Boys VS Girls: ಹನುಮಂತ, ಭವ್ಯ ಗೌಡ, ರಜತ್‌ಗೆ ಖುಲಾಯಿಸಿದ ಅದೃಷ್ಟ

ಬಿಗ್ ಬಾಸ್ ಕನ್ನಡ ಸೀಸನ್​ 11 ರಿಯಾಲಿಟಿ ಶೋ ಮುಗಿದ ಬಳಿಕ ಮನೋರಂಜನೆಗೆ ಮುಂದೇನು ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ವಧು ಹಾಗೂ ಯಜಮಾನ ಎರಡು ಧಾರಾವಾಹಿಗಳು ಆರಂಭವಾಗಲಿದೆ. ಜೊತೆಗೆ ಎರಡು ಶೋಗಳು ಕೂಡ ಪ್ರಾರಂಭವಾಗಲಿದ್ದು, ಮಜಾ ಟಾಕೀಸ್‌ ಮತ್ತೆ ಆರಂಭವಾಗಲಿದೆ. ಇದರ ಜೊತೆಗೆ ಹೊಸ ಕಾರ್ಯಕ್ರಮ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮ ಆರಂಭವಾಗಲಿದೆ.

ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದ ಅಂತಿಮ ಸಿದ್ಧತೆಗಳಾಗಿದ್ದು, ಅನುಪಮಾ ಗೌಡ ನಿರೂಪಣೆಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ಬಿಗ್‌ ಬಾಸ್‌ ಮನೆಯಲ್ಲೇ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದ ಪ್ರೋಮೋ ರಿಲೀಸ್‌ ಮಾಡಲಾಗಿತ್ತು. ಈ ಹೊಸ ಶೋಗೆ ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್‌ ಕೂಡ ಶುಭ ಹಾರೈಸಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಬಾಯ್ಸ್ Vs ಗರ್ಲ್ಸ್ ಕಾರ್ಯಕ್ರಮದ ಮತ್ತೊಂದು ಅಪ್ಡೇಟ್‌ ಸಿಕ್ಕಿದೆ.

Bigg Boss Kannada Launches Boys Vs Girls Reality Show On February 1

ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋ ಫೆಬ್ರವರಿ 1ರಿಂದ ಆರಂಭ ಆರಂಭವಾಗಲಿದ್ದು, ಈಗಾಗಲೇ ಕಾರ್ಯಕ್ರಮದಲ್ಲಿ ಯಾರ್ಯಾರು ಸ್ಪರ್ಧಿಗಳಾಗಿದ್ದಾರೆ ಎನ್ನುವ ವಿಚಾರ ಕೂಡ ಬಹಿರಂಗವಾಗಿದೆ. ಈ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್​ನ ಮಾಜಿ ಸ್ಪರ್ಧಿಗಳಾದ ಲಾಯರ್‌ ಜಗದೀಶ್‌, ವಿನಯ್ ಗೌಡ, ಮಂಜು ಪಾವಗಡ, ಧನರಾಜ್‌ ಆಚಾರ್ಯ ಸೇರಿದಂತೆ ಅನೇಕರು ಬಾಯ್ಸ್ ಟೀಂನಲ್ಲಿದ್ದರೆ, ಶುಭಾ ಪೂಂಜಾ, ಐಶ್ವರ್ಯಾ, ಶೋಭಾ ಶೆಟ್ಟಿ, ರಮ್ಯಾ, ಸ್ಪಂದನಾ ಮೊದಲಾದವರು ಗರ್ಲ್ಸ್​ ತಂಡದಲ್ಲಿದ್ದಾರೆ. ಇದೀಗ ಮತ್ತೆ ಮೂರು ಜನ ಈ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದ್ದಾರೆ.

ಹೌದು ಬಿಗ್ ಬಾಸ್ ಕನ್ನಡ ಸೀಸನ್​ 11 ರ ಫಿನಾಲೆ ಸ್ಪರ್ಧಿಗಳಾದ ರಜತ್, ಹನುಮಂತ ಹಾಗೂ ಭವ್ಯ ಗೌಡ ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋನ ಸ್ಪರ್ಧಿಗಳಾಗಿದ್ದಾರೆ. ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್‌ ಮನೆಯೊಳಗೆ ಬಂದಿರುವ ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋ ತಂಡ ಈ ಮೂವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+