Rajath:ಮಾಜಿ ಪ್ರೇಯಸಿ ಜೊತೆಗಿನ ಫೋಟೋ ವೈರಲ್: ಮುಂದೆ ಮಾರಿಹಬ್ಬದ ಸೂಚನೆ ಕೊಟ್ಟ ರಜತ್
ಬಿಗ್ ಬಾಸ್ ಸೀಜನ್ 11ರ ಗ್ರ್ಯಾಂಡ್ ಫಿನಾಲೆ ಬಹಳ ಅದ್ಧೂರಿಯಾಗಿ ನಡೆದಿದೆ. ವಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಡುಗಾರ ಹನುಮಂತ ವಿನ್ನರ್ ಆಗಿ ಹೊರ ಹೊಮ್ಮಿದರೆ, ನಟ ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋ ಅರ್ಧದಲ್ಲಿ ಬಂದಿದ್ದ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ. ಈ ಸೀಜನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದ್ದು, ಇಬ್ಬರು ವಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಟಾಪ್ ತ್ರಿನಲ್ಲಿ ಮಿಂಚಿದ್ದಾರೆ.
ಅದರಲ್ಲೂ ರಜತ್ ಅಂತೂ ಆಟ, ಮನೋರಂಜನೆ, ವ್ಯಕ್ತಿತ್ವ ಎಲ್ಲಾದರಲ್ಲಿಯೂ ಬೆಸ್ಟ್ ಆಗಿದ್ದು, ಟ್ರೋಫಿ ಗೆಲ್ಲದೇ ಇದ್ದರೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಜನ್ 11ರ ಆಟದ ಪರಿ ಬದಲಿಸಿದ ಕೀರ್ತಿ ರಜತ್‌ಗೆ ಸಲ್ಲಬೇಕು. ಇದೇ ಮಾತನ್ನು ಕಿಚ್ಚ ಸುದೀಪ್ ಕೂಡ ಬಿಗ್ ಬಾಸ್ ವೇದಿಕೆಯ ಮೇಲೆ ಹೇಳಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಬಂದ ಮೊದಮೊದಲು ಪ್ರೇಕ್ಷಕರಿಗೂ ಕಿರಿಕಿರಿ ಅನಿಸುತ್ತಿದ್ದ ರಜತ್ ಎರಡೇ ವಾರದಲ್ಲಿ ತಮ್ಮ ಆಟದ ಪರಿ ಬದಲಿಸಿದ್ದು, ತಮ್ಮ ಮೇಲಿನ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದರು. ಆಟ, ಜಗಳ, ಕಾಮಿಡಿ, ಮನೋರಂಜನೆ ಎಲ್ಲಾದಕ್ಕೂ ರಜತ್ ಸೈ ಎನಿಸಿಕೊಂಡಿದ್ದರು. ಅತ್ತ ಬಿಗ್ ಬಾಸ್ ಮನೆಯೊಳಗೆ ರಜತ್ ಗೆಲುವಿನ ಹೋರಾಟದಲ್ಲಿದ್ದ ವೇಳೆ ಇತ್ತ ಹೊರಗಡೆ ರಜತ್ ಕುಟುಂಬಕ್ಕೆ ಸಂಕಷ್ಟವೊಂದು ಎದುರಾಗಿತ್ತು.
ಕಿಡಿಗೇಡಿಯೊಬ್ಬ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ಅವರ ಮಾಜಿ ಗೆಳತಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ, ಈ ಹಿನ್ನೆಲೆಯಲ್ಲಿ ಅವರ ಪತ್ನಿ ಅಕ್ಷಿತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ವಿಚಾರ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ರಜತ್‌ಗೆ ತಿಳಿದಿದ್ದು, ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರವಾಗಿ ನಾನು ಹೊರಗಡೆ ಬಂದಿದ್ದೀನಲ್ಲಾ, ಮುಂದೆ ನೋಡಿಕೊಳ್ಳುತ್ತೇನೆ ಬಿಡಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮೊದಲು ಕಿಡಿಗೇಡಿಯೊಬ್ಬ ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ಅವರ ಮಾಜಿ ಗೆಳತಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಫೋಟೋ ಡಿಲೀಟ್ ಮಾಡುವಂತೆ ಮೆಸೇಜ್ ಮೂಲಕ ಮನವಿ ಮಾಡಿದ ರಜತ್ ಪತ್ನಿ ಅಕ್ಷಿತಾಗೆ ಟ್ರೋಲ್ ಪೇಜ್‌ನ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

ಫೋಟೋ ಡಿಲೀಟ್ ಮಾಡುವ ಉದ್ದೇಶದಿಂದ ಅಕ್ಷಿತಾ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಸುಮಾರು 6,500 ರೂಪಾಯಿ ಹಣವನ್ನು ಹಾಕಿದ್ದರು. ಹಣ ಹಾಕಿದ ನಂತರ ಬೇರೆ ಬೇರೆ ಟ್ರೋಲ್ ಪೇಜ್‌ನಲ್ಲಿ ಮತ್ತೆ ಫೋಟೋ ಅಪ್ಲೋಡ್ ಮಾಡಲಾಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಕೇಳಿದಾಗ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಟ್ರೋಲ್ ಪೇಜ್ ವಿರುದ್ಧ ಬೇಸತ್ತು ಸೈಬರ್ ಠಾಣೆ ಮೆಟ್ಟಿಲೇರಿದ ರಜತ್ ಪತ್ನಿ ಅಕ್ಷಿತಾ, ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ನೀಡಿದ್ದರು.












Click it and Unblock the Notifications