ಬಿಗ್ ಬಾಸ್ ತುಕಾಲಿ ಸಂತುಗೆ ಹೆಂಡತಿ ಅಲ್ಲದೇ ಗರ್ಲ್‌ಫ್ರೆಂಡ್ ಇದಾರಾ..?
ಬಿಗ್ ಬಾಸ್ ಮನೆಗೆ ಮನೆಯಲ್ಲಿದ್ದ ಬಟ್ಟೆಗಳನ್ನೇ ಹೋಗುವಾಗ ತುಂಬಿಕೊಂಡು ಹೋಗಿದ್ದೆ. ಮುಂದಿನ ವಾರದಿಂದ ಸಂತು ಬಟ್ಟೆ ಕಳುಹಿಸಲು ಶುರು ಮಾಡಿದರು. ಮೊದಲ ದಿನ ಹೋಗುವಾಗ ನನಗೆ ಅಂತಾ ನಾನು ಏನೂ ತೆಗೆದುಕೊಳ್ಳಲಿಲ್ಲ. ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು ಎಂದು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಮಾನಸ ತುಕಾಲಿ ಸಂತೋಷ್ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು. ಸಂತು ಬಟ್ಟೆ ಚಪ್ಪಲಿ ಕಳುಹಿಸಿದಾಗ ನಾನೇ ಅಲ್ಲಿ ಬೈಯುತ್ತಿದೆ. ಬರುವ ಸಂಬಳವನ್ನೆಲ್ಲಾ ಇದಕ್ಕೆ ಖುರ್ಚು ಮಾಡುತ್ತಿದ್ದಾರೇನೋ, ಹೊರಗಡೆ ಹೋದ ಮೇಲೆ ಎಲ್ಲಾ ದುಡ್ಡು ಖಾಲಿ ಎನ್ನುತ್ತಾರೇನೋ ಎನ್ನುವ ಭಯ ಇತ್ತು. ಅಷ್ಟೊಂದು ಬಟ್ಟೆ ಕಳುಹಿಸಿದ್ದರು. ಇರುವ ಬಟ್ಟೆಗಳೇ ಸಾಕು ಅನಿಸುತ್ತಿತ್ತು.

ಸಂತು ಬಟ್ಟೆ ಕಳುಹಿಸುತ್ತರುವುದನ್ನು ನೋಡಿ ಖುಷಿ ಕೂಡ ಆಗಿತ್ತು. ಬಟ್ಟೆ ಮಾತ್ರ ಅಲ್ಲ..ಸ್ಟಿಕರ್‌ಯಿಂದ ಹಿಡಿದು ಕ್ಲಿಪ್ ತನಕನೂ ಸಂತೂನೇ ಕಳುಹಿಸುತ್ತಿದ್ದರು. ಹೊರಗಡೆ ಇದ್ದಾಗ ಸಂತು ಅಷ್ಟೊಂದು ಕೊಡಿಸುತ್ತಿರಲಿಲ್ಲ. ಆದರೆ ಒಳಗಡೆ ಹೋದ ಮೇಲೆ ಬಹುಶಃ ಇನ್ನೊಂದಿಷ್ಟು ದಿನ ಇದ್ದು ಬರಲಿ ಸಿಂಗಲ್ ಆಗಿ ಆರಾಮಾಗಿದಿನಿ ಅಂತಾ ಖುಷಿಯಿಂದ ಕಳುಹಿಸುತ್ತರೆನೋ ಎಂದು ಮಾನಸ ತುಕಾಲಿ ಸಂತೋಷ್ ಹೇಳಿದ್ದಾರೆ.
ಸಿಂಗಲ್ ಅಂದರೆ ಏನು ತುಕಾಲಿ ಸಂತೋಷ್ ಅವರಿಗೆ ಬೇರೆ ಗರ್ಲ್‌ಫ್ರೆಂಡ್ ಇದ್ದಾರಾ ಅಂತಾ ಅನುಮಾನ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾನಸ, ಅಂತಹ ಅನುಮಾನವೇ ಇಲ್ಲ. ಆ ಮುಖಕ್ಕೆ ನಾನು ಇರುವುದೇ ಹೆಚ್ಚು, ಇನ್ನೊಂದು ಗರ್ಲ್‌ಫ್ರೆಂಡ್‌ನಾ ಹೇಗೆ ಮೈಂಟೆನ್ ಮಾಡುತ್ತಾರೆ. ಅದು ನನಗೆ ಗೊತ್ತು ಅವರ ಮೇಲೆ ಅನುಮಾನ ಏನು ಇಲ್ಲ ಎಂದು ಮಾನಸ ಬಹಳ ಸ್ಪಷ್ಟವಾಗಿ ಹಾಗೂ ನೇರವಾಗಿ ವಿಜಯವಾಣಿ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದರೆ ಆರಾಮಾಗಿ ತಿರುಗಿಕೊಂಡು ಇರಬಹುದು ಅಂತಾ ಎಂದುಕೊಂಡಿರಬಹು. ಇನ್ನು ಹುಡುಗಿ ಇರುವುದೆಲ್ಲಾ ಸುಳ್ಳು. ಅದು ನನಗೆ ಗೊತ್ತು. ನನಗೆ ಅವರು ಬೇರೆಯವರ ಜೊತೆ ಮಾತನಾಡುವಾಗಲೆಲ್ಲಾ ಹೊಟ್ಟೆಕಿಚ್ಚು ಅಂತೆಲ್ಲಾ ಎಂದೂ ಆಗಿಲ್ಲ. ನಾನು ಸಂತುನಾ ಆ ರೀತಿ ಎಂದು ನೋಡೇ ಇಲ್ಲ. ನಾನೇ ಅವರನ್ನು ರೇಗಿಸುತ್ತೇನೆ. ಇಂತಹ ವಿಚಾರಗಳನ್ನು ನಾವು ತಲೆಗೆ ಹಾಕಿಕೊಳ್ಳುವುದೇ ಇಲ್ಲ ಎಂದು ಹೇಳಿದರು.












Click it and Unblock the Notifications