Anusha Rai: ಸೈಕ್ ತರ ಆಡ್ತಿದ್ದ ಬಿಟ್ಟುಬಿಟ್ಟೆ: ಬಿಗ್ ಬಾಸ್ ಅನುಷಾ ರೈ ಬ್ರೇಕಪ್ ಸ್ಟೋರಿ
ಬಿಗ್ ಬಾಸ್ ಕನ್ನಡ ಸೀಸನ್‌ರ 50ನೇ ದಿನ ಬಿಗ್ ಬಾಸ್ ಮನೆಯಿಂದ ನಟಿ ಅನುಷಾ ರೈ ಹೊರಬಿದ್ದಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ತಮ್ಮ ಮೊದಲ ಪ್ರೀತಿ ಹಾಗೂ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.
ಮಿಸ್ಟರ್ ಡಿ.ಪಿಕ್ಚರ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ದೇವರಾಣೆ ನನಗೆ ಕ್ರಶ್ ಎನ್ನುವುದು ಆಗಿಲ್ಲ. ನನಗೆ ಯಾರನ್ನ ನೋಡಿ ಸಹ ಕ್ರಶ್ ಅಂತಾ ಅನಿಸಿಲ್ಲ. ಕ್ರಶ್ ಅಂತೆಲ್ಲಾ ಆ ರೀತಿ ಎಲ್ಲಾ ಗೊತ್ತಾಗುತ್ತಿರಲಿಲ್ಲ. ಆ ರೀತಿ ಭಾವನೆಗಳೆಲ್ಲಾ ಇರಲಿಲ್ಲ. ಆದರೆ ಓದು ಮುಗಿಲು ಇನ್ನೂ ಒಂದು ವರ್ಷ ಇದ್ದಾಗ ಒಬ್ಬ ಇಷ್ಟ ಆದ' ಎಂದು ನಟಿ ಅನುಷಾ ರೈ ತಮ್ಮ ಮೊದಲ ಕ್ರಶ್ ಹಾಗೂ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

'ಮೊದಲೆಲ್ಲಾ ತುಂಬಾ ಲವ್ ಪ್ರಪೋಸ್ ಬರುತ್ತಿತ್ತು. ಆದರೆ ಈಗ ಯಾರೂ ಮಾಡುತ್ತಿಲ್ಲ. ಈಗ ಲವ್ ಮಾಡಬೇಕು ಅನಿಸುತ್ತಿದೆ. ಆದರೆ ಈಗ ಯಾರೂ ಪ್ರಪೋಸ್ ಮಾಡುತ್ತಿಲ್ಲ. ಆದರೆ ಕಾಲೇಜಿನಲ್ಲಿದ್ದಾಗ ತುಂಬಾ ಲವ್ ಪ್ರಪೋಸ್‌ಗಳು ಬರುತ್ತಿದ್ದವು. ಅದು ಅಸಲಿನೋ ನಕಲಿನೋ ನನಗಂತೂ ಗೊತ್ತಿಲ್ಲ. ತುಂಬಾ ಪ್ರಪೋಸ್‌ಗಳು ಬರುತ್ತಿದ್ದವು' ಎಂದರು.
'ಸೀನಿಯರ್‌ಗಳಿಂದ ಬೇರೆ ಡಿಪಾರ್ಟ್‌ಮೆಂಟ್‌ಗಳಿಂದ, ಜೊತೆಗೆ ನಮ್ಮ ಕ್ಲಾಸ್‌ನಲ್ಲಿ ತಿರುಗಿ ನೋಡುವುದು ಹೀಗೆಲ್ಲಾ ಇರುತ್ತಿತ್ತು. ಆದರೆ ಯಾರೂ ಮಾತನಾಡಿಸುತ್ತಿರಲಿಲ್ಲ. ನಾನು ಅಷ್ಟೇ ನನ್ನ ಫ್ರೆಂಡ್ಸ್ ಗ್ಯಾಂಗ್ ಇತ್ತು ಅವರ ಜೊತೆಗೆ ಇರುತ್ತಿದೆ. ಕ್ಲಾಸ್ ಅಲ್ಲಿ ಬರೆಯುತ್ತಿದ್ದಾಗ ಯಾರೋ ಒಬ್ಬ ನನ್ನನ್ನೇ ನೋಡುತ್ತಿದ್ದ. ನಾನು ಕುತೂಹಲಕ್ಕೆ ನೋಡುತ್ತಿದೆ. ಅಷ್ಟೇ ಬಿಟ್ಟರೆ ಲವ್ ಮಾಡಬೇಕು ಎನ್ನುವ ಐಡಿಯಾ ಇರಲಿಲ್ಲ' ಎಂದು ಹೇಳಿದರು.

'ಆಮೇಲೆ ಒಬ್ಬ ಪ್ರಪೋಸ್ ಮಾಡಿದ, ಅವನು ಊಹಿಸೋಕು ಆಗದೇ ಇರುವ ತರ ಟಾರ್ಚರ್. ಅವನು ಸತ್ತು ಹೋಗುತ್ತೇನೆ ಅದು ಇದು ಅಂದಾಗ ನೋಡೋಣ ಅಂತಾ ಒಪ್ಪಿಕೊಂಡೆ. ಆಮೇಲೆ ಅವನು ಟಾರ್ಚರ್ ಶುರುವಾಯ್ತು. ನೀನು ಹಾಗೆ ಇರಬೇಡ, ಹೀಗೆ ಇರಬೇಡ, ವಾಟ್ಸಪ್ ಬಳಸಬೇಡ, ಏನೇನೋ ಹೇಳುತ್ತಿದ್ದ. ಹುಡುಗರ ಜೊತೆ ಎಲ್ಲಾ ಮಾತಡಬೇಡ ಅಂತಿದ್ದ. ಯಾಕೆ ಅವರ ಜೊತೆ ಇರುತ್ತೀಯಾ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದ. ನಾನು ಫ್ರೆಂಡ್ಸ್ ಜೊತೆ ಇರುವುದನ್ನೇ ಅವನು ಕೆಟ್ಟ ರೀತಿಯಲ್ಲಿ ಯೋಚನೆ ಮಾಡಿ ಜಗಳ ಮಾಡದ ಅದಕ್ಕೆ ಬಿಟ್ಟೆ. ನಿನ್ನ ಸಹವಾಸ ಬೇಡ. ಲವ್ ಬೇಡ ಏನೂ ಬೇಡ ಅಂತಾ ಬಿಟ್ಟೆ' ಎಂದು ಅನುಷಾ ರೈ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.












Click it and Unblock the Notifications