'Toxic' update: ರಾಕಿಂಗ್‌ ಸ್ಟಾರ್‌ ಜೊತೆ ಮಿಂಚಲಿದ್ದಾರೆ ಬಾಲಿವುಡ್‌ ಬ್ಯೂಟಿ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ 'ಟಾಕ್ಸಿಕ್‌' ಸಿನಿಮಾದ ಬಗ್ಗೆ ಸದ್ಯ ಎಲ್ಲೆಡೆಯೂ ಕ್ರೇಜ್‌ ಹೆಚ್ಚಾಗಿದೆ. ಕೆಜಿಎಫ್‌-2 ಬಳಿಕ ತುಂಬಾ ಗ್ಯಾಪ್‌ ಆಗಿರುವುದರಿಂದ ರಾಕಿಭಾಯ್‌ ಯಶ್‌ ಅವರನ್ನು ತೆರೆ ಮೇಲೆ ನೋಡಬೇಕೆಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕೆಲ ತಿಂಗಳ ಹಿಂದೆ ಮುಹೂರ್ತ ಮುಗಿಸಿದ್ದ ಟಾಕ್ಸಿಕ್‌ ತಂಡವು ಬಿಗ್‌ ಅಪ್ಡೇಟ್‌ವೊಂದನ್ನು ನೀಡಿದೆ.

ಟಾಕ್ಸಿಕ್‌ ಸಿನಿಮಾದಲ್ಲಿ ಈಗಾಗಲೇ ಸೌತ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸೇರಿದಂತೆ ಹಲವು ನಟಿಯರು ಇರಲಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಇದೀಗ ಯಶ್‌ ಜೊತೆಗೆ ಮತ್ತೊಬ್ಬ ಫೇಮಸ್‌ ನಟಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ರಿವೀಲ್‌ ಆಗಿದೆ. ಬಾಲಿವುಡ್‌ ಬ್ಯೂಟಿ ಕಿಯಾರ ಅಡ್ವಾಣಿ ಕೂಡ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸುತ್ತಿದ್ದಾರೆ.

Bollywood Actress Kiara Advani Will Act With Actor Yash In Toxic Movie

ಈ ಬಗ್ಗೆ ಬಿಗ್‌ ಅಪ್ಡೇಟ್‌ ನೀಡಿರುವ ಚಿತ್ರತಂಡವು ಈ ತಿಂಗಳಾಂತ್ಯಕ್ಕೆ ಮುಂಬೈನಲ್ಲಿ ಶೂಟಿಂಗ್‌ ನಿಗದಿ ಮಾಡಿದೆಯಂತೆ. ಅಲ್ಲಿ ಕಿಯಾರಾ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ರೊಮ್ಯಾಂಟಿಕ್‌ ಸನ್ನಿವೇಷಗಳ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಬರೋಬ್ಬರಿ ಒಂದು ತಿಂಗಳ ಕಾಲ ಮುಂಬೈನಲ್ಲಿ ಶೂಟಿಂಗ್‌ ನಡೆಯಲಿದೆ ಎನ್ನಲಾಗಿದೆ.

'ಕೆಜಿಎಫ್‌' ಬಳಿಕ ನಟ ಯಶ್‌ ಅವರು ಹೈಪ್‌ ಕ್ರಿಯೇಟ್‌ ಮಾಡಿದ್ದು, ಎಲ್ಲೆಡೆಯೂ ಅವರಿಗೆ ಫ್ಯಾನ್ಸ್‌ ಹುಟ್ಟಿಕೊಂಡಿದ್ದಾರೆ. ಬಾಲಿವುಡ್‌ನ ಹಲವು ಬ್ಯೂಟಿಗಳು ಯಶ್‌ ಜೊತೆ ನಟಿಸಬೇಕು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೀಗ ಕಿಯಾರ ಅಡ್ವಾಣಿ ಯಶ್‌ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾ ಮೂಲಕ ಬಾಲಿವುಡ್‌ ನಟಿ ಕಿಯಾರಾ ಕನ್ನಡಕ್ಕೂ ಕಾಲಿಡುತ್ತಿದ್ದಾರೆ.

Bollywood Actress Kiara Advani Will Act With Actor Yash In Toxic Movie

'ಕೆಜಿಎಫ್‌ 1' ಹಾಗೂ 'ಕೆಜಿಎಫ್‌ 2' ಸಿನಿಮಾಗಳು ನಟ ಯಶ್‌ ಅವರಿಗೆ ದೊಡ್ಡ ಹಿಟ್‌ ತಂದುಕೊಟ್ಟಿರುವ ಕಾರಣ ಮುಂದಿನ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ ಗುಟ್ಟಾಗಿಯೇ ಸೆಟ್ಟೇರುತ್ತಿದೆ. ಸದ್ಯಕ್ಕೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಕೆಲವೇ ಮಂದಿಯ ಬಗ್ಗೆ ಚಿತ್ರತಂಡ ರಿವೀಲ್‌ ಮಾಡಿದ್ದು. ಕಥೆ ಏನು? ಯಶ್‌ ಅವರ ಪಾತ್ರವೇನು? ಎಂಬ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಟ್ಟಿಲ್ಲ.

ಸದ್ಯದ ಮಾಹಿತಿ ಪ್ರಕಾರ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಜೋಡಿಯಾಗಿ ಬಾಲಿವುಡ್‌ ಬ್ಯೂಟಿ ಕಿಯಾರಾ ನಟಿಸಲಿದ್ದಾರೆ ಎಂಬ ವಿಚಾರ ಮುನ್ನೆಲೆಯಲ್ಲಿದೆ. ನಯನ ತಾರಾ, ಹುಮಾ ಖುರೇಷಿ ಸೇರಿದಂತೆ ಹಲವರ ದಂಡೇ ಈ ಚಿತ್ರದಲ್ಲಿದೆ. ಇನ್ನೂ ಘಟಾನುಘಟಿಗಳು ಟಾಕ್ಸಿಕ್‌ನಲ್ಲಿ ಮಿಂಚಲಿದ್ದು, ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಟಾಕ್ಸಿಕ್‌ ಸಿನಿಮಾಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗೀತು ಮೋಹನ್ ದಾಸ್ ಆಕ್ಷನ್‌ ಕಟ್‌ ಹೇಳುತ್ತಿದ್ದು, ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್​ನವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಬಜೆಟ್‌ ಕೂಡ ದೊಡ್ಡ ಗಾತ್ರದ್ದು ಎನ್ನಲಾಗಿದೆ. ಯಶ್‌ ಹಾಗೂ ಕಿಯಾರ ಜೋಡಿಯನ್ನು ತೆರೆ ಮೇಲೆ ನೋಡಲು ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ ಮಂದಿಯೂ ಕಾತರದಿಂದ ಕಾದಿದ್ದಾರೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+