Aparna: ಮಸಣದ ಹೂವಿಂದ ಮಜಾ ಟಾಕೀಸ್‌ವರೆಗೆ ಅಪರ್ಣ ಎನ್ನುವ ಅಪ್ಪಟ ಕನ್ನಡತಿಯ ಜೀವನ ಪಯಣ

ಬೆಂಗಳೂರಿಗೆ ನೀವು ಹೊಸಬರು ಆಗಿದ್ದರೆ, ಇವರು ನಿಮ್ಮ ಕೈ ಹಿಡಿದು ನಡೆಸುವ ಗೈಡ್‌.. ನಿಮಗೆ ಬೇಜಾರಾದಾಗ ನಿಮ್ಮನ್ನು ನಕ್ಕು ನಗಲಿಸುವ ಹಾಸ್ಯ ನಟಿ.. ಕಂಚಿನ ಕಂಠವನ್ನೇ ತನ್ನ ಬಂಡವಾಳವಾಗಿಸಿಕೊಂಡ ನಿರೂಪಕಿ.. ಧ್ವನಿಯ ಸಹಾಯದಿಂದಲೇ ರಾಜ್ಯದ ಕೋಟ್ಯಾಂತರ ಅಭಿಮಾನಿಗಳ ಮನದ ಗೆದ್ದ ಸಾಧಕಿ.. ಅವರೇ ಕಿರುತೆರೆಯ ಸ್ಟಾರ್‌ ನಿರೂಪಕಿ ಅಪರ್ಣಾ, ಇಂದು ತನ್ನ ಜೀವನಕ್ಕೆ ಪೂರ್ಣ ವಿರಾಮ ನೀಡಿದ್ದಾರೆ.

ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಸ್ಥಳಕ್ಕೆ ಹೋಗಲು ನೀವು ಬಳಸುವ ಮೆಟ್ರೋದಲ್ಲಿ ಬರುವ ಸುಮುಧುರ ಕಂಠದ ಒಡತಿ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಶೈಲಿಯ ಸೀರಿ, ಹಣೆಯಲ್ಲಿ ಕುಂಕುಮ, ತಲೆಗೆ ಮಲ್ಲಿಗೆ ಹೂ, ಕೈಯಲ್ಲಿ ಝಗಮಗಿಸುವ ಬಳೆಗಳು, ಎರಡು ಹೆಜ್ಜೆ ಇಟ್ಟು ಒಂದು ಬಾರಿ ಮೈಕ್‌ ಬಡೆದು ಮಾತು ಶುರು ಮಾಡಿದರೆ, ಅರಳು ಹುರಿದ ಹಾಗೆ ಕನ್ನಡ ಮಾತನಾಡುವ ಅಪ್ರತಿಮ ನಿರೂಪಕಿ.

Aparna Passes Away After Battle with Cancer Movies Achivements

ಮಸಣದ ಹೂವಿನಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅಪರ್ಣಾ ಮಜಾ ಟಾಕೀಸ್‌ವರೆಗೆ ಕನ್ನಡಿಗರ ಮನೆ ಮನಗಳನ್ನ ತುಂಬಿಕೊಂಡರು. ಅಪರ್ಣ ಅವರ ಕನ್ನಡ ನಿರೂಪಣೆ ಅದೆಷ್ಟು ಸೊಗಸು ಎಂದು ಮಾತುಗಳಲ್ಲಿ ಹೇಳುವುದು ಕೂಡ ಕಷ್ಟ.

1984ರಲ್ಲಿ ಬಣ್ಣದ ಲೋಕಕ್ಕೆ ಪ್ರವೇಶ

1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲರ ಮಸಣದ ಹೂವು ಸಿನಿಮಾದಲ್ಲಿ ನಟಿಸುವ ಮೂಲಕ ಅಪರ್ಣಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಶಿವರಾಜ್‌ಕುಮಾರ್ ಅಭಿನಯದ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಚಿತ್ರರಂಗದಲ್ಲಿ ಮಿಂಚಿದ ಬಳಿಕ ಕಿರುತೆರೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ಕನ್ನಡ ಸಾಹಿತ್ಯ, ಸಂಗೀತಕ್ಕೆ ಸಂಬಂಧಿಸಿದ ಬಹುತೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಪರ್ಣಾ ಅವರೇ ನಿರೂಪಕಿಯಾಗಿರುತ್ತಿದ್ದರೆ, ಅವರ ಸ್ಪಷ್ಟ ಕನ್ನಡವೇ ಅದಕ್ಕೆ ಕಾರಣವಾಗಿತ್ತು.

ಕೇಂದ್ರ ಸರ್ಕಾರದ 'ವಿವಿಧ ಭಾರತಿ' ಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕೆಲಸ ಮಾಡಿದ್ದರು. 1998ರಲ್ಲಿ ದೀಪಾವಳಿ ವಿಶೇಷ ಕಾರ್ಯಕ್ರಮಕ್ಕೆ ಸತತ ಎಂಟು ಗಂಟೆಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿ ದಾಖಲೆ ಮಾಡಿದ್ದರು.

ಕಿರುತೆರೆಯಲ್ಲಿ ತುಂಬಾ ಹೆಸರು ಮಾಡಿದ್ದ 'ಮೂಡಲಮನೆ' ಮತ್ತು 'ಮುಕ್ತ' ಧಾರವಾಹಿಗಳಲ್ಲಿ ಅಪರ್ಣಾ ನಟಿಸಿದ್ದರು. 2013ರಲ್ಲಿ ಕನ್ನಡದಲ್ಲಿ ಶುರುವಾದ ಬಿಗ್‌ಬಾಸ್ ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ಅವರು ಭಾಗವಹಿಸಿದ್ದರು.

2015ರಲ್ಲಿ ಆರಂಭವಾಗಿದ್ದ ಮತ್ತು ಸಖತ್ ಜನಪ್ರಿಯವಾಗಿದ್ದ ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್‌'ನಲ್ಲಿ ವರಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದ ಅಪರ್ಣಾ ಕನ್ನಡಿಗರ ಮನ ಗೆದ್ದಿದ್ದರು. 2014ರಲ್ಲಿ ಆರಂಭವಾದ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸೂಚನೆಗಳಿಗೆ ಅಪರ್ಣಾ ಧ್ವನಿಯಾಗಿದ್ದಾರೆ.

ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಅಪರ್ಣಾ ಬಳಿಕ ಖ್ಯಾತ ಬರಹಗಾರ ನಾಗರಾರ ವಸ್ತಾರೆ ಅವರನ್ನು ಮದುವೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+