ಬಾಲಿವುಡ್‌ ಕಸ, ಟಾಕ್ಸಿಕ್‌, ಫೇಕ್‌: ಇರ್ಫಾನ್ ಖಾನ್ ಪುತ್ರನ ವಿಡಿಯೋ ವೈರಲ್‌, ಬಳಿಕ ಡಿಲೀಟ್

ಬಾಲಿವುಡ್ ಖ್ಯಾತ ಹಿರಿಯ ನಟ ದಿವಂಗತ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್‌ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ. ವಿಡಿಯೋದಲ್ಲಿ ಬಾಲಿವುಡ್‌ನ ಮತ್ತೊಂದು ಮುಖದ ಬಗ್ಗೆ ಬಾಬಿಲ್‌ ಗಂಭೀರ ಆರೋಪ ಮಾಡಿದ್ದು, ಸ್ಟಾರ್‌ ಕಿಡ್ಸ್‌ ಎಂದೇ ಕರೆಸಿಕೊಂಡಿರುವ ಅರ್ಜುನ್ ಕಪೂರ್, ಅನನ್ಯ ಪಾಂಡೆ, ಸಿದ್ಧಾಂತ್ ಚತುರ್ವೇದಿ, ಆದರ್ಶ್ ಗೌರವ್ ಮತ್ತು ಶನಯಾ ಕಪೂರ್ ಸೇರಿ ಅನೇಕ ಬಾಲಿವುಡ್ ನಟ, ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ಅನ್ನು ಬಾಬಿಲ್ ಕಸ ಎಂದೂ ಕರೆದಿದ್ದಾರೆ. ಕೆಲ ನಟರನ್ನು ಫೇಕ್‌ ಎಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಡಿಲೀಟ್‌ ಮಾಡಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಬಿಲ್ ಈಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಅಳಿಸಿರುವುದು ಚರ್ಚೆ ಹುಟ್ಟುಹಾಕಿದೆ.

Babil Khan Viral Video Criticizing Bollywood Gets Deleted Soon After

ತನ್ನ ವಿಡಿಯೋದಲ್ಲಿ ಬಾಬಿಲ್‌ ಬಾಲಿವುಡ್ ಹಾಗೂ ಕೆಲ ನಟರ ಬಗ್ಗೆ ಶಾಕಿಂಗ್‌ ಕಾಮೆಂಟ್‌ ಮಾಡಿದ್ದರು. ಬಾಲಿವುಡ್ ನಾನು ಇದುವರೆಗೆ ಭಾಗವಾಗಿರುವ ಅತ್ಯಂತ ನಕಲಿ ಇಂಡಸ್ಟ್ರಿ. ಆದರೆ ಬಾಲಿವುಡ್ ಉತ್ತಮವಾಗಬೇಕೆಂದು ಬಯಸುವ ಜನರು ಕಡಿಮೆ. ನಾನು ನಿಮಗೆ ಇನ್ನೂ ಹೆಚ್ಚಿನದನ್ನು ತೋರಿಸಬೇಕಾಗಿದೆ. ನಾನು ಹೇಳೋಕೆ ಹೊರಟಿದ್ದು ಇಷ್ಟೇ, ಬಾಲಿವುಡ್‌ನಲ್ಲಿ ಕೆಟ್ಟ ಜನರಿದ್ದಾರೆ. ಬಾಲಿವುಡ್ ತುಂಬಾ ವಿಚಿತ್ರ ಎಂದೆಲ್ಲ ಹೇಳಿದ್ದರು. ಈ ಬಗ್ಗೆ ಚರ್ಚೆ ಜೋರಾಗಿರುವ ನಡುವೆಯೇ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಇದ್ದಕ್ಕಿದ್ದಂತೆ ಅಳಿಸಿಹಾಕುವ ಮೂಲಕ ಎಲ್ಲರಿಗೂ ಅನುಮಾನ ಮೂಡಿಸಿದ್ದಾರೆ.

ಬಾಬಿಲ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಅವರು ಕಣ್ಣೀರಿಡುತ್ತಾ ಬಾಲಿವುಡ್ ಹಾಗೂ ಅನೇಕ ಕಲಾವಿದರನ್ನು ನಕಲಿ ಎಂದು ಕರೆದಿದ್ದರು. ಈಗ ಅವರು ತಮ್ಮ ವಿಡಿಯೋವನ್ನು ಅಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಬಾಬಿಲ್ ಅವರ ವೈರಲ್ ವಿಡಿಯೋ ಬಗ್ಗೆ ಯಾವುದೇ ಸತ್ಯಾಸತ್ಯತೆ ಇಲ್ಲ. ಈ ವಿಡಿಯೋ ನಿಜವೋ ಅಥವಾ ಎಐನಿಂದ ಮಾಡಿರುವುದು ಎಂದೂ ಕೆಲವರು ಹೇಳುತ್ತಿದ್ದಾರೆ.

Babil Khan Viral Video Criticizing Bollywood Gets Deleted Soon After

ಕಳೆದ ಕೆಲವು ವರ್ಷಗಳಿಂದ ಬಾಬಿಲ್ ಖಾನ್ ಅವರ ಕೆಲಸಕ್ಕಾಗಿ ಹಾಗೂ ಅವರ ಮಾನಸಿಕ ಆರೋಗ್ಯ ಪ್ರಯಾಣದ ಬಗ್ಗೆ ಅವರ ಮುಕ್ತತೆಗಾಗಿ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಾರೆ. ಇತರರಂತೆ, ಬಾಬಿಲ್‌ಗೆ ಕಷ್ಟದ ದಿನಗಳನ್ನು ಕಳೆಯಲು ಅವಕಾಶವಿದೆ. ಅವರು ಸುರಕ್ಷಿತರಾಗಿದ್ದಾರೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಅವರ ಎಲ್ಲಾ ಹಿತೈಷಿಗಳಿಗೆ ನಾವು ಭರವಸೆ ನೀಡಲು ಬಯಸುತ್ತೇವೆ. ಬಾಬಿಲ್ ಅವರ ವೀಡಿಯೊವನ್ನು ವ್ಯಾಪಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅವರು ತಮ್ಮ ಸಹ ನಟರ ಹೆಸರುಗಳನ್ನು ಉಲ್ಲೇಖಿಸಿದ್ದರಿಂದ ವೀಡಿಯೊವನ್ನು ತೆಗೆದುಹಾಕಲಾಗಿದೆ. ಅವರ ವೀಡಿಯೊದಲ್ಲಿ ಅವರು ಬಾಲಿವುಡ್‌ನ ಟಾಕ್ಸಿಕ್‌ ಬಗ್ಗೆ ಉಲ್ಲೇಖಿಸುತ್ತಿದ್ದರು ಎಂದು ವರದಿಯಾಗಿದೆ. ಆದರೆ ಬಾಬಿಲ್ ವಾಸ್ತವವಾಗಿ ತನ್ನ ಗೆಳೆಯರ ಯಶಸ್ವಿ ವೃತ್ತಿಜೀವನಕ್ಕೆ ಮನ್ನಣೆ ನೀಡುತ್ತಿದ್ದರು ಎಂದು ಸ್ಪಷ್ಟನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+