Trivikram: ಗರ್ಲ್‌ಫ್ರೆಂಡ್, ಮದುವೆ ಬಗ್ಗೆ ಕೊನೆಗೂ ರಿವೀಲ್ ಮಾಡಿದ ತ್ರಿವಿಕ್ರಮ್
ಕನ್ನಡ ಬಿಗ್‌ಬಾಸ್ ಸೀಸನ್-11ರ ರನ್ನರ್ ಅಪ್ ತ್ರಿವಿಕ್ರಮ್ ಉತ್ತಮ ಆಟವಾಡಿ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಲವ್ ಸ್ಟೋರಿ ಬಗ್ಗೆಯೂ ಭಾರಿ ಚರ್ಚೆಯಾಗಿತ್ತು. ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಭವ್ಯಾ ಗೌಡ ಅವರೊಂದಿಗೆ ತ್ರಿವಿಕ್ರಮ್ ತುಂಬಾ ಒಡನಾಟ ಹೊಂದಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದೇ ಜನ ಭಾವಿಸಿದ್ದರು. ಆದರೆ, ಬಿಗ್‌ಬಾಸ್ ಮುಗಿದ ಬಳಿಕ ತ್ರಿವಿಕ್ರಮ್ ಅವರು ಭವ್ಯಾ ಇನ್ನೂ ಚಿಕ್ ಹುಡುಗಿ, ಮದುವೆಯಾಗುವ ಯೋಚನೆ ಇಲ್ಲ ಎಂದು ಶಾಕ್ ಕೊಟ್ಟಿದ್ರು. ಕೊನೆಗೂ ತನ್ನ ಗರ್ಲ್‌ಫ್ರೆಂಡ್ ಕಥೆಯನ್ನು ತ್ರಿವಿಕ್ರಮ್ ರಿವೀಲ್ ಮಾಡಿದ್ದಾರೆ.
ಸೀರಿಯಲ್‌ಗಳಲ್ಲಿ ಮಿಂಚಿದ್ದ ತ್ರಿವಿಕ್ರಮ್ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿ ಆಟದಲ್ಲಿ ಮುಂದಿದ್ದರು. ಬಹುತೇಕರು ತ್ರಿವಿಕ್ರಮ್ ಅವರೇ ಈ ಬಾರಿ ಬಿಗ್‌ಬಾಸ್ ವಿನ್ನರ್ ಆಗ್ತಾರೆ ಎಂದೇ ಭಾವಿಸಿದ್ರು. ಆದ್ರೆ ಅಂತಿಮ ಕ್ಷಣದವರೆಗೆ ತಲುಪಿ ರನ್ನರ್ ಅಪ್ ಆಗಿದ್ದರು. ಬಿಗ್‌ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾಗೌಡ ಅವರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ತುಂಬಾ ಆತ್ಮೀಯತೆ ಬೆಳೆಸಿಕೊಂಡಿದ್ದರಿಂದ ಈ ಬಿಗ್‌ಬಾಸ್ ಸೀಸನ್‌ನ ಜೋಡಿ ಪಟ್ಟವನ್ನು ಇವರಿಗೆ ನೀಡಿದ್ದರು ಪ್ರೇಕ್ಷಕರು.

ಅಲ್ಲದೆ ಬಿಗ್‌ಬಾಸ್ ಮುಗಿದ ಬಳಿಕ ಭವ್ಯಾ ಹಾಗೂ ತ್ರಿವಿಕ್ರಮ್ ಮದುವೆ ನಡೆಯಲಿದೆ ಎಂದೂ ಊಹಿಸಿದ್ದರು. ಆದರೆ, ಅಲ್ಲಿಂದ ಹೊರಬಂದ ನಂತರ ತ್ರಿವಿಕ್ರಮ್ ಅವರು ಆ ಗಾಸಿಪ್‌ಗೆ ತೆರೆ ಎಳೆದಿದ್ದರು. ಭವ್ಯಾ ಇನ್ನೂ ಚಿಕ್ಕ ಹುಡುಗಿ, ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ ಎನ್ನುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ರು. ಇದೀಗ ತ್ರಿವಿಕ್ರಮ್ ಅವರು ಸಂದರ್ಶನವೊಂದರಲ್ಲಿ ತನ್ನ ಗರ್ಲ್‌ಫ್ರೆಂಡ್ ಕುರಿತ ಮಾಹಿತಿ ರಿವೀಲ್ ಮಾಡಿದ್ದಾರೆ.
ನನಗೆ ಮೊದಲು ಒಬ್ಬರು ಗರ್ಲ್‌ಫ್ರೆಂಡ್ ಇದ್ದಳು. ಅವರ ಮನೆಯವರು ತುಂಬಾ ಸೆಟಲ್ಡ್ ಆಗಿದ್ರು. ನಾನು ಇನ್ನೂ ಲೈಫಲ್ಲಿ ಸ್ಟ್ರಗಲ್ ಮಾಡುತ್ತಿದ್ದವನು. ಆ ಹುಡುಗಿ ನಾನು ಸೆಟಲ್ ಆಗಬೇಕು ಅಂತ ಬಯಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರು ಸೌಕರ್ಯವಂತರಾಗಿದ್ರು. ಆದರೆ ಅವರ ತಂದೆಯಿಂದಲೂ ಸ್ವಲ್ಪ ಪ್ರೆಶರ್ ಇತ್ತು. ಸ್ಟೇಟಸ್ ಹಾಗೂ ಹಣಕಾಸಿನ ವಿಚಾರವಾಗಿ ನಮ್ಮಿಬ್ಬರ ಮಧ್ಯೆ ಅಂತರ ಬರಬಹುದು ಎಂದು ಅನಿಸಿತ್ತು. ಹಾಗಾಗಿ ಇಬ್ಬರೂ ಪರಸ್ಪರ ಮಾತನಾಡಿಕೊಂಡೇ ದೂರ ಆದೆವು. ನನ್ನ ತಂದೆ ನಿಧನರಾದ ಆರು ತಿಂಗಳ ನಂತರ ಆ ಹುಡುಗಿ ಜೊತೆ ಬ್ರೇಕಪ್ ಆಯ್ತು ಎಂದು ತ್ರಿವಿಕ್ರಮ್ ರಿವೀಲ್ ಮಾಡಿದ್ದಾರೆ.

ಈ ಘಟನೆ ಆದ ಬಳಿಕ ನನಗೆ ಅನಿಸಿದ್ದು ಮೊದಲು ಸೆಟಲ್ ಆಗಬೇಕು ಎಂದು. ಸೆಟಲ್ ಆದ ಮೇಲೆ ಗರ್ಲ್‌ಫ್ರೆಂಡ್ ಸಿಕ್ಕೇ ಸಿಗ್ತಾಳೆ ಎಂದು ಅವತ್ತೇ ನಿರ್ಧರಿಸಿದೆ. ಇದಾದ ಬಳಿಕ ನಾನು ಸದ್ಯ ಸಿಂಗಲ್ ಆಗೇ ಇದ್ದೀನಿ. ಆ ಹುಡುಗಿಗೆ ಬೇರೆಯವರೊಂದಿಗೆ ಮದುವೆಯಾಗಿದೆ. ಆ ಹುಡುಗಿ ಈಗಲೂ ನನ್ನೊಂದಿಗೆ ಟಚ್‌ನಲ್ಲಿದ್ದಾಳೆ. ಆಕೆಯ ಗಂಡ ಕೂಡ ನನ್ನೊಂದಿಗೆ ಮಾತನಾಡುತ್ತಾರೆ. ಆಗಾಗ ಭೇಟಿ ಕೂಡ ಆಗುತ್ತಿರುತ್ತೇವೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಬ್ರೇಕಪ್ ಆದ್ಮೇಲೆ ಆ ನಿರ್ಧಾರ ತಗೋಬಾರದಿತ್ತೇನೋ ಅಂತ ತುಂಬಾ ಸಲ ಅನಿಸಿತ್ತು. ಆದರೂ ಅಲ್ಲಿಂದ ಇಲ್ಲಿವರೆಗೆ ನನ್ನ ಬೆಳವಣಿಗೆ ನೋಡಿದರೆ, ಒಂದು ವೇಳೆ ನಾನು ಅದೇ ಸ್ಥಿತಿಲಿ ಇದ್ದಾಗ ಮದುವೆ ಆಗಿದ್ರೆ ಅವಳ ಕೈಯಲ್ಲಿ ಬೈಯಿಸಿಕೊಳ್ತಿದ್ದೆ. ಆಕೆ ಯಾವಾಗಲೂ ನನ್ನನ್ನ ಇಷ್ಟ ಪಡುವಂತೆ ಇರಬೇಕು. ನಮ್ಮ ಹುಡುಗಿ ಯಾವಾಗಲೂ ನನ್ನ ಇಷ್ಟಪಟ್ಟರೇನೇ ಚೆನ್ನ ಎಂದು ಅನಿಸಿತು. ಈಗ ಎಲ್ಲ ನಾರ್ಮಲ್ ಆಗಿದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ನನ್ನ ಮದುವೆ ಫಿಕ್ಸ್ ಆಗುತ್ತೆ. ಈ ವರ್ಷದ ಅಕ್ಟೋಬರ್ ಒಳಗಡೆ ಮದುವೆ ಆಗುತ್ತೇನೆ. ನಾನು ಮದುವೆಯಾಗುವ ಹುಡುಗಿ ಯಾರು ಅಂತ ನನಗೂ ಇನ್ನೂ ಗೊತ್ತಿಲ್ಲ ಎಂದು ಗುಟ್ಟು ಕಾಯ್ದುಕೊಂಡಿದ್ದಾರೆ.












Click it and Unblock the Notifications