Maithili Thakur: ವರ್ಷದಲ್ಲಿ 13 ಕೋಟಿ ರೂ. ರೋಲ್ಸ್‌ ರಾಯ್ ಕಾರು ಖರೀದಿಸಿದ ಬಿಜೆಪಿ ಶಾಸಕಿ: "ನಾವು ಚೆನ್ನಾಗಿರಬಾರದೇ' ಕಂಗನಾ

ಬಿಹಾರದ ಬಿಜೆಪಿ ಶಾಸಕಿಯಾದ ಕೆಲವೇ ತಿಂಗಳುಗಳಲ್ಲಿ ಮೈಥಿಲಿ ಠಾಕೂರ್ (Maithili Thakur) ರೋಲ್ಸ್‌ ರಾಯ್ ಕುಲ್ಲಿನಾನ್ ಕಾರು ಖರೀದಿ ಮಾಡಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಹಾರ ಶಾಸಕಿ ಮತ್ತು ಗಾಯಕಿ ಮೈಥಿಲಿ ಠಾಕೂರ್ ತಮ್ಮ ಐಷಾರಾಮಿ ರೋಲ್ಸ್‌ ರಾಯ್ ಕಾರಿನಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಚಾ ರಾಜ ಗಣಪತಿ ದರ್ಶನಕ್ಕೆ ಬಂದಿದ್ದರು. ಇದೇ ಮೊದಲ ಬಾರಿ ಮೈಥಿಲಿ ಅವರು ಶಾಸಕಿಯಾಗಿದ್ದಾರೆ.

ಅಲ್ಲದೆ ಶಾಸಕಿಯಾಗಿ ಒಂದು ವರ್ಷವೂ ಸಹ ಆಗಿಲ್ಲ. ಆದರೆ ಒಂದೇ ವರ್ಷದ ಒಳಗೆ 13 ಕೋಟಿ ರೂ. ಹೆಚ್ಚು ಮೌಲ್ಯದ ರೋಲ್ಸ್‌ ರಾಯ್ ಕಾರಿನಲ್ಲಿ ಓಡಾಡುವುದಕ್ಕೆ ಹೇಗೆ ಸಾಧ್ಯ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಮೈಥಿಲಿ ಠಾಕೂರ್ ಅವರನ್ನು ಪ್ರಶ್ನೆ ಮಾಡುತ್ತಿದ್ದಂತೆಯೇ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ಅವರು ಮೈಥಿಲಿ ಠಾಕೂರ್ ಅವರನ್ನು ಬೆಂಬಲಿಸಿದ್ದಾರೆ.

Maithili Thakur BJP MLA s 13 Crore Rolls-Royce Sparks Debate Kangana Ranaut Says Can t We Live Well

ಮೈಥಿಲಿ ಠಾಕೂರ್ ಸಾಂಪ್ರದಾಯಿಕ ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಗಾಯಕಿ, ಬಿಹಾರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ರಾಜಕಾರಣಿಯಾಗಿದ್ದಾರೆ. ಬಿಹಾರದ ಅಲಿನಗರ ವಿಧಾನಸಭಾ ಕ್ಷೇತ್ರದ ಶಾಸಕಿ (MLA) ಆಗಿದ್ದಾರೆ. ಬಿಹಾರದ ಅತ್ಯಂತ ಕಿರಿಯ ಶಾಸಕಿ ಎನ್ನುವ ಹೆಗ್ಗಳಿಕೆ ಇವರಿಗಿದೆ. ಆದರೆ, ಒಂದೇ ವರ್ಷದಲ್ಲಿ ಅವರು ಹಲವು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮೈಥಿಲಿ ಇತ್ತೀಚೆಗೆ ಮುಂಬೈನ ಲಾಲ್‌ಬೌಗ್ಚಾ ರಾಜಾ ಪೆಂಡಲ್‌ಗೆ ನೀಲಿ ಐಷಾರಾಮಿ ಎಸ್‌ಯುವಿಯಲ್ಲಿ ಆಗಮಿಸಿದ್ದರು. ಆದರೆ ರಾಜಕೀಯ ಪ್ರವೇಶಿಸಿದ ಕೂಡಲೇ ಅವರು ಇಷ್ಟು ದುಬಾರಿ ಕಾರನ್ನು ಹೇಗೆ ಖರೀದಿ ಮಾಡಲು ಸಾಧ್ಯವಾಯಿತು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

Maithili Thakur: ಮೈಥಿಲಿ ಠಾಕೂರ್ ಬೆಂಬಲಕ್ಕೆ ನಿಂತ ಕಂಗನಾ ರಣಾವತ್

ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಶುರುವಾದ ಬೆನ್ನಲ್ಲೇ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮೈಥಿಲಿ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳ ಮೂಲಕ ಟೀಕೆ ಮಾಡುವವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಜಕಾರಣಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಆರಾಮದಾಯಕ ಜೀವನಶೈಲಿಯನ್ನು ಏಕೆ ತ್ಯಜಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವರು ರಾಜಕಾರಣಿಗಳು ಉತ್ತಮ ಜೀವನ ನಡೆಸುವುದನ್ನು ನೋಡಿದಾಗಲೆಲ್ಲಾ ಉರಿದು ಬೀಳುತ್ತಾರೆ. ಈಗ ನಮ್ಮ ಯುವ ಶಾಸಕರು ಐಷಾರಾಮಿ ಕಾರು ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ. ನಾವು ಸಮಾಜ ಸೇವೆಗೆ ಒಲವು ತೋರಬಹುದು ಆದರೆ ನಮಗೆ ನಮ್ಮದೇ ಆದ ವೃತ್ತಿ, ಜೀವನ ಮತ್ತು ಜನಪ್ರಿಯತೆಯೂ ಇದೆ.

ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ ಆದರೆ ಕೆಲವರು ನಾವು ಚೆನ್ನಾಗಿ ಬದುಕುವುದನ್ನು ನೋಡಿದರೆ ತುಂಬಾ ನೋವುಪಡುತ್ತಾರೆ, ಏಕೆ? ನಾವು ಸಹ ಚೆನ್ನಾಗಿ ಬದುಕಲು ಸಾಧ್ಯವಿಲ್ಲವೇ, ನಮಗೆ ಸಾರ್ವಜನಿಕ ಹಣದಲ್ಲಿ ಆಸಕ್ತಿ ಇಲ್ಲ ಆದರೆ ನಾವು ಬಡವರಾಗಿಯೇ ಉಳಿಯಬೇಕೆಂದು ನಿರೀಕ್ಷಿಸುವುದು ತುಂಬಾ ವಿಚಿತ್ರವಾಗಿದೆ ಅಂತ ಕಂಗನಾ ರಣಾವತ್ ಹೇಳಿದ್ದಾರೆ.

2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆರ್‌ಜೆಡಿ ನಾಯಕ ಬಿನೋದ್ ಮಿಶ್ರಾ ಅವರನ್ನು ಸೋಲಿಸಿದರು. ಈ ಗೆಲುವು ಅವರನ್ನು ಬಿಹಾರದ ಅತ್ಯಂತ ಕಿರಿಯ ಶಾಸಕಿಯನ್ನಾಗಿ ಮಾಡಿತು. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಮೈಥಿಲಿ ಅವರು ಈಗಾಗಲೇ ಗಾಯನದ ಮೂಲಕ ಪ್ರಸಿದ್ಧರಾಗಿದ್ದರು. ವರು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಪ್ರದಾಯಗಳಲ್ಲಿ ತರಬೇತಿ ಪಡೆದರು ಮತ್ತು ಭಕ್ತಿ ಮತ್ತು ಚಲನಚಿತ್ರ ಗೀತೆಗಳ ಜೊತೆಗೆ ಮೈಥಿಲಿ ಮತ್ತು ಭೋಜ್‌ಪುರಿಯಲ್ಲಿ ಪ್ರದರ್ಶನವನ್ನು ಸಹ ನೀಡಿದ್ದಾರೆ. ಮೈಥಿಲಿ ಮೊದಲು 2017 ರಲ್ಲಿ ರೈಸಿಂಗ್ ಸ್ಟಾರ್ ಇಂಡಿಯಾ ಎಂಬ ಹಾಡುವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಾಗ ಸಾರ್ವಜನಿಕ ಗಮನ ಸೆಳೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+