Bigg Boss Kannada 12: ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಪ್ರೋಮೋದಲ್ಲಿ ಸುಳಿವು, ಯಾರೆಲ್ಲ ಇರ್ತಾರೆ?
ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಕಲರ್ಸ್ ವಾಹಿನಿಯು ಬಿಗ್‌ಬಾಸ್ ಕನ್ನಡ ಸೀಸನ್-12ರ (Bigg Boss Kannada Season 12) ಗ್ರ್ಯಾಂಡ್ ಓಪನಿಂಗ್ ದಿನಾಂಕವನ್ನ ಘೋಷಣೆ ಮಾಡಿದೆ. ಸುದೀಪ್ ಅವರನ್ನು ಪರಿಚಯಿಸುವ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಇದೇ ಸೆಪ್ಟೆಂಬರ್ 28ರಿಂದ ಬಿಗ್‌ಬಾಸ್ ಸೀಸನ್ ಶುರುವಾಗಲಿದೆ ಎಂದು ಅನೌನ್ಸ್ ಮಾಡಿದೆ. ಈ ಬಾರಿ ಕಿಚ್ಚನ ಹೇರ್‌ಸ್ಟೈಲ್ ಕೂಡ ಬದಲಾಗಿದ್ದು, ಪ್ರೋಮೋದಲ್ಲಿ ಮಿಂಚಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರೆಲ್ಲ ಸ್ಪರ್ಧಿಗಳು ಇರುತ್ತಾರೆ ಎಂಬ ಸುಳಿವು ಪ್ರೋಮೋದಲ್ಲಿದೆ.
ಬಿಗ್‌ಬಾಸ್ ಸೀಸನ್‌ಗೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ಸ್ಪರ್ಧಿಗಳು ಯಾರು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಈಗಾಗಲೇ ಸಂಭಾವ್ಯರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಇವರೇ ಬಿಗ್‌ಬಾಸ್ ಸ್ಪರ್ಧಿ ಎಂದು ಹಲವರ ಬಗ್ಗೆ ಭವಿಷ್ಯ ನುಡಿಯಲಾಗುತ್ತಿದೆ. ಬಿಗ್‌ಬಾಸ್ ಶುರುವಾಗುವ ದಿನವೇ ಅಧಿಕೃತವಾಗಿ ಸ್ಪರ್ಧಿಗಳು ಯಾರು ಎಂದು ಸರ್‌ಪ್ರೈಸ್ ಆಗಿ ಘೋಷಣೆ ಮಾಡಲಾಗುತ್ತಿದೆ. ಈ ಬಾರಿ ಪ್ರೋಮೋದಲ್ಲೇ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಅನ್ನೋ ಹಿಂಟ್ ಕೊಟ್ಟಿದೆ.

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳೇ ಹೆಚ್ಚಿನ ಮಂದಿ ಸ್ಪರ್ಧಿಗಳಾಗಿರುತ್ತಾರೆ. ಕಿರುತೆರೆ ಹಾಗೂ ಸಿನಿಮಾ ಮಂದಿ ಹೆಚ್ಚಾಗಿ ಬಿಗ್‌ಬಾಸ್‌ನಲ್ಲಿರುತ್ತಾರೆ. ಇದಲ್ಲದೆ ಬೇರೆ ಕ್ಷೇತ್ರಗಳಿಂದಲೂ ಒಬ್ಬೊಬ್ಬರು ವಿಶೇಷ ಸ್ಪರ್ಧಿಗಳನ್ನ ಒಂದುಗೂಡಿಸಿ, ಬಿಗ್‌ಬಾಸ್ ಮನೆಗೆ ಕಳಿಸುತ್ತಾರೆ. ಈ ಬಾರಿ ಪ್ರೋಮೋದಲ್ಲಿ ಸ್ಪರ್ಧಿಗಳ ಹೆಸರನ್ನು ನೇರವಾಗಿ ಘೋಷಣೆ ಮಾಡದಿದ್ದರೂ, ಯಾವ ಯಾವ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ಸುಳಿವು ನೀಡಿದೆ.
'ಕಂಟೆಸ್ಟೆಂಟ್ಸ್ ರೆಡಿ, ನಾನೂ ರೆಡಿ'
ಪ್ರೋಮೋದಲ್ಲಿ, "ಒಬ್ಬರಿಗೆ ನ್ಯೂಸ್ ಅಂದ್ರೆ ಇಷ್ಟ, ಇನ್ನೊಬ್ಬರಿಗೆ ಕ್ರೀಡೆ ಅಂದ್ರೆ ಇಷ್ಟ. ಒಬ್ಬರಿಗೆ ಸಿನಿಮಾ ಇಷ್ಟವಾದ್ರೆ, ಇನ್ನೊಬ್ಬರಿಗೆ ರೀಲ್ಸ್, ಸಾಂಗ್ಸ್, ಡ್ಯಾನ್ಸ್, ಸೀರಿಯಲ್ಸ್. ಇಷ್ಟೆಲ್ಲ ವೆರೈಟಿ ಇರೋ ನಾಡನ್ನ ಒಂದು ಮಾಡೋಕೆ ಸಾಧ್ಯ ಇರೋದು ಆ ಒಂದು ಶಕ್ತಿಗೆ ಮಾತ್ರ ಎಂದು ಕಿಚ್ಚ ಸುದೀಪ್ ಅವರನ್ನು ಪರಿಚಯಿಸಿದೆ. ಹಾಗಾಗಿ ಈ ಬಾರಿ ಸುದ್ದಿ, ಕ್ರೀಡೆ, ಸಿನಿಮಾ, ರೀಲ್ಸ್ ಸ್ಟಾರ್‌ಗಳು, ಡ್ಯಾನ್ಸರ್, ಕಿರುತೆರೆ ಮಂದಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಹೊಸ ಸೆಟ್ ರೆಡಿ, ಹೊಸ ಕಂಟೆಸ್ಟೆಂಟ್ಸ್ ರೆಡಿ, ಏಳು ಕೋಟಿ ಕನ್ನಡಿಗರೂ ರೆಡಿ. ನೀವು ರೆಡಿನಾ?' ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ (Kiccha Sudeep) 'ನಾನೂ ರೆಡಿ..' ಎಂದಿರುವುದು ಪ್ರೋಮೋದಲ್ಲಿದೆ. ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನು ಎರಡೇ ವಾರದಲ್ಲಿ ಇದಕ್ಕೆ ಉತ್ತರ ಸಿಗಲಿದೆ. ಈ ಬಾರಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳೂ ಹೆಚ್ಚಾಗಿ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇದೆ.












Click it and Unblock the Notifications