Varthur Santhosh Marriage: 2ನೇ ಮದುವೆ ಬಗ್ಗೆ ವರ್ತೂರು ಸಂತೋಷ್‌ ಕನ್ಫರ್ಮ್‌, ಹುಡುಗಿ ಯಾರು?

ಬಿಗ್‌ಬಾಸ್‌ ಖ್ಯಾತಿಯ ವರ್ತೂರು ಸಂತೋಷ್‌ ಅವರು ಕೊನೆಗೂ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಅವರ ಅಭಿಮಾನಿಗಳ ಬಹುದಿನಗಳ ಪ್ರಶ್ನೆಗೆ ವರ್ತೂರು ಸಂತೋಷ್‌ ಉತ್ತರ ನೀಡಿದ್ದಾರೆ. ಹಳ್ಳಿಕಾರ್ ಒಡೆಯ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದ ಅವರು ಬಳಿಕ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ತಮ್ಮ ಡೈಲಾಗ್‌ಗಳಿಂದಲೇ ಜನರ ಮನಗೆದ್ದಿರುವ ಅವರು ಕೊನೆಗೂ ಶುಭಸುದ್ದಿ ನೀಡಿದ್ದಾರೆ. ಹಳ್ಳಿಕಾರ್‌ ಒಡೆಯ ಹಸೆಮಣೆ ಏರಲು ಸಜ್ಜಾಗಿದ್ದು, ಈ ಬಗ್ಗೆ ಅವರು ಖುದ್ದಾಗಿ ಮದುವೆ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ವರ್ತೂರು ಸಂತೋಷ್‌ ಅವರು ತಮ್ಮ ಮದುವೆ ವಿಚಾರವನ್ನು ಖಚಿತಪಡಿಸಿದ್ದಾರೆ. ಅವರ ಸ್ನೇಹಿತರೊಬ್ಬರು ವರ್ತೂರು ಸಂತೋಷ್‌ ಅವರು ಇದೇ ವರ್ಷ ಮದುವೆಯಾಗುತ್ತಿದ್ದಾರೆ, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಮದುವೆ ವಿಚಾರ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂತೋಷ್‌ ಅವರು ಹೌದು ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Bigg Boss Kannada Fame Varthur Santhosh Announces Second Marriage

ಮದುವೆ ವಿಚಾರದ ಬೆನ್ನಲ್ಲೇ ಸಂತೋಷ್‌ ಅವರ ಮನದರಸಿ ಯಾರು? ಅವರೊಂದಿಗೆ ಮದುವೆಯಾಗುತ್ತಿರುವ ಹುಡುಗಿ ಯಾರು ಎಂದು ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಸಂತೋಷ್‌ ಅವರು ಮದುವೆ ವಿಚಾರವನ್ನಷ್ಟೇ ಹೇಳಿಕೊಂಡಿದ್ದು, ತಮ್ಮ ಭಾವಿ ಪತ್ನಿ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಒಟ್ಟಾರೆ ಈ ವರ್ಷವೇ ಸಂತೋಷ್‌ ಅವರು ಹಸೆಮಣೆ ಏರುವುದು ಫಿಕ್ಸ್‌ ಆಗಿದೆ.

ಹುಡುಗಿ ತನಿಷಾನಾ ಎಂದ ಫ್ಯಾನ್ಯ್

ಹಳ್ಳಿಕಾರ್‌ ಒಡೆಯ ಎಂದು ಕರೆಸಿಕೊಂಡಿರುವ ವರ್ತೂರು ಸಂತೋಷ್‌ ಅವರು ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದರು. ಬಳಿಕ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟ ನಂತರ ಅವರ ಕ್ರೇಜ್‌ ಇನ್ನೂ ಹೆಚ್ಚಾಗಿತ್ತು. ಅಲ್ಲಿಂದ ಬಂದ ನಂತರವೂ ಅವರು ಕೆಲವು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದವರು. ಬಿಗ್‌ಬಾಸ್‌ನಲ್ಲಿ ಸಹ ಸ್ಪರ್ಧಿಯಾಗಿದ್ದ ನಟಿ ತನಿಷಾ ಕುಪ್ಪಂಡ ಅವರೊಂದಿಗೆ ವರ್ತೂರು ಸಂತೋಷ್‌ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇದನ್ನು ಕಂಡು ಎಲ್ಲರೂ ಈ ಜೋಡಿ ಸೂಪರ್‌ ಎಂದು ಕಾಲೆಳೆದಿದ್ದರು. ಬಿಗ್‌ಬಾಸ್‌ ಬಳಿಕವೂ ಇವರ ಸ್ನೇಹ ಮುಂದುವರಿದಿದ್ದು, ಮದುವೆ ವಿಚಾರ ಬಂದಾಗಲೆಲ್ಲ ತನಿಷಾ ಹೆಸರು ಮುನ್ನೆಲೆಗೆ ಬರುತ್ತಲೇ ಇದೆ.

ಈಗಲೂ ಕೂಡ ವರ್ತೂರು ಸಂತೋಷ್‌ ಅವರ ಮದುವೆ ವಿಚಾರದಲ್ಲಿ ತನಿಷಾ ಅವರ ಹೆಸರು ತಳುಕು ಹಾಕಿಕೊಂಡಿದೆ. ಹುಡುಗಿ ಯಾರು ತನಿಷಾನಾ ಎಂದು ಸಂತೋಷ್‌ ಅವರಿಗೆ ಅಭಿಮಾನಿಗಳು ಕೇಳಿದ್ದಾರೆ. ಈ ಬಗ್ಗೆ ಹಲವು ಬಾರಿ ಸ್ಪಷ್ಟನೆ ನೀಡಿರುವ ಸಂತೋಷ್‌ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

Bigg Boss Kannada Fame Varthur Santhosh Announces Second Marriage

ವರ್ತೂರು ಸಂತೋಷ್‌ ಅವರಿಗೆ ಈಗಾಗಲೇ ಒಂದು ಮದುವೆಯಾಗಿ ಸಂಬಂಧ ಮುರಿದುಬಿದ್ದಿದೆ. ಈ ವಿಚಾರ ಅವರು ಬಿಗ್‌ಬಾಸ್‌ನಲ್ಲಿರುವಾಗಲೇ ವಿವಾದ ಹುಟ್ಟಿಸಿತ್ತು. ಈ ಬಗ್ಗೆ ಸಂತೋಷ್‌ ಅವರೂ ಸ್ಪಷ್ಟನೆ ನೀಡಿದ್ದರು. ಆ ಕಹಿ ಘಟನೆ ಮರೆತು ಇದೀಗ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ. ಅವರ ಹುಡುಗಿ ಯಾರು ಎಂದು ಹೆಸರನ್ನು ಸಹ ಸಂತೋಷ್‌ ಅವರು ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಈ ವರ್ಷ ಮದುವೆ ಊಟ ಹಾಕಿಸುವುದಂತೂ ಗ್ಯಾರಂಟಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+