Chandan Shetty: ಎರಡನೇ ಮದುವೆಗೆ ರೆಡಿ ಎಂದ ಚಂದನ್ ಶೆಟ್ಟಿ, ಹುಡುಗಿ ಯಾರು?
ಬಿಗ್‌ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿ ಅವರು ಈಗಷ್ಟೇ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ನಿವೇದಿತಾ ಗೌಡ ಅವರನ್ನು ಮದುವೆಯಾಗಿದ್ದ ಚಂದನ್, ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ ನೀಡಿ ಶಾಕ್ ಕೊಟ್ಟಿದ್ದರು. ಬಳಿಕ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಂದನ್ ಅವರು ಸದ್ಯಕ್ಕೆ ಸಿಂಗಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಸಂದರ್ಶನದಲ್ಲಿ ತಮ್ಮ ಡಿವೋರ್ಸ್‌ಗೆ ಕಾರಣ ಕೂಡ ಬಿಚ್ಚಿಟ್ಟಿದ್ದರು. ಇನ್ನು ಎರಡನೇ ಮದುವೆ ಬಗ್ಗೆಯೂ ಚಂದನ್ ಶೆಟ್ಟಿ ಅವರು ಮಾತನಾಡಿದ್ದಾರೆ. ಅದು ಯಾವಾಗ? ಎಂದೂ ತಿಳಿಸಿದ್ದಾರೆ.
ಮೊದಲಿಗೆ ನಿವೇದಿತಾಗೆ ಡಿವೋರ್ಸ್ ಕೊಟ್ಟಾಗ ಪರಿಸ್ಥಿತಿ ಹೇಗಿತ್ತು? ಆಗ ಮನೆಯವರು ಯಾವ ರೀತಿ ರಿಯಾಕ್ಟ್ ಮಾಡಿದರು ಎಂಬುದನ್ನೂ ಚಂದನ್ ಶೆಟ್ಟಿ ರಿವೀಲ್ ಮಾಡಿದ್ದಾರೆ. 'ನಮ್ಮಮ್ಮ ಈಗಲೂ ಸಹ ಅದೇ ವಿಚಾರವಾಗಿ ನೋವಲ್ಲಿದ್ದಾರೆ. ಇತ್ತೀಚೆಗೆ ಯಾವುದೋ ಮದುವೆ ಹೋಗಿ ಬಂದು ಫೋನ್ ಮಾಡಿ ಅಳುತ್ತಿದ್ರು. ಹೋದ ಕಡೆ ಎಲ್ಲ ಅದೇ ವಿಚಾರ ಕೇಳ್ತಾರೆ ನೋಡಪ್ಪ, ನಿಮ್ಮ ಮಗನಿಗೆ ಈ ರೀತಿ ಆಗಬಾರದಿತ್ತು ಅಂತಾರೆ. ಒಳ್ಳೆಯ ಹುಡುಗ, ಇನ್ನೊಂದು ಮದುವೆ ಮಾಡಿಸಿ ಅಂತಿದ್ದಾರೆ ಎಂದು ಅಮ್ಮ ನನ್ನ ಬಳಿ ಹೇಳಿಕೊಂಡ್ರು' ಎಂದು ಬೆಂಗಳೂರು ಬಝ್ ಪಾಡ್‌ಕಾಸ್ಟ್‌ನಲ್ಲಿ ಚಂದನ್ ಮಾತನಾಡಿದ್ದಾರೆ.

'ನೀನೇನು ಮತ್ತೆ ಮದುವೆನೇ ಆಗಲ್ಲ ಅಂತೀಯಾ? ಎಂದು ಅಮ್ಮ ನನ್ನ ಕೇಳಿದ್ರು. ಅಮ್ಮ, ನಾನೇನು ಮದುವೆ ಆಗಲ್ಲ ಎಂದು ಹೇಳ್ತಿಲ್ಲ, ನನಗೆ ಒಳ್ಳೆಯ ಹುಡುಗಿ ಸಿಗಬೇಕು, ಮುಖ್ಯವಾಗಿ ನನಗೆ ಇವಳು ಸರಿಯಾದ ಪಾರ್ಟ್‌ನರ್ ಅಂತ ಅನಿಸಬೇಕು. ಆಗ ಖಂಡಿತವಾಗಿ ಮದುವೆ ಆಗುತ್ತೇನೆ ಎಂದು ಹೇಳಿದ್ದೀನಿ. ಈಗಾಗಲೇ ಒಂದು ಸಲ ಈ ರೀತಿ ಆಗೋಗಿದೆ. ಹಾಗಾಗಿ ಎರಡನೇ ಸಲವೂ ನಾನು ಚಾನ್ಸ್ ತಗೋಳೋಕೆ ಇಷ್ಟಪಡೋದಿಲ್ಲ' ಎಂದು ಚಂದನ್ ಹೇಳಿದ್ದಾರೆ.
'ನಮ್ಮನ್ನ ಅರ್ಥ ಮಾಡಿಕೊಂಡು, ನಮ್ಮ ಜೊತೆ ಇರೋರನ್ನ ಮದುವೆಯಾದರೆ ಇನ್ನೂ ಜೀವನಪೂರ್ತಿ ಕಳೆಯಬಹುದು ಎಂದು ಅವರಿಗೆ ಹೇಳುತ್ತಿರುತ್ತೇನೆ. ಪೇರೆಂಟ್ಸ್ ಯಾವಾಗಲೂ ಹಾಗೇನೇ, ಅವರಿಗೆ ಆ ನೋವು ಇದ್ದೇ ಇರುತ್ತೆ. ಏನ್ ಆಗಲ್ಲಮ್ಮ ಎಲ್ಲ ಒಳ್ಳೇದಾಗುತ್ತೆ ಎಂದು ಅವರಿಗೆ ಸಮಾಧಾನ ಮಾಡುತ್ತಿರುತ್ತೇನೆ. ಯಾರಾದ್ರೂ ಸಿಕ್ತಾರೆ ಇರಮ್ಮ, ಬರ್ತಾರೆ ಎಂದು ಅಮ್ಮನಿಗೆ ಹೇಳುತ್ತಿರುತ್ತೇನೆ. ಹಾಗಾಗಿ ಮುಂದೆ ನನಗೆ ಯಾರಾದರೂ ಈ ಹುಡುಗಿ ನನಗೆ ಒಳ್ಳೆಯ ಪಾರ್ಟ್‌ನರ್ ಅನಿಸಿದ್ರೆ ಖಂಡಿತವಾಗಿ ಮದುವೆಯಾಗ್ತೀನಿ' ಎಂದು ಚಂದನ್ ಶೆಟ್ಟಿ ಕ್ಲಾರಿಟಿ ಕೊಟ್ಟಿದ್ದಾರೆ.
ಚಂದನ್ ಮುಂದಿನ ಕನಸೇನು?
'ಈಗ ತಾನೇ ಸಿನಿಮಾ ನಟನಾಗಿ ಕಾಲಿಟ್ಟಿದ್ದೇನೆ. ಮುಂದೆ ಹೇಗೆ ಎನ್ನುವ ಭಯ ಕೂಡ ಇದೆ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ದೊಡ್ಡ ಡ್ರೀಮ್ ಕೂಡ ಇದೆ. ಅದಕ್ಕಾಗಿ 15 ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ದೀನಿ. ಅಲ್ಲಿಗೆ ನಾನು ಹೋಗಲೇಬೇಕು. ವರ್ಲ್ಡ್ ಮಾರ್ಕೆಟ್ ತುಂಬಾ ಕಷ್ಟಕರವಾದದ್ದು, ಈಗೆಲ್ಲ ಎಲ್ಲೆಲ್ಲೂ ಪ್ರತಿಭೆಗಳಿದ್ದಾರೆ. ಅವರ ಮಧ್ಯೆ ನಾವು ಗುರುತಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ' ಎಂದೂ ತಮ್ಮ ಕನಸಿನ ಬಗ್ಗೆ ಚಂದನ್ ಹೇಳಿಕೊಂಡಿದ್ದಾರೆ.












Click it and Unblock the Notifications