Bigg Boss: ಶಾಕ್‌ ಮೇಲೆ ಶಾಕ್‌: ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಫೋಟೋ ಲೀಕ್‌

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ರ ಸಿದ್ಧತೆಗಳು ಜೋರಾಗಿದೆ. ಲಕ್ಷಾಂತರ ಪ್ರೇಕ್ಷಕರ ಮೆಚ್ಚಿನ ಶೋಗೆ ಕೌಂಟ್‌ಡೌನ್‌ ಶುರುವಾಗಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ಸ್ವರ್ಗ ನರಕ ಪರಿಕಲ್ಪನೆಯ ಪ್ರೋಮೋ ಸಖತ್‌ ವೈರಲ್‌ ಆಗುತ್ತಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.

Bigg Boss Kannada Contestants Photos Leaked In Social Media

ಪ್ರೋಮೋ ವೈರಲ್‌ ಬಳಿಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮೇಲೆ ಪ್ರೇಕ್ಷಕರಿಗೂ ಕೂಡ ಅತಿಯಾದ ನಿರೀಕ್ಷೆ ಶುರುವಾಗಿದ್ದು, ಯಾರೆಲ್ಲ ಬಿಗ್‌ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನುವ ಕೌತುಕ ಹೆಚ್ಚಾಗಿದೆ. ಒಂದೆಡೆ ಸಂಭವನೀಯ ಸ್ಪರ್ಧಿಗಳ ಹೆಸರಿನ ಅನೇಕ ಪಟ್ಟಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದರೆ. ಇದೀಗ ಬಿಗ್‌ಬಾಸ್ ತಂಡವೇ ಪ್ರೇಕ್ಷಕರಿಗೆ ಶಾಕ್‌ ಕೊಟ್ಟಿದ್ದು, ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳ ಫೋಟೋ ಲೀಕ್‌ ಮಾಡಲಾಗಿದೆ.

ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಹೊಸ ಪ್ರೋಮೋಗಳನ್ನು ತಂಡ ಬಿಡುಗಡೆ ಮಾಡುತ್ತಿದೆ. ಇದೀಗ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಕೆಲವು ಸ್ಪರ್ಧಿಗಳ ಫೋಟೋಗಳನ್ನು ಕೆಂಪು ಬಣ್ಣದಿಂದ ಬ್ಲರ್‌ ಮಾಡಿ ತೋರಿಸಲಾಗಿದೆ. ಈ ಫೋಟೋಗಳನ್ನೇ ಸೇರಿಸಿ ಸಿನಿ ಸಂಚಿಕೆ ಎನ್ನುವ ಎಕ್ಸ್‌ ಖಾತೆಯಲ್ಲಿ ಬಿಗ್‌ ಬಾಸ್ ಸ್ಪರ್ಧಿಗಳ ಫೋಟೋ ಎಂದು ಹಂಚಿಕೊಳ್ಳಲಾಗಿದೆ.

ಈ ಫೋಟೋ ಈಗ ವೈರಲ್‌ ಆಗುತ್ತಿದ್ದು, ನೋಡುಗರ ತಲೆಗೆ ಹುಳಬಿಟ್ಟಂತೆ ಆಗಿದೆ. ಈ ಫೋಟೋದಲ್ಲಿ ಇರುವವರು ಯಾರು ಎಂದು ಗೆಸ್‌ ಮಾಡಲು ನೆಟ್ಟಿಗರು ಹರಸಾಹಸ ಪಡುವಂತಾಗಿದೆ.

ಇತ್ತ ಬಿಗ್‌ ಬಾಸ್ ಕನ್ನಡ ಸೀಸನ್ 11 ತಂಡ ಈ ಬಾರಿ ನೋಡುಗರಿಗೆ ದೊಡ್ಡ ಸರ್‌ಪ್ರೈಸ್ ನೀಡಲು ಸಜ್ಜಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಯಕ್ರಮ ಆರಂಭಕ್ಕೂ ಮೊದಲೇ 5 ಜನ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ. ರಾಜಾ ರಾಣಿ ರೀಲೋಡೆಡ್‌ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್ ಕನ್ನಡ ಸೀಸನ್ 11ಕ್ಕೆ ಆಯ್ಕೆಯಾದ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಇವರು ಬಿಗ್‌ ಬಾಸ್‌ ಮನೆ ಪ್ರವೇಶಿಸಬೇಕೋ? ಬೇಡವೋ? ಎಂಬ ಆಯ್ಕೆಯೂ ಈ ವೇದಿಕೆಯಲ್ಲೇ ಬಹಿರಂಗವಾಗಿ ನಡೆಯಲಿದೆ.

ನೆರೆದಿರುವ ಜನರ ಮೂಲಕ ಯಾರಿಗೆ ಹೆಚ್ಚು ವೋಟ್‌ಗಳು ಬೀಳುತ್ತವೋ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಕಡಿಮೆ ವೋಟ್‌ ಪಡೆದವರು ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆ. ಅಂದು ಐದು ಸ್ಪರ್ಧಿಗಳ ಹೆಸರು ಘೋಷಣೆ ಆಗಲಿದ್ದು, ಉಳಿದ ಸ್ಪರ್ಧಿಗಳ ಹೆಸರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ದಿನ ತಿಳಿದು ಬರಲಿದೆ ಎಂದು ಬಿಗ್‌ಬಾಸ್ ತಂಡ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+