Bhavya Gowda: ನಿರಂಜನ್ ದೇಶಪಾಂಡೆಗೆ ಭವ್ಯ ಗೌಡ ಅಕ್ಕ ಖಡಕ್ ತಿರುಗೇಟು
ಕಳೆದ ವಾರ ಬಿಗ್ಬಾಸ್ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭವ್ಯಾ ಗೌಡ ಮೋಸ ಮಾಡಿರುವುದು ಜಗತ್ ಜಾಹೀರಾಗಿದೆ. ಈ ಟಾಸ್ಕ್ ಬಳಿಕ ಭವ್ಯಾ ಗೌಡ ಬಗ್ಗೆ ಅನೇಕ ಟೀಕೆಗಳು ಆರಂಭವಾಗಿದೆ. ಹೀಗಾಗಿ ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ದಿಢೀರ್ ಲೈವ್ ಬಂದ ಭವ್ಯ ಸಹೋದರಿಯರು ತಮ್ಮ ತಂಗಿ ಪರವಾಗಿ ಮಾತನಾಡಿದ್ದಾರೆ. ಈ ವೇಳೆ ' ಬಿಗ್ ಬಾಸ್ ನಲ್ಲಿ ಭವ್ಯ ಗೌಡ ಆಟ ಅವರ ಮನೆಯವರಿಗೂ ಇಷ್ಟ ಆಗ್ತಿಲ್ಲ' ಎನ್ನುವ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
'ನಾವು ಆ ವ್ಯಕ್ತಿಯ ಹೆಸರು ಹೇಳಲು ಇಷ್ಟಪಡುವುದಿಲ್ಲ. ಅದನ್ನು ಇನ್ನೊಂದು ಸ್ಟೋರಿ ಮಾಡುತ್ತಾರೆ ಅದು ನಮಗೆ ಬೇಡ. ನಾವೆಲ್ಲಾ ತುಂಬಾ ಸಾಮಾನ್ಯ ಜನರು. ನಮಗೂ ಭಾವನೆಗಳಿವೆ. ಯಾರೋ ಎಲ್ಲಿಯೂ ಕುಳಿತುಕೊಂಡು ಮಾತನಾಡಿದ ತಕ್ಷಣ ನಾವು ವಾಪಸ್ ಮಾತನಾಡಲು ಆಗುವುದಿಲ್ಲ ಅಂತಲ್ಲಾ, ಖಂಡಿತಾ ನಾನು ಕೂಡ ಮಾತನಾಡಬಹುದು. ಆದರೆ ನಾವು ತುಂಬಾ ತಾಳ್ಮೆಯಿಂದ ಇರೋಣ'.

'ಮತ್ತೆ ನಾವು ಮಾತನಾಡಿದರೆ ಅವಳು ಆಚೆ ಬಂದಾಗ ಬೇಜಾರು ಮಾಡಿಕೊಳ್ಳುತ್ತಾಳೆ. ಆ ವ್ಯಕ್ತಿ ಫ್ಯಾಮಿಲಿ ಅವರಿಗೆ ಇಷ್ಟವಾಗುತ್ತಿಲ್ಲ ಆಡವಾಡುತ್ತಿರುವುದು, ಕುಟುಂಬದವರ ಕಡೆಯಿಂದನೇ ಕರೆ ಬಂದಿತ್ತು ಎಂದು ಹೇಳಿವುದು ತುಂಬಾ ತಪ್ಪು. ನಿಮಗೆ ಕಾಲ್ ಮಾಡಲೇಬೇಕು, ನಿಮ್ಮ ಕಡೆಯಿಂದ ಸಲಹೆ ಬೇಕೇಬೇಕು ಅಂತಾ ಕರೆ ಮಾಡಿದಲ್ಲ.
ನಮ್ಮ ಕಡೆಯಿಂದ ಕಾಲ್ ಹೋಗಿರುವುದು ಯಾಕೆಂದರೆ ಒಳ್ಳೆ ಫ್ರೆಂಡ್ ಆಗಿ ಅವರ ಕಡೆಯಿಂದ ಒಳ್ಳೆ ಸಲಹೆ ಇದ್ದಾಗ ತಗೋಂಡಿದ್ದೇನೆ ಬಿಟ್ಟರೆ, ನನ್ನ ಸ್ವಂತ ತಂಗಿಯನ್ನು ಅಷ್ಟೆಲ್ಲಾ ಕೆಳಗೆ ಹಾಕಿ ಮಾತನಾಡುವ ಅವಶ್ಯಕತೆ ನನಗೆ ಇಲ್ಲ' ಎಂದು ದಿವ್ಯಾ ಗೌಡ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ ಹೇಳಿದ್ದೇನು?
ನಿರಂಜನ್ ದೇಶಪಾಂಡೆ ತಮ್ಮ ಮಿಸ್ಟರ್ ನಿರಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ತಿಂಗಳ ಹಿಂದೆ ಮಾತನಾಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ 'ಭವ್ಯ ನನಗೆ ತಂಗಿಯ ರೀತಿ. ಅವರ ಮನೆಯವರೇ ನನಗೆ ಕಾಲ್ ಮಾಡಿದ್ದರು. ಆಗ ನಾನು ನೇರವಾಗಿ ಕೇಳದೆ ನಿಮಗೆ ಬಿಗ್ ಬಾಸ್ ಮನೆಯಲ್ಲಿ ಭವ್ಯ ಆಟ ಹೇಗೆ ಅನಿಸುತ್ತಿದೆ ಹೇಳಿ ಅಂತಾ ಕೇಳಿದೆ.
ಅದಕ್ಕೂ ಮುಂಚೆ ಅವರು ನನಗೆ ಯಾಕೆ ಕಾಲ್ ಮಾಡಿದ್ದರು ಅಂದರೆ, ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಮನೆಯವರು ಫೋನ್ ಮಾಡುವುದು ಇತ್ತಲ್ಲಾ ಆಗ ಭವ್ಯ ಮನೆಯವರು ನಿರಂಜನ್ ದೇಶಪಾಂಡೆ ಅವರ ಕೈಯಲ್ಲಿ ಕಾಲ್ ಮಾಡಿಸಿ ಬುದ್ಧಿ ಹೇಳಿ ಅಂತಾ ಹೇಳಿದ್ದರಂತೆ. ಅದನ್ನು ಹೇಳೋಕೆ ಫೋನ್ ಮಾಡಿದ್ದರು'.
'ನಾನು ಅವರ ಮನೆಗೆ ಅಷ್ಟು ಕ್ಲೋಸ್ ಇದ್ದೇನೆ ಹೀಗಾಗಿ ಫೋನ್ ಮಾಡಿದ್ದರು. ಆಮೇಲೆ ಭವ್ಯ ಬಗ್ಗೆ ಮಾತನಾಡಿದರು. ಅವಳು ಹೊರಗಡೆ ಇರುವುದೇ ಬೇರೆ. ಬಿಗ್ ಬಾಸ್ ಮನೆಯೊಳಗೆ ಯಾಕೆ ಹೀಗಿದ್ದಾಳೋ ಗೊತ್ತಿಲ್ಲ. ಹೋಗಿ ಗುಂಪಿನಲ್ಲಿ ಸೇರಿಕೊಂಡು ಬಿಟ್ಟಿದ್ದಾಳೆ. ಭವ್ಯ ಬಿಗ್ ಬಾಸ್ ಸ್ಪರ್ಧಿಗಳಿಗಿಂತ ಜಾಸ್ತಿ ಅವರ ಮನೆಯವರಿಗೆ ಇಷ್ಟ ಆಗ್ತಿಲ್ಲ' ಎಂದು ನಿರಂಜನ್ ದೇಶಪಾಂಡೆ ಹೇಳಿದ್ದರು.












Click it and Unblock the Notifications