Mokshitha Pai: ಮೋಕ್ಷಿತಾ ಅಭಿಮಾನಿಗಳಿಗೆ ಭಾರೀ ನಿರಾಸೆ: ಕೊನೆ ಕ್ಷಣದಲ್ಲಿ ಕೈ ತಪ್ಪಿದ ಟ್ರೋಫಿ
ಬಿಗ್ ಬಾಸ್ ಕನ್ನಡ ಸೀಜನ್ 11ರ ಗ್ರ್ಯಾಂಡ್ ಫಿನಾಲೆಯ ಎರಡನೇ ದಿನದ ಕಾರ್ಯಕ್ರಮ ಆರಂಭವಾಗಿದ್ದು, ಟಾಪ್ ಐದು ಸ್ಪರ್ಧಿಗಳ ಪೈಕಿ ಈಗಾಗಲೇ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿರುವ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ. ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ ಹಾಗೂ ರಜತ್ ಪೈಕಿ ಉಗ್ರಂ ಮಂಜು ನಾಲ್ಕನೇ ರನ್ನರ್ ಅಪ್ ಆಗಿ ಹಾಗೂ ಮೋಕ್ಷಿತಾ ಪೈ ಮೂರನೇ ರನ್ನರ್ ಅಪ್ ಆಗಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು ಸದ್ಯದ ಮಾಹಿತಿ ಪ್ರಕಾರ ಮೋಕ್ಷಿತಾ ಎಲಿಮೀನೇಟ್ ಆಗಿದ್ದಾರೆ. ಟ್ರೋಫಿ ಗೆಲ್ಲುವ ಸಮೀಪದಲ್ಲಿದ್ದ ಮೋಕ್ಷಿತಾಗೆ ಕೊನೆಯ ಹಂತದಲ್ಲಿ ಗೆಲುವು ಕೈ ತಪ್ಪಿದೆ. ಒಟ್ಟು ಹತ್ತು ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್‌ನಲ್ಲಿ ಸೀಸನ್ -3ರಲ್ಲಿ ನಟಿ ಶೃತಿ ಗೆಲುವು ಸಾಧಿಸಿದ್ದರು. ಬಳಿಕ ಮತ್ತೆ ಯಾವ ಮಹಿಳಾ ಸ್ಪರ್ಧಿಯೂ ಈವರೆಗೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಮಹಿಳಾ ಸ್ಪರ್ಧಿ ಗೆಲ್ಲಬೇಕು ಎನ್ನುವುದು ಪ್ರೇಕ್ಷಕರ ಆಸೆಯಾಗಿತ್ತು.

ಭವ್ಯ ಗೌಡ ಹೊರ ಬರುತ್ತಿದ್ದಂತೆ ಮೋಕ್ಷಿತಾ ಅವರೇ ವಿನ್ನರ್ ಎನ್ನುವುದು ಹಲವರ ಲೆಕ್ಕಚಾರ ಆಗಿತ್ತು. ಆದರೆ ವಿನ್ನರ್ ಆಗುತ್ತಾರೆ ಎಂದೇ ಹೇಳಲಾಗಿದ್ದ ಮೋಕ್ಷಿತಾ ಪೈ ಅವರು ಈಗ ಶಾಕಿಂಗ್ ಎಲಿಮಿನೇಷನ್ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಅಧಿಕೃತವಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಆದರೆ ಈ ಬಾರಿಯೂ ಬಿಗ್ ಬಾಸ್ ಟ್ರೋಫಿ ಮಹಿಳೆಯರಿಗೆ ದೊರಕಿಲ್ಲ ಎನ್ನುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ಆದರೆ ತಮ್ಮ ಸರಳತೆ ಹಾಗೂ ಸ್ವಾಭಿಮಾನದ ಮೂಲಕ ಮೋಕ್ಷಿತಾ ಪೈ ಬಿಗ್ ಬಾಸ್ ಟ್ರೋಫಿ ಗೆಲ್ಲದೇ ಇದ್ದರೂ ಜನರ ಮನಸ್ಸು ಗೆದ್ದಿದ್ದಾರೆ.












Click it and Unblock the Notifications