BBK 12: ಮೂರೇ ವಾರಕ್ಕೆ ಬಿಗ್‌ ಬಾಸ್‌ ಫಿನಾಲೆ, ಏನಿದು ಹೊಸ ಟ್ವಿಸ್ಟ್‌?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಈಗಷ್ಟೇ ಶುರುವಾಗಿದೆ. ಬಂದ ಒಂದೇ ದಿನಕ್ಕೆ ಒಬ್ಬರು ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಹಿಂದಿನ ಪ್ರತಿ ಸೀಸನ್‌ನಲ್ಲೂ ಬಿಗ್‌ ಬಾಸ್‌ ಒಂದೇ ರೀತಿಯಲ್ಲಿ ನಡೆದುಕೊಂಡು ಬಂದಿತ್ತು. ಆದರೆ ಈ ಸೀಸನ್‌ನಲ್ಲಿ ಎಲ್ಲವೂ ಬದಲಾಗಿದೆ. ಮನೆಗೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಎಲಿಮಿನೇಷನ್‌ ಶಾಕ್‌ ಕೊಟ್ಟಿದ್ದ ಬಿಗ್‌ಬಾಸ್‌, ಆರಂಭದಲ್ಲೇ ಸ್ಪರ್ಧಿಗಳಿಗೆ ದೊಡ್ಡ ಶಾಕ್‌ ನೀಡಿದೆ. ಪ್ರತಿ ಬಾರಿಯೂ ನೂರು ದಿನ ಆಟದ ನಂತರ ನಡೆಯುತ್ತಿದ್ದ ಫಿನಾಲೆ ಈ ಸಲ ಮೂರೇ ವಾರಕ್ಕೆ ನಡೆಯಲಿದೆ ಎಂದು ಹೇಳಿದೆ.

ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಸೇರಿ ಎರಡು ದಿನಗಳಷ್ಟೇ ಕಳೆದಿವೆ. ದಿನಕ್ಕೊಂದು ಶಾಕಿಂಗ್‌ ಟ್ವಿಸ್ಟ್‌ಗಳನ್ನು ಈ ಬಾರಿ ನೀಡಲಾಗುತ್ತಿದೆ. ಫಿನಾಲೆ ಇರೋದು ಇನ್ನೂ ದೂರ, ವಾರಕ್ಕೆ ಒಬ್ಬರಷ್ಟೇ ಎಲಿಮಿನೇಷನ್‌ ಆಗೋದು ಅಂತ ನೆಮ್ಮದಿಯಾಗಿದ್ದ ಸ್ಪರ್ಧಿಗಳನ್ನು ಬಿಗ್‌ಬಾಸ್‌ ನಿದ್ದೆಗೆಡುವಂತೆ ಮಾಡಿದೆ. ಈ ಸೀಸನ್‌ನಲ್ಲಿ ದೊಡ್ಡ ಟ್ವಿಸ್ಟ್‌ ಎಂದು ಹೇಳಿರುವ ಬಿಗ್‌ ಬಾಸ್‌, ಈ ಸೀಸನ್‌ ಯಾರು ಗೆಲ್ತಾರೆ ಅಂತ ನೋಡೋದಕ್ಕೆ ನೂರು ದಿನ ಕಾಯಬೇಕಿಲ್ಲ. ಮೂರನೇ ವಾರದಲ್ಲೇ ಎರಡು ಫಿನಾಲೆ ನಡೆಯಲಿವೆ ಎಂದು ಹೇಳಿದ್ದಾರೆ.

bigg-boss-kannada-12-shocking-twist-finale-in-just-3-weeks-new-rules-stun-contestants

ಬಿಗ್‌ಬಾಸ್‌ ಮಾತು ಕೇಳಿ ಸ್ಪರ್ಧಿಗಳೆಲ್ಲರೂ ಶಾಕ್‌ನಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡಿದ್ದಾರೆ. "ನಿಮ್ಮಲ್ಲಿ ಯಾರು ಯಾವಾಗ ಬೇಕಾದರೂ ಹೋಗಬಹುದು. ಒಬ್ಬೊಬ್ಬರಾಗಿ ಅಥವಾ ಗುಂಪು ಗುಂಪಾಗಿಯೂ ಹೋಗಬಹುದು ಎಂದು ಬಿಗ್‌ಬಾಸ್‌ ಹೇಳಿದ್ದು, ಎಲಿಮಿನೇಷನ್‌ ಭಯದಿಂದ ಮುಕ್ತರಾಗಬೇಕು ಅಂದ್ರೆ ಒಂದೇ ದಾರಿ ಎಂದು ಬಿಗ್‌ ಬಾಸ್‌ ಮತ್ತೊಂದು ಟ್ವಿಸ್ಟ್‌ ನೀಡಿದ್ದಾರೆ.

ಜಂಟಿಗಳ ತಪ್ಪಿಗೆ ಒಂಟಿಗಳಿಗೆ ಶಿಕ್ಷೆ

ಈ ಸೀಸನ್‌ಗೆ ಸ್ಪರ್ಧಿಗಳನ್ನು ಒಂಟಿ ಹಾಗೂ ಜಂಟಿಗಳಾಗಿ ಆಯ್ಕೆ ಮಾಡಲಾಗಿದೆ. ಕೆಲವರು ಜೋಡಿಯಾಗಿ ಟಾಸ್ಕ್‌ ಆಡಬೇಕಿದ್ದು, ಇನ್ನೂ ಕೆಲವರಿಗೆ ಒಂಟಿಯಾಗಿ ಆಟ ಮುಂದುವರಿಸಲು ಹೇಳಲಾಗಿದೆ. ಆದರೆ ಕೆಲ ಜಂಟಿಗಳು ರೂಲ್ಸ್‌ ಬ್ರೇಕ್‌ ಮಾಡಿದ್ದರಿಂದ ಒಂಟಿಗಳಿಗೆ ಶಿಕ್ಷೆ ಕೊಡಲಾಗಿದೆ.

ಜಂಟಿಗಳಿಗೆ ಮಲಗುವ ಹಾಗೂ ಶೌಚಾಲಯ ಬಳಸುವ ಸಮಯವನ್ನು ಹೊರತುಪಡಿಸಿ, ಉಳಿದೆಲ್ಲ ಸಮಯ ಜಂಟಿಯಾಗಿಯೇ ಇರಬೇಕು ಎಂಬ ಸೂಚನೆ ನೀಡಲಾಗಿತ್ತು. ತಪ್ಪು ಮಾಡಿದ್ದು ಜಂಟಿಗಳೇ ಆದ್ರೂ ಇದಕ್ಕೆ ಒಂಟಿಗಳು ಬೆಲೆ ತೆರಬೇಕು ಎಂದು ಬಿಗ್‌ಬಾಸ್‌ ಹೇಳಿದ್ದಾರೆ. ನಿನ್ನೆ ರಾತ್ರಿ ನೀವು ಕಳಿಸಿದ್ದ ದಿನಸಿ ಸಾಮಗ್ರಿಗಳ ಪೈಕಿ ಹನ್ನೊಂದು ದಿನಸಿ ಸಾಮಗ್ರಿಗಳನ್ನು ಈ ಕೂಡಲೇ ಸ್ಟೋರ್‌ ರೂಂಗೆ ತಂದಿಡಬೇಕು ಎಂದು ಸೂಚಿಸಲಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಸೀಸನ್‌ಗಳಲ್ಲಿ ಸ್ಪರ್ಧಿಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ಆದರೆ ಈ ಬಾರಿ ದಿನಕ್ಕೊಂದು ಟ್ವಿಸ್ಟ್‌ ನೀಡಲಾಗುತ್ತಿದೆ. ಮೂರನೇ ವಾರಕ್ಕೆ ಎರಡು ಫಿನಾಲೆ ನಡೆಯಲಿದ್ದು, ಈ ವೇಳೆಗೆ ಹಲವು ಸ್ಪರ್ಧಿಗಳು ಎಲಿಮಿನೇಟ್‌ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಸ್ಪರ್ಧಿಗಳಿಗೆ ಆರಂಭದಲ್ಲೇ ಎಲಿಮಿನೇಷನ್‌ ಭಯದಲ್ಲಿ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+