ಸದ್ದಿಲ್ಲದೇ ಎಂಗೇಜ್ ಆದ ಬಿಗ್ ಬಾಸ್ ರಂಜಿತ್: ಹುಡುಗಿ ಯಾರು?
ಕನ್ನಡ ಕಿರುತೆರೆ ನಟ ಹಾಗೂ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಿಗ್ಬಾಸ್ ಸೀಸನ್ 11ರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ರಂಜಿತ್ ಇದೀಗ ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್ ಆಗಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.
ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಹಾಗೂ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟವ್ ಆಗಿರುವ ಮಾನಸ ಗೌಡ, ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.

ಸದ್ಯ ರಂಜಿತ್ ಹಾಗೂ ಮಾನಸ ಗೌಡ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ದಿಢೀರ್ ಸರ್ಪ್ರೈಸ್ ಕೊಟ್ಟಿರುವ ರಂಜಿತ್ ಜೋಡಿಗೆ ಸೆಲೆಬ್ರೆಟಿಗಳಿಂದ, ಅಭಿಮಾನಿಗಳಿಂದ ಸೇರಿದಂತೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ರಂಜಿತ್ ಹಾಗೂ ಮಾನಸ ಗೌಡ ನಿಶ್ಚಿತಾರ್ಥದಲ್ಲಿ ನಟ ಶಿಶಿರ್ ಸೇರಿದಂತೆ ಬಿಗ್ಬಾಸ್ ಸೀಸನ್ 11ರ ಕೆಲ ಸ್ಪರ್ಧಿಗಳು, ಧಾರಾವಾಹಿ ನಟ-ನಟಿಯರು ಹಾಗೂ ಕೆಲವೇ ಆಪ್ತರಷ್ಟೇ ಭಾಗಿಯಾಗಿದ್ದಾರೆ.
ಬಿಗ್ಬಾಸ್ ಸೀಸನ್ 11ಕ್ಕೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಂಜಿತ್ ದೊಡ್ಮನೆಗೆ ಬಂದ ಮೊದಲ ದಿನವೇ ಟಾಪ್ ಐದರ ಸ್ಪರ್ಧಿ ಎಂದು ಎಲ್ಲರೂ ನಿರ್ಧರಿಸಿದ್ದರು. ಆದರೆ ಲಾಯರ್ ಜಗದೀಶ್ ಮೇಲೆ ತಳ್ಳಾಟ ನೂಕಾಟ ಮಾಡಿದ ಕಾರಣ ಏಕಾಏಕಿ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಇದರಿಂದ ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದ್ದು, ಫಿನಾಲೆಯಲ್ಲಿ ರಂಜಿತ್, ತ್ರಿವಿಕ್ರಮ್‌ಗಾಗಿ ಮಾಡಿದ ಡಾನ್ಸ್ ನೋಡಿ ಖುಷಿಪಟ್ಟಿದ್ದರು.

ಇನ್ನು ಈ ಹಿಂದೆ ಈವರೆಗೂ ಯಾಕೆ ಮದುವೆಯಾಗಿಲ್ಲ ಎನ್ನುವುದರ ಬಗ್ಗೆ ಈ ಹಿಂದೆ ಮಾತನಾಡಿದ್ದ ರಂಜಿತ್, ಇಷ್ಟು ವರ್ಷ ಆದರೂ ನಾನ್ಯಾಕೆ ಮದುವೆ ಆಗಿಲ್ಲ ಅಂದರೆ ಬರುವ ಹುಡುಗಿಯಲ್ಲಿ ನನ್ನ ತಾಯಿ ಗುಣಗಳನ್ನು ಹುಡುಕುತ್ತಿದ್ದೇನೆ. ಆದರೆ ಅದು ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾನಿನ್ನೂ ಮದುವೆಯಾಗಿಲ್ಲ. ಆ ಜಾಗ ತುಂಬಲು ಬರುವವರಿಂದಲೇ ಸಾಧ್ಯ. ನನ್ನ ತಾಯಾಗಿ, ನನ್ನ ಹೆಂಡತಿಯಾಗಿ ಪ್ರತಿಯೊಂದು ಸಂಬಂಧವನ್ನು ತುಂಬಿ ಬರಬೇಕು. ಈ ಮನೆಗೆ ಯಾರೇ ಬಂದರೂ ಊಟ ಕೊಡದೇ, ನೀರು ಕೊಡದೇ ನನ್ನ ಅಮ್ಮ ಕಳುಹಿಸುತ್ತಿರಲಿಲ್ಲ. ಹೀಗಾಗಿ ಅವಳಲ್ಲೂ ಇದೇ ಗುಣ ಇರಬೇಕು. ಅದೇ ಗುಣಗಳನ್ನು ಹುಡುಕುತ್ತಿದ್ದೇನೆ ಎಂದಿದ್ದರು.












Click it and Unblock the Notifications