Bigg Boss Kannada 13: ಕಿಚನ್ ಕೆಲಸದ ವಿಚಾರಕ್ಕೆ ಕಿತ್ತಾಟ: ಲಿಖಿತ್ ಕಿರಿಕ್‌ನಿಂದ ಮನೆಯವರಿಗೆಲ್ಲ ಉಪವಾಸ; ಸಂಗೀತಾ ಕೂಗಾಟ!

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿದೆ. ಬಿಗ್‌ಬಾಸ್‌ನಲ್ಲಿ ಸಾಮಾನ್ಯವಾಗಿ ಬಿಗ್‌ಬಾಸ್ ಕೊಡುವ ಟಾಸ್ಕ್‌ಗಳಿಂದ ರೇಷನ್ ಕಡಿಮೆ ಆಗುವುದು ಇದೆ. ಆದರೆ ಈ ಬಾರಿ ಸ್ಪರ್ಧಿಗಳ ನಡುವೆ ಆಗುತ್ತಿರುವ ಕಿತ್ತಾಟದಿಂದ ಮನೆಯ ಇತರರು ಉಪವಾಸಕ್ಕೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ. ಅಗ್ನಿ ಪರೀಕ್ಷೆಯ ಮೂಲಕ ಕಾಮನ್ ಮ್ಯಾನ್ ಆಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಲಿಖಿತ್ ಗೋಂದಿ ಅವರು ಕಿಚನ್ ಕೆಲಸಗಳನ್ನು ಮಾಡಲ್ಲ, ನಾನು ಕಿಚನ್ ಕೆಲಸ ಮಾಡೋಕೆ ಬಿಗ್‌ಬಾಸ್‌ಗೆ ಬಂದಿಲ್ಲ ಅಂತ ಹೇಳಿದ್ದಾರೆ.

ನೆನ್ನೆ ರೆಸ್ಟೋರೆಂಟ್ ನಲ್ಲಿ ತಿಂದು ಬಿಟ್ಟು ಹೋದಂಗೆ ಪಾತ್ರೆಗಳೆಲ್ಲವೂ ಅಲ್ಲಿ ಟೇಬಲ್ ಮೇಲೆ ಬಿದ್ದಿದೆ ಅಂತ ಆಕ್ಷೇಪ ವ್ಯಕ್ತವಾಗಿದೆ. ಕಿಚನ್‌ದು ನೀವು ಪಾತ್ರೆಗಳನ್ನ ತೊಳೆದು ಕೊಟ್ಟರೆ ಅವರು ತಿಂಡಿ ಮಾಡ್ತಾರೆ ಅಂತ ಸಂಗೀತಾ ಭಟ್ ಅವರು ಲಿಖಿತ್‌ಗೆ ಹೇಳಿದ್ದಾರೆ. ಆದರೆ, ಇದಕ್ಕೆ ಲಿಖಿತ್ ತಿರುಗೇಟು ಕೊಟ್ಟಿದ್ದಾರೆ. ನಾನು ಏನೂ ಮುಟ್ಟೋದಿಲ್ಲ ಅಂತ ಲಿಖಿತ್ ಹೇಳಿದ್ದಾರೆ. ಇದು ಬಿಗ್‌ಬಾಸ್‌ನ ಸ್ಪರ್ಧಿಗಳ ಕೋಪಕ್ಕೆ ಕಾರಣವಾಗಿದೆ.

Bigg Boss Kannada 13 Kitchen Row Escalates Likhith Standoff Housemates Without Food Sangeetha Furious

ನಾನು ನಿಮಗೆ ಹೇಳ್ತಾ ಇದ್ದೀನಿ ನೀವು ಕ್ಲೀನ್ ಮಾಡಬೇಕು. ಇದು ನನ್ನ ಆಜ್ಞೆ ಅಂತಲೂ ಸಂಗೀತಾ ಅವರು ಹೇಳಿದ್ದಾರೆ. ನಾವೇನು ಕೆಲಸ ಮಾಡೋದಕ್ಕೆ ಬಂದಿದ್ದೀವಾ ಬಿಗ್‌ಬಾಸ್‌ಗೆ, ಪರ್ಸನಲ್‌ ಅಟ್ಯಾಕ್ ಮಾಡ್ತಾ ಇದ್ದಿರಲ್ಲ ಅಂತ ಲಿಖಿತ್ ಕೇಳಿದ್ದಾನೆ. ರೀಸನ್ ಕೊಡಬೇಕು ಅಂದ್ರೆ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು ಲಿಖಿತ್‌ ಗೋಂದಿ ಅವರಿಗೆ ಕೋಪದಿಂದಲೇ ಕಿರುಚಿಕೊಂಡು ಸಂಗೀತಾ ಹೇಳಿದ್ದಾರೆ. ಇದಕ್ಕೆ ಮತ್ತೆ ಇದು ಪರ್ಸನಲ್ ಅಟ್ಯಾಕ್ ಅಂತ ಲಿಖಿತ್ ಹೇಳಿದ್ದಾರೆ.

Bigg Boss Kannada 13: ಯಾರಿಗೂ ತಿಂಡಿ ಇಲ್ಲ ಎಂದ ಸಂಗೀತಾ

ಇಲ್ಲ, ನೀವು ಮಾಡಲ್ಲ ಅಂದ್ರೆ ಮನೆಯಲ್ಲಿ ಯಾರಿಗೂ ತಿಂಡಿ ಇಲ್ಲ ಅಷ್ಟೇ ಸಿಂಪಲ್ ಅಂತ ಸಂಗೀತಾ ಅವರು ಹೇಳಿದ್ದಾರೆ. ಸಂಗೀತಾ ಅವರ ಈ ನಿರ್ಧಾರಕ್ಕೆ ಮನೆಯ ಇತರ ಸ್ಪರ್ಧಿಗಳು ಗರಂ ಆಗಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಕೊಡಿ ಅಂತ ಉಳಿದ ಸ್ಪರ್ಧಿಗಳು ಹೇಳಿದ್ದಾರೆ.

ಆಟಗಳಲ್ಲ ಇಲ್ಲಿ ಹಸಿವು ಆಗುತ್ತಿರುತ್ತೆ ಅಂತ ತಾಂಡವ್ ರಾಮ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿರುವ ಗಗನ್ ಚಿನ್ನಪ್ಪ ಅವರು ಅಲ್ಲ ನೀವು ಒಬ್ಬರಿಗೆ ಶಿಕ್ಷೆ ಕೊಡಬೇಕು ಎಂದಿದ್ದಾರೆ. ನಾನು ಕ್ಲೀನ್ ಮಾಡುವ ವರೆಗೂ ಯಾರೂ ತಿನ್ನೋಂಗಿಲ್ಲ, ತಾಕತ್ತಿದ್ದರೆ ನಾನು ಮೂರು ದಿನ ಉಪವಾಸ ಇರ್ತೀನಿ ನೀವು ಇರಿ ಅಂತ ಲಿಖಿತ್ ಅವರು ಸಂಗೀತಾ ಅವರ ಮುಂದೆ ಚಾಲೆಂಜ್ ಮಾಡಿದ್ದಾರೆ.

Bigg Boss Kannada 13: ನೆಟ್ಟಿಗರು ಹೇಳಿದ್ದೇನು

ಇನ್ನು ಬಿಗ್‌ಬಾಸ್‌ನ ಹೊಸ ಪ್ರೋಮೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಿಖಿತ್ ಮತ್ತು ಮಂಜು ಅವರು ಬದಲಾಗಿಲ್ಲ. ಕಿಚ್ಚ ಸುದೀಪ್ ಅವರು ಅಷ್ಟು ಹೇಳಿದರೂ, ಕಾಮನ್ ಮ್ಯಾನ್‌ಗಳ ವರ್ತನೆ ಬದಲಾಗಿಲ್ಲ ಅಂತ ನೆಟ್ಟಿಗರು ಹೇಳಿದ್ದಾರೆ. ಅಗ್ನಿ ಪರೀಕ್ಷೆಯಿಂದ ಬಂದ ನಾಲ್ಕೂ ಜನನೂ ಕಿರಿಕ್ ಮಾಡ್ತಿದ್ದಾರೆ. ಬಿಗ್‌ಬಾಸ್‌ನ ಘನತೆಯೇ ಕಾಮನ್ ಮ್ಯಾನ್‌ಗಳ ವರ್ತನೆಯಿಂದ ಕುಸಿದಿದೆ ಎಂದೂ ಕೆಲವರು ವಾದಿಸಿದ್ದಾರೆ.

Maithili Thakur: ವರ್ಷದಲ್ಲಿ 13 ಕೋಟಿ ರೂ. ರೋಲ್ಸ್‌ ರಾಯ್ ಕಾರು ಖರೀದಿಸಿದ ಬಿಜೆಪಿ ಶಾಸಕಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+