Mokshitha Pai: ಕಿಂಗ್ ಅಲ್ಲ ಕ್ವೀನ್‌ಗೆ ವಿನ್ನರ್ ಪಟ್ಟ: ಟ್ರೋಫಿ ಕೊಟ್ಟ ಸುಳಿವೇನು?
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ಹಂತಕ್ಕೆ ಬಂದು ತಲುಪಿದೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಫಿನಾಲೆಗೆ ಬಂದ ಆರು ಜನರ ಪೈಕಿ ಭವ್ಯ ಗೌಡ ಈಗಾಗಲೇ ಎಲಿಮಿನೇಟ್ ಆಗಿದ್ದು, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಟಾಪ್ ಐದು ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದಾರೆ. ಈ ಐವರ ಗೆಲುವಿನ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈಗಾಗಲೇ ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದ್ದು, ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಎನ್ನುವ ಸುಳಿವು ಈಗಾಗಲೇ ಸಿಕ್ಕಿದೆ. ಅನೇಕರು ತ್ರಿವಿಕ್ರಮ್ ಅಥವಾ ಹನುಮಂತ ಈ ಬಾರಿಯ ವಿನ್ನರ್ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಆ ಒಂದು ಸ್ಪರ್ಧಿ ಇವರಿಗೆ ಠಕ್ಕರ್ ಕೊಟ್ಟು ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಅದು ಮತ್ಯಾರು ಅಲ್ಲ ನಟಿ ಮೋಕ್ಷಿತಾ ಪೈ.

ಹೌದು ಬಿಗ್ ಬಾಸ್ ಕನ್ನಡ ಸೀಜನ್ 11ರ ವಿನ್ನರ್ ಮೋಕ್ಷಿತಾ ಪೈ ಆಗುವುದು ಬಹುತೇಕ ಖಚಿತವಾಗಿದೆ. ಯಾಕೆಂದರೆ ಈ ಬಾರಿ ಹೆಣ್ಣು ಮಕ್ಕಳೇ ವಿನ್ನರ್ ಆಗಬಹುದು ಎನ್ನಲಾಗುತ್ತಿತ್ತು. ಫಿನಾಲೆಗೆ ಬಂದ ಇಬ್ಬರು ಹೆಣ್ಣು ಮಕ್ಕಳ ಪೈಕಿ ಭವ್ಯ ಈಗಾಗಲೇ ಎಲಿಮಿನೇಟ್ ಆಗಿದ್ದು, ಹೀಗಾಗಿ ಬಿಗ್ ಬಾಸ್ ಕನ್ನಡ ಸೀಜನ್ 11ರ ಟ್ರೋಫಿ ಮೋಕ್ಷಿತಾ ಕೈ ಸೇರಲಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಒಟ್ಟು ಹತ್ತು ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್‌ನಲ್ಲಿ ಸೀಸನ್ -3ರಲ್ಲಿ ನಟಿ ಶೃತಿ ಗೆಲುವು ಸಾಧಿಸಿದ್ದರು. ಬಳಿಕ ಮತ್ಯಾವ ಮಹಿಳಾ ಸ್ಪರ್ಧಿಯೂ ಈವರೆಗೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಮಹಿಳಾ ಸ್ಪರ್ಧಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇನ್ನು ಮಹಿಳಾ ಸ್ಪರ್ಧಿಗೆ ಗೆಲುವು ಎನ್ನುವ ಸುಳಿವನ್ನು ಈ ಬಾರಿಯ ಟ್ರೋಫಿ ಬಿಟ್ಟುಕೊಟ್ಟಿದೆ.
ಹಿಂದಿ ಬಿಗ್ ಬಾಸ್ ಸೀಸನ್ 15ರಲ್ಲಿ ಮಹಿಳಾ ಸ್ಪರ್ಧಿ ಗೆಲುವು ಸಾಧಿಸಿದ್ದರು. ಆ ವೇಳೆ ವಿನ್ನರ್ ತೇಜಸ್ವಿ ಪ್ರಕಾಶ್ ಅವರಿಗೆ ನೀಡಿದ್ದ ಟ್ರೋಫಿಯಲ್ಲಿ ಪಕ್ಷಿಯ ರೆಕ್ಕೆ ಆಕಾರದಲ್ಲಿ ಇತ್ತು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಟ್ರೋಫಿ ಬದಲಾಗಿದೆ. ಎರಡು ರೆಕ್ಕೆಗಳಿರುವ ಟ್ರೋಫಿ ನೀಡಲಾಗುತ್ತಿದೆ. ಹಾಗಾಗಿ ಮಹಿಳಾ ಸ್ಪರ್ಧಿ ಅಂದರೆ ಮೋಕ್ಷಿತಾಗೆ ಗೆಲುವು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಆದರೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಟ್ರೋಫಿ ಹಾಗೂ ಗೆಲುವು ಯಾರ ಪಾಲಾಗಲಿದೆ ಎನ್ನುವುದು ಪ್ರೇಕ್ಷಕರು ಕಾದು ನೋಡಬೇಕಿದೆ.












Click it and Unblock the Notifications