Tanisha Kuppanda: ಕೊನೆಗೂ ನಾನು ನಿನ್ನ ಪ್ರೀತಿಸುವೆ ಎಂದ ತನಿಷಾ ಕುಪ್ಪಂಡ
ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ (Tanisha Kuppanda) ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ತನಿಷಾ ಈಗ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಸಹ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರೊಂದಿಗೆ ತನಿಷಾ ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರಿಂದ ಇವರಿಬ್ಬರ ನಡುವೆ ಲವ್ ಇದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಬಳಿಕ ಇವರಿಬ್ಬರೂ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಲವ್ ವದಂತಿಗೆ ಬ್ರೇಕ್ ಹಾಕಿದ್ದರು. ಈಗ ತನಿಷಾ ಅವರು ಸ್ಪೆಷಲ್ ವಿಡಿಯೋ ಹಂಚಿಕೊಂಡು ನಾನು ನಿನ್ನ ಪ್ರೀತಿಸುವೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಹೌದು ಇನ್‌ಸ್ಟಾಗ್ರಾಂನಲ್ಲಿ ರೀಲ್ ಹಂಚಿಕೊಂಡಿರುವ ತನಿಷಾ ಅವರು "ನನ್ನ ತರ ಹುಡುಗಿ ಸಿಗೋಗೆ ಪುಣ್ಯ ಮಾಡಿರಬೇಕು" ಎಂದಿದ್ದಾರೆ. ಯಾಕೆ ಅಂದ್ರೆ ಕೋಪಿಸಿದರೂ, ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆ ಎನ್ನುವ ಹಾಡಿಗೆ ಧ್ವನಿಗೂಡಿಸಿ ಹಾರ್ಟ್ ಸಿಂಬಲ್ ತೋರಿಸಿದ್ದಾರೆ ನಟಿ. ರಮೇಶ್ ಅರವಿಂದ್ ನಟನೆಯ ಶ್ರೀಗಂಧ ಸಿನಿಮಾದ ಕಾಯಿಸುವ ಹುಡುಗಿಯರ ಪ್ರೀತಿಸಬಾರದು ಹಾಡಿಗೆ ತನಿಷಾ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಕೋಪಿಸಿದರೂ, ನಿಂದಿಸಿದರೂ ನಾನು ನಿನ್ನ ಪ್ರೀತಿಸುವೆ ಹಾಡಿಗೆ ತನಿಷಾ ಲಿಪ್ ಸಿಂಕ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಈ ಸಾಲುಗಳನ್ನು ಹೇಳಿದ್ದು ವರ್ತೂರು ಸಂತೋಷ್ ಅವರಿಗಾ? ಎಂದು ಕಾಲೆಳೆದಿದ್ದಾರೆ. ಅಲ್ಲದೆ ತನಿಷಾ ಅವರು ಈ ವಿಡಿಯೋ ಮೂಲಕ ತಮ್ಮ ಲವ್ ಪ್ರಪೋಸ್ ಮಾಡಿದ್ರಾ? ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು ಎಂದು ಹೇಳುವ ಮೂಲಕ ತನಿಷಾ ಕುತೂಹಲ ಮೂಡಿಸಿದ್ದಾರೆ. ಈ ರೀಲ್ಸ್ ಜೊತೆಗೆ ತನಿಷಾ "ಹೀಗೆ, ನನ್ನನ್ನ ಪ್ರೀತಿ ಮಾಡೋರು ಕೇಳಿದ್ರು ಅಂತ ನಾನು ತುಂಬಾ ಪ್ರೀತಿಯಿಂದ ಈ ರೀಲ್ ಮಾಡಿದೀನಿ, ಏನಂತೀರ? ಹ್ಯಾಪಿ ಇಂಟರ್ನ್ಯಾಷನಲ್ ವುಮೆನ್ಸ್ ಡೇ ಎಂದು ವಿಶ್ ಕೂಡ ಮಾಡಿದ್ದಾರೆ.
ವಿಡಿಯೋದಲ್ಲಿ ನಾನು ನಿನ್ನ ಪ್ರೀತಿಸುವೆ, ನನ್ನ ತರ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು ಹಾಗೂ ಕೈಯಲ್ಲಿ ಹಾರ್ಟ್ ಸಿಂಬಲ್ ತೋರಿಸುವುದು ಯಾರಿಗೋ ಪ್ರಪೋಸ್ ಮಾಡುವಂತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಬಿಗ್‌ಬಾಸ್ ಬಳಿಕ ತನಿಷಾ ಕುಪ್ಪಂಡ ಉದ್ಯಮಿಯಾಗಿ ಸಕ್ಸಸ್ ಕಾಣುತ್ತಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ನಟನೆ ಹಾಗೂ ನಿರ್ಮಾಣಕ್ಕೂ ಕೈಹಾಕಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುವ ಆಫರ್ ಗಿಟ್ಟಿಸಿಕೊಂಡಿದ್ದಾರೆ.

ನಟ ಕೋಮಲ್ ಅವರ ಕೋಣ ಚಿತ್ರದಲ್ಲೂ ತನಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತನಿಷಾ ಕುಪ್ಪಂಡ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್, ನಮ್ರತಾ ಗೌಡ, ಶಿಶಿರ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.
ಈ ಹಿಂದೆ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ನಡುವೆ ಲವ್‌ಸ್ಟೋರಿ ನಡೆಯುತ್ತಿದೆ ಎಂದು ಗಾಸಿಪ್ ಇತ್ತು. ಆದರೆ ಇದನ್ನು ಇಬ್ಬರೂ ಎಲ್ಲಿಯೂ ಮಾತನಾಡಿರಲಿಲ್ಲ. ಸಂದರ್ಶನವೊಂದರಲ್ಲಿ ತನಿಷಾ ಅವರು ಸಂತೋಷ್ ಅವರಿಗೆ ಫೋನ್ ಮಾಡಿ ಲವ್ ಪ್ರಪೋಸ್ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಅವರು ಅದರಲ್ಲಿ ತಪ್ಪೇನಿದೆ? ಸ್ನೇಹಿತರು ಲವ್ ಯೂ ಹೇಳುವದರಲ್ಲಿ ತಪ್ಪಿಲ್ಲ. ನಾವಿಬ್ಬರೂ ಸ್ನೇಹಿತರು ಎಂದು ವರ್ತೂರು ಫೋನ್ ಕರೆಯಲ್ಲಿ ಎಲ್ಲರ ಮುಂದೆ ಹೇಳಿದ್ದರು.












Click it and Unblock the Notifications