Mokshitha Pai: ಬಿಗ್‌ ಬಾಸ್‌ ಮನೆಯಲ್ಲಿ ಮೋಕ್ಷಿತಾಗೆ ಒಲಿದ ಅದೃಷ್ಟ: ಭರ್ಜರಿ ಫಿನಾಲೆ ಎಂಟ್ರಿ

ಬಿಗ್​ ಬಾಸ್​ ಕನ್ನಡ ಸೀಸನ್​ 11 ಇಂದು ಹಾಗೂ ನಾಳೆ ವೀಕೆಂಡ್‌ ಸಂಚಿಕೆಗಳನ್ನು ಹೊರತುಪಡಿಸಿದರೆ ಕೇವಲ ಒಂದು ವಾರ ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್‌ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಸದ್ಯ ಗ್ರ್ಯಾಂಡ್‌ ಫಿನಾಲೆಗೆ ಭರ್ಜರಿ ಸಿದ್ಧತೆ ಕೂಡ ನಡೆಯುತ್ತಿದೆ.

ಬಿಗ್​ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಎಂಟು ಜನ ಉಳಿದುಕೊಂಡಿದ್ದು, ಇಂದು ಹಾಗೂ ನಾಳೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬರುವುದು ಗ್ಯಾರಂಟಿಯಾಗಿದೆ. ವಾರದ ಮಧ್ಯದ ಎಲಿಮಿನೇಷನ್‌ ರದ್ದು ಮಾಡಿದ ಬಿಗ್ ಬಾಸ್‌ ವಾರಾಂತ್ಯಕ್ಕೆ ಡಬ್ಬಲ್‌ ಎಲಿಮಿನೇಷನ್‌ ಎನ್ನುವ ಶಾಕ್ ನೀಡಿದ್ದಾರೆ. ಹೀಗಾಗಿ ಇಂದು ಹಾಗೂ ನಾಳೆ ವೀಕೆಂಡ್‌ ಸಂಚಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ತಮ್ಮ ಬಿಗ್‌ ಬಾಸ್‌ ಆಟ ಅಂತ್ಯಗೊಳಿಸಲಿದ್ದಾರೆ.

Bigg Boss Kannada Season 11 Actress Mokshitha Pai Selected To Finale Week

ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಅಂತಿಮ ದಿನಗಳು ಸಖತ್‌ ಟ್ವಿಸ್ಟ್‌ಗಳೊಂದಿಗೆ ಸಾಗುತ್ತಿದ್ದು, ಈಗಾಗಲೇ ಮೂರು ಜನ ಗ್ರ್ಯಾಂಡ್‌ ಫಿನಾಲೆ ವಾರಕ್ಕೆ ಹೆಜ್ಜೆ ಇಟ್ಟಿದ್ದಾರೆ. ಟಿಕೆಟ್‌ ಟು ಫಿನಾಲೆ ಪಡೆದ ಹನುಮಂತ ಹಾಗೂ ಬಿಗ್​ ಬಾಸ್ ಮನೆಯ ಮಾಸ್ಟರ್‌ ಎನಿಸಿಕೊಂಡಿದ್ದ ತ್ರಿವಿಕ್ರಮ್‌ ಹಾಗೂ ತಮ್ಮ ವ್ಯಕ್ತಿತ್ವದಿಂದಲೇ ಈವರೆಗೂ ಪ್ರೇಕ್ಷಕರ ಮನಸ್ಸು ಗೆದ್ದಿರುವ ಪಾರು ಖ್ಯಾತಿಯ ನಟಿ ಮೋಕ್ಷಿತಾ ಪೈ ಫಿನಾಲೆ ವಾರ ತಲುಪಿದ್ದಾರೆ.

ವಾರದ ಮಧ್ಯದ ಎಲಿಮಿನೇಷನ್‌ ರದ್ದಾದ ಕಾರಣ ಮತ್ತೆ ನಾಮಿನೇಷನ್‌ ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಒಬ್ಬ ಸ್ಪರ್ಧಿ ಮೂರು ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಬೇಕಿತ್ತು. ಹೀಗಾಗಿ ಟಿಕೆಟ್‌ ಟು ಫಿನಾಲೆ ಪಡೆದ ಹನುಮಂತ ಹಾಗೂ ಭವ್ಯ ಗೌಡ ನಾಮಿನೇಟ್‌ ಮಾಡಿದ ತ್ರಿವಿಕ್ರಮ್‌ ಹೊರತು ಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್‌ ಆದರು.

Bigg Boss Kannada Season 11 Actress Mokshitha Pai Selected To Finale Week

ಮೋಕ್ಷಿತಾ ಪೈ, ಧನರಾಜ್ ಆಚಾರ್, ಗೌತಮಿ ಜಾದವ್, ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್‌ ಆದರು. ಈ ವೇಳೆ ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಅಲ್ಟಿಮೇಟ್‌ ಕ್ಯಾಪ್ಟನ್‌ ಹನುಮಂತ ಅವರಿಗೆ ಬಿಗ್‌ ಬಾಸ್‌ ವಿಶೇಷ ಅಧಿಕಾರವೊಂದನ್ನು ನೀಡಿತು. ಕ್ಯಾಪ್ಟನ್ ಹನುಮಂತ ಬಿಗ್ ಬಾಸ್ ಈ ಸೀಸನ್‌ನ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್‌ನಿಂದ ಪಾರು ಮಾಡಬೇಕು ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎಂದು ಬಿಗ್‌ ಬಾಸ್‌ ತಿಳಿಸಿದ್ದರು.

Bigg Boss Kannada Season 11 Actress Mokshitha Pai Selected To Finale Week

ವಿಶೇಷ ಅಧಿಕಾರ ಪಡೆದುಕೊಂಡ ಹನುಮಂತ ತಮ್ಮ ದೋಸ್ತ ಧನರಾಜ್‌ ಅವರ ಹೆಸರನ್ನು ತೆಗೆದುಕೊಳ್ಳಬಹುದು ಎಂದು ಬಿಗ್‌ ಬಾಸ್‌ ಮನೆಯೊಳಗಿರುವ ಸ್ಪರ್ಧಿಗಳು ಮಾತ್ರವಲ್ಲದೇ, ಪ್ರೇಕ್ಷಕರು ಕೂಡ ಊಹಿಸಿದ್ದರು. ಆದರೆ ಈ ಆಲೋಚನೆಗೆ ಟ್ವಿಸ್ಟ್‌ ಕೊಟ್ಟ ಹನುಮಂತ ಯಾರೂ ಊಹಿಸಿರದ ಮೋಕ್ಷಿತಾ ಅವರನ್ನು ಉಳಿಸಿ ಫಿನಾಲೆ ವಾರಕ್ಕೆ ಹೋಗಲು ಅವಕಾಶ ಮಾಡಿಕೊಡುತ್ತಾರೆ. ಸೂಕ್ತ ಕಾರಣಕ್ಕೆ ಹನುಮಂತ, ಮೋಕ್ಷಿತಾ ಅವರ ವ್ಯಕ್ತಿತ್ವವನ್ನು ತೆಗೆದುಕೊಳ್ಳುತ್ತಾರೆ. ಈ ವೇಳೆ ಕಣ್ಣೀರಿಟ್ಟ ಮೋಕ್ಷಿತಾ, ಹನುಮಂತಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+