ ಆಪ್ಟೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Bollywood Actress Radhika Apte Shares Photo Of Pumping Breast Milk After Drinking Alcohol

ಈ ಫೋಟೋ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಿರುವ. ರಾಧಿಕಾ ಆಪ್ಟೆ ಅವರು ಆಲ್ಕೋಹಾಲ್ ಸೇವಿಸಿ, ಎದೆಹಾಲು ಹೀರಿದ್ದಾರೆ ಎಂಬ ವಿಚಾರವಾಗಿ ನೆಟ್ಟಿಗರು ಖಂಡನೆ ವ್ಯಕ್ತಪಡಿಸಿದ್ದಾರೆ. ನೀವು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದೀರಿ. ಆಲ್ಕೋಹಾಲ್ ಕುಡಿದು ಮಗುವಿಗೆ ಹಾಲುಣಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಾಧಿಕಾ ಆಪ್ಟೆ ಹಾಗೂ ಬೆನೆಡಿಕ್ಟ್ ಟೇಲರ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಮಗು ಜನಿಸಿದ ಕೆಲ ಸಮಯದಲ್ಲೇ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಫೆಬ್ರವರಿ 16ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿಸ್ಟರ್ ಮಿಡ್‌ನೈಟ್‌ (Sister Midnight) ಸಿನಿಮಾ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡಿತ್ತು. ಕರಣ್ ಕಂಧಾರಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ರಾಧಿಕಾ ಅತೃಪ್ತ ಮದುವೆಯಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.

ನಟಿ ರಾಧಿಕಾ ಮತ್ತು ಬೆನೆಡಿಕ್ಟ್ 2012ರಲ್ಲಿ ವಿವಾಹವಾದರು. ಲಂಡನ್‌ನಲ್ಲಿ ಇವರು ಮೊದಲು ಭೇಟಿಯಾಗಿದ್ದರು. ಮದುವೆಯಾಗುವ ಮೊದಲು ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಬಳಿಕ 2013ರಲ್ಲಿ ಅಧಿಕೃತವಾಗಿ ವಿವಾಹವನ್ನು ಬಹಿರಂಗಪಡಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ರಾಧಿಕಾ ಆಪ್ಟೆ ಅವರ ಫೋಟೋ ವೈರಲ್‌ ಆಗಿದ್ದು, ಟೀಕೆಗಳ ಸುರಿಮಳೆ ಹರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+